ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರ ವ್ಯಾಪ್ತಿಯ ವಾಣಿಜ್ಯ ಸಂಸ್ಥೆಗಳಲ್ಲಿ ಈಗಾಗಲೇ ನೋಟಿಸ್ ನೀಡಲಾಗಿದೆ. 15 ದಿನಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸದಿದ್ದರೆ ಅಂತಹವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಸಹ ಅವಕಾಶವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ (GK Mithun Kumar) ಸೂಚನೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಗರದ ಮೊದಲ ಹಂತದಲ್ಲಿ ನಗರ ವ್ಯಾಪ್ತಿಯಲ್ಲಿ ಕ್ಯಾಮರಾ ಅಳವಡಿಕೆಯನ್ನು ಕಟ್ಟುನಿಟ್ಟಿನಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದರೆ ತನಿಖೆ ಕೈಗೊಳ್ಳಲು ಅನುಕೂಲವಾಗಲಿದೆ ಎಂದು ಹೇಳಿದರು.
READ | ಅಡಿಕೆ ಧಾರಣೆಯಲ್ಲಿ ದಿಢೀರ್ ಏರಿಕೆ, ರಾಶಿಗೆ ಬಂಪರ್ ಬೆಲೆ, 16/12/2022ರ ಧಾರಣೆ
ಎಸ್ಪಿ ಮಿಥುನ್ ಕುಮಾರ್ ನೀಡಿದ ಸೂಚನೆಗಳಿವು
- ಮನೆ, ವಾಣಿಜ್ಯ ಸಂಸ್ಥೆಗಳ ಸುತ್ತ ಕ್ಯಾಮರಾ ಅಳವಡಿಸುವ ಮೂಲಕ ಕಳ್ಳತನ ಪ್ರಕರಣಗಳನ್ನು ತಡೆಗಟ್ಟಲು ಹಾಗೂ ತನಿಖೆಗೆ ಅನುಕೂಲವಾಗುತ್ತದೆ.
- ಕಳ್ಳತನ ಪ್ರಕರಣಗಳಲ್ಲಿ ಜನರ ಉದಾಸೀನತೆಯೂ ಕಳ್ಳರಿಗೆ ಅನುಕೂಲಕರವಾಗಬಲ್ಲದು. ಹೀಗಾಗಿ, ಜನರ ಜವಾಬ್ದಾರಿಯೂ ಪ್ರಮುಖ
- ಮನೆಯ ಬಾಗಿಲು, ಬೀರುವಿಗೆ ಭದ್ರ ಬೀಗ ಹಾಕುವುದರಿಂದ ಕಳ್ಳತನವನ್ನು ತಡೆಗಟ್ಟಬಹುದು
- ನಂಬರ್ ಪ್ಲೇಟ್ ರಹಿತ ವಾಹನ ಸಂಚರಿಸುವುದು ಕಂಡುಬಂದರೆ ತಕ್ಷಣ ಪೊಲೀಸರ ಗಮನಕ್ಕೆ ತನ್ನಿ.
- ನಂಬರ್ ಪ್ಲೇಟ್ ಇಲ್ಲದೇ ಸಂಚರಿಸುವ ಮುಖಕ್ಕೆ ಮಂಕಿ ಕ್ಯಾಪ್ ಹಾಕಿಕೊಂಡು ಅನುಮಾನಾಸ್ಪದವಾಗಿ ವರ್ತಿಸುವವರು ಕಂಡುಬಂದರೆ ಪೊಲೀಸರಿಗೆ ಮಾಹಿತಿ ರವಾನಿಸಿ
https://suddikanaja.com/2022/12/15/shivamogga-town-mgr-chennai-central-bi-weekly-express-special-train-period-extension/