Honnali Don | ಶಿವಮೊಗ್ಗದಲ್ಲೂ ಸದ್ದು ಮಾಡಿದ್ದ ಹೋರಿ ‘ಹೊನ್ನಾಳಿ ಡಾನ್’ ಇನ್ನಿಲ್ಲ, ಬೈಕ್, ಚಿನ್ನ, ಫ್ರಿಡ್ಜ್ ಗೆದ್ದಿ‌ದ್ದ ಹೋರಿ

Honnali Don Hori

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕಳೆದ ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ‘ಹೊನ್ನಾಳಿ‌ ಡಾನ್ (Honnali Don)’ ಅಸುನೀಗಿದ್ದು, ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಹೋರಿಯ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

READ | ಶಿವಮೊಗ್ಗದ ವಾಣಿಜ್ಯ ಸಂಸ್ಥೆಗಳಿಗೆ ಕ್ಯಾಮೆರಾ ಅಳವಡಿಸಲು 15 ದಿನಗಳ ಡೆಡ್‍ಲೈನ್, ಎಸ್‍ಪಿಯ 5 ಪ್ರಮುಖ ಸೂಚನೆ

ಹೊನ್ನಾಳಿ‌ ಪಟ್ಟಣದ ಸುತ್ತ ‘ಹೊನ್ನಾಳಿ ಡಾನ್’ ಎಂದೇ ಖ್ಯಾತಿ ಪಡೆದಿದ್ದ ಹೋರಿಯು ಶಿವಮೊಗ್ಗ, ಹಾವೇರಿ, ಶಿಕಾರಿಪುರ, ಸೊರಬ, ಬಸಾಪುರ ಸೇರಿದಂತೆ ಹಲವೆಡೆ ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನೂ ಗಳಿಸಿತ್ತು.
ಬೈಕ್, ಚಿನ್ನ, ಫ್ರಿಡ್ಜ್ ಗೆದ್ದಿ‌ದ್ದ ಹೋರಿ
ಹೊಳೆಮಠ ಸಮೀಪದ ನಿವಾಸಿ ಮಹೇಶ್, ಚಂದ್ರು ಸಹೋದರರಿಗೆ ಸೇರಿದ್ದ ಹೋರಿಯನ್ನು ಕಳೆದ ವರ್ಷ ಹಾವೇರಿಯಲ್ಲಿ ₹1.80 ಲಕ್ಷಕ್ಕೆ ಖರೀದಿಸಲಾಗಿತ್ತು ಎಂದು ತಿಳಿದುಬಂದಿದೆ.
ಹೋರಿ‌ಬೆದರಿಸುವ ಸ್ಪರ್ಧೆಯಲ್ಲಿ ಆಕ್ರಮಣಕಾರಿಯಾಗಿ ಮುನ್ನುಗ್ಗುತ್ತಿದ್ದ ‘ಹೊನ್ನಾಳಿ ಡಾನ್’ ಬೈಕ್, ಚಿನ್ನ, ಫ್ರಿಡ್ಜ್ ಸೇರಿದಂತೆ ಹಲವು ಬಹುಮಾನಗಳನ್ನು‌ ಗೆದ್ದಿದೆ. ಅಂತಿಮ ದರ್ಶನಕ್ಕೆ‌ ಶಾಸಕ ಎಂ.ಪಿ.ರೇಣುಕಾಚಾರ್ಯ ಸಹ ಆಗಮಿಸಿದ್ದರು.

https://suddikanaja.com/2022/12/17/16-check-post-at-shimoga/

error: Content is protected !!