City Bus stops | ಇನ್ಮುಂದೆ ಕೈ ಮಾಡಿದೆಲ್ಲಲ್ಲ‌ ಸಿಟಿ ಬಸ್‌ ನಿಲ್ಲಲ್ಲ, ಶಿವಮೊಗ್ಗ ನಗರದಲ್ಲಿ 117 ಬಸ್ ನಿಲ್ದಾಣಗಳಿಗೆ ಅಧಿಸೂಚನೆ, ಎಲ್ಲೆಲ್ಲಿ‌ ನಿಲುಗಡೆ

City bus

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಇತ್ತೀಚಿಗೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ,‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಹಾಗೂ ಆರ್.ಟಿ.ಓ ಜೆ.ಪಿ.ಗಂಗಾಧರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ‌ ಬಸ್ ನಿಲ್ದಾಣದ ಬಗ್ಗೆ ಹಲವು ಆರೋಪಗಳು ಕೇಳಿಬಂದಿದ್ದವು. ಅದನ್ನು ಮನಗಂಡು ಜಿಲ್ಲಾಡಳಿತ ಅಧಿಸೂಚನೆ ಹೊರಡಿಸಿದೆ.

READ | ರೈಲು ಪ್ರಯಾಣಿಕರಿಗೆ ಶುಭ ಸುದ್ದಿ, ಶಿವಮೊಗ್ಗ- ಬೆಂಗಳೂರು ವಿಸ್ಟಾಡೋಮ್ ಏಸಿ ಬೋಗಿ ಸಂಚಾರ ಪುನರಾರಂಭ

ಶಿವಮೊಗ್ಗ ಪೂರ್ವ ಮತ್ತು ಪಶ್ಚಿಮ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸಿಟಿ ಪ್ರತಿ ದಿನ ಒಟ್ಟು 61 ಸಿಟಿ ಬಸ್‌ಗಳು ಸಂಚರಿಸುತ್ತಿರುತ್ತವೆ. ಈ ಎಲ್ಲ ಸಿಟಿ ಬಸ್‌ ಚಾಲಕರುಗಳು ಜಿಲ್ಲಾಡಳಿತದಿಂದ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದ ಬಸ್ ನಿಲ್ದಾಣಗಳಲ್ಲಿ ಬಸ್‌ಗಳನ್ನು ನಿಲ್ಲಿಸದೇ ಪ್ರಯಾಣಿಕರು ಕೈ ತೋರಿಸಿದ ಕಡೆಗಳಲ್ಲೆಲ್ಲ ರಸ್ತೆ ಮಧ್ಯದಲ್ಲೇ ಬಸ್‌ಗಳನ್ನು ನಿಲುಗಡೆ ಮಾಡುತ್ತಾ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದಾರೆ.
ಈ ರೀತಿ ವರ್ತನೆಯಿಂದ ಅವರ ಹಿಂದೆ ಬರುವ ವಾಹನಗಳು ಮುಂದೆ ಅಥವಾ ಹಿಂದ ಹೋಗಲು ಅಗದೇ ಅವರು ಅಲ್ಲಿಂದ ಹೊರಡುವವರೆಗೂ ಕಾಯುವ ಪರಿಸ್ಥಿತಿ ನಿರ್ಮಿಸುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರು ತುಂಬ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಂದ ನಗರ ಸಂಚಾರ ಠಾಣೆಯ ಅಧಿಕಾರಿಗಳಿಗೆ ಮತ್ತು ಜಿಲ್ಲಾ ಕಂಟ್ರೋಲ್ ರೂಂಗೆ ಸಾಕಷ್ಟು ದೂರುಗಳು ಬಂದಿವೆ.
ಶಾಶ್ವತ ಪರಿಹಾರಕ್ಕಾಗಿ ಬಸ್ ನಿಲ್ದಾಣ
ಈ ವಿಚಾರಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಜಿಲ್ಲಾಡಳಿತವು ನಗರ ಸಂಚಾರ ಠಾಣೆಯ ಅಧಿಕಾರಿಗಳಿಗೆ ಮಾರ್ಗೋಪಾಯಕ್ಕಾಗಿ‌ ಸೂಚಿಸಿತ್ತು. ಅದರಂತ ನಗರದಲ್ಲಿ ಓಡಾಡುವ ಸಿಟಿ ಬಸ್ಸುಗಳಿಗೆ ನಿಗದಿಪಡಿಸಿದ‌ ಜಾಗಗಳಲ್ಲಿ ನಿಲುಗಡೆ ಮಾಡಿದ್ದಲ್ಲಿ ಸಾರ್ವಜನಿಕ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ತಿಳಿಸಿದ್ದು, ಅದರನ್ವಯ ಜಿಲ್ಲಾಡಳಿತ ಅಧಿಸೂಚನೆ ಹೊರಡಿಸಿದೆ.

READ | ಜೋಗದಲ್ಲಿ ಚಿರತೆ ಪ್ರತ್ಯಕ್ಷ, ದನದ ಮೇಲೆ ಅಟ್ಯಾಕ್, ಭೀತಿಯಲ್ಲಿ‌ ಜನ

ಯಾವ್ಯಾವ ರಸ್ತೆಯಲ್ಲಿ ಬಸ್ ಸ್ಟಾಪ್?

  1. ಬಿಎಚ್.ರಸ್ತೆಯಲ್ಲಿ 22 ಕಡೆ‌ ಬಸ್ ನಿಲ್ದಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಶಿವಪ್ಪನಾಯಕ ವೃತ್ತ, ಸರ್ಕಾರಿ ಮೈನ್ ಮಿಡ್ಗ ಸ್ಕೂಲ್‌ಎದುರು, ಕರ್ನಾಟಕ ಸಂಘ ಬಸ್ ಸ್ಟಾಪ್, ಡಿಡಿಪಿಐ ಕಛೇರಿ ದ್ವಾರದ ಬಳಿ, ಕೃಷ್ಣ ಕಫೆ ಹೋಟೆಲ್ ಎದುರು, ಮೀನಾಕ್ಷಿಭವನ, ಕರ್ನಾಟಕ ಪಬ್ಲಿಕ್ ಶಾಲೆ ಎದುರು, ತುಂಗಾ ಹೊಳೆ ಬಸ್ ಸ್ಟಾಪ್, ಹೊಳೆಹೊನ್ನೂರುಕ್ರಾಸ್ ಎನ್‌ಸಿಸಿ ಆಫೀಸ್ ಹತ್ತಿರ, ಮಹಾದೇವಿ ಟಾಕೀಸ್ ವಿದ್ಯಾನಗರ, ಗಣೇಶ್ ಭವನ, ಗಣಪತಿ ದೇವಸ್ಥಾನ ಎಡಭಾಗ ವಿದ್ಯಾನಗರ, ಗಣಪತಿ ದೇವಸ್ಥಾನ ಬಲಭಾಗ ವಿದ್ಯಾನಗರ, ಸಹ್ಯಾದ್ರಿ ಕಾಲೇಜ್ ಹತ್ತಿರ ವಿದ್ಯಾನಗರ, ದೂರದರ್ಶನ ಕೇಂದ್ರದ ಬಳಿ, ಎಂಆರ್‌ಎಸ್ ಸರ್ಕಲ್‌ಎಡಭಾಗ, ಎಂಆರ್‌ಎಸ್ ಸರ್ಕಲ್‌ ಬಲಭಾಗ, ಹರಿಗೆ, ಹಾಥಿನಗರಕ್ರಾಸ್, ಶುಗರ್‌ಪ್ಯಾಕ್ಟರಿ, ಮಲವಗೊಪ್ಪ, ಚನ್ನಬಸವೇಶ್ವರ ದೇವಸ್ಥಾನದ ಹತ್ತಿರ, ಕಾಡಾ ಆಫೀಸ್‌ ಎದುರು
  2. ಹೊಳೆಹೊನ್ನೂರು | ಸಿದ್ದೇಶ್ವರ ನಗರ 9ನೇ ಕ್ರಾಸ್ ರಸ್ತೆ, ಗುರುಪುರ, ಸುಬ್ಬಯ್ಯ ಮೆಡಿಕಲ್‌ಕಾಲೇಜ್
  3. ಎನ್.ಆರ್.ಪುರ ರಸ್ತೆ | ಜ್ಯೋತಿ ನಗರ, ವಡ್ಡಿನಕೊಪ್ಪ ಮುಖ್ಯ ಅಂಚೆ ಕಛೇರಿ ಎದುರು, ತಾನಿಷ್ಕ ಜ್ಯೂಯಲರ್ಸ್ ಎದುರು, ತಾಲ್ಲೂಕು ಕಛೇರಿ ಎದುರು.
  4. ಬಾಲರಾಜ್ ಅರಸ್ | ಕೆಇಬಿ ಸರ್ಕಲ್, ಮುಖ್ಯ ರೈಲ್ವೆ ನಿಲ್ದಾಣ.
  5. ಹೊನ್ನಾಳಿ ರಸ್ತೆ | ಸಂಗೊಳ್ಳಿರಾಯಣ್ಣ ಸರ್ಕಲ್, ಶೃತಿ ಶೋ ರೂಂ ಎದುರು, ಶ್ರೀ ನಾಗಪ್ಪ ಸರ್ಕಲ್ ಶಾಂತಿನಗರ, ತ್ಯಾವರೆ ಚಟ್ನಳಿ.
  6. ಸವಳಂಗ ರಸ್ತೆ | ಈದ್ಗಾ ಮೈದಾನದ‌ ಎದುರು, ಜಯ ನಗರ ಠಾಣೆಯ ಹತ್ತಿರ, ವಂದನಾ ಬೇಕರಿ ಬಳಿ, ಉಷಾನರ್ಸಿಂಗ್ ಹೋಂ ಹತ್ತಿರ, ಎಲ್,ಬಿ,ಎಸ್ ನಗರ 2ನೇ ಕ್ರಾಸ್, ನವುಲೆ, ತ್ರಿಮೂರ್ತಿ ನಗರ ಗಣಪತಿ ದೇವಸ್ಥಾನ, ಕುವೆಂಪು ನಗರ ಕ್ರಾಸ್, ಜೆಎನ್‌ಎನ್‌ಸಿಇ ಕಾಲೇಜ್, ಅಕ್ಷರ ಕಾಲೇಜ್ ಬಳಿ, ಕೃಷಿ ಕಾಲೇಜ್, ಚನ್ನಮುಭಾಪುರಕ್ರಾಸ್, ಬಸವನಗಂಗೂರು ಕ್ರಾಸ್, ರತ್ನಾಕರ ಬಡಾವಣೆ, ಸರ್ಕಾರಿ ನೌಕರರ ಬಡಾವಣೆ, ರತ್ನಗಿರಿ ಬಡಾವಣೆ, ಕುವೆಂಪು ನಗರ ಎ ಬ್ಲಾಕ್ ವಿದ್ಯಾಭಾರತಿ ಕಾಲೇಜ್ ಬಳಿ, ಎನ್.ಇ.ಎಸ್ ಲೇಔಟ್ ಕುವೆಂಪು ನಗರ.
  7. 100 ಅಡಿ ರಸ್ತೆ | ನಿರ್ಮಲ ಹಾಸ್ಪಿಟಲ್ ಹತ್ತಿರ, ರಾಜೇಂದ್ರ ನಗರ ಚಾನಲ್ ಬಳಿ, ಗಾಂಧಿನಗರ, ಗಣಪತಿ ದೇವಸ್ಥಾನ ರವೀಂದ್ರನಗರ, ಬ್ಲಡ್ ಬ್ಯಾಂಕ್ ಹತ್ತಿರ
  8. ರಸ್ತೆಗಳ ವಿವರ ಮಿಳಘಟ್ಟ ನಿಲ್ದಾಣದ ಸ್ಥಳಗಳ ವಿವರ ಕ್ರಾಸ್ ಮಿಳಘಟ್ಟ ಗೋಪಾಲಗೌಡ ಪದ್ಮಾಟಾಕೀಸ್ ಬಡಾವಣೆ ಬಸ್ ನಿಲ್ದಾಣದ ವರೆಗೆ | ಅಣ್ಣಾ ನಗರ ಚಾನೆಲ್ ಗೋಪಾಳ ವಿನಾಯಕ ಸರ್ಕಲ್, ಗುಡ್ ಲಕ್ ಸರ್ಕಲ್ (ಸ್ವಾಮಿ ವಿವೇಕಾನಂದ ಬಡಾವಣೆ), ವೃದ್ಧಾಶ್ರಮ ( LHS)
  9. ಗೋಪಾಳ ಗೌಡ 100 ಅಡಿ ರಸ್ತೆ | ಗೋಪಾಳ ಗೌಡ ಮೋರ್ ಶಾಪ್ ಹತ್ತಿರ, ಗೋಪಾಳಗೌಡ ಬಡಾವಣೆ HP PETROL BUNK ಎದುರು,
  10. ವಿಜಯನಗರ ಮುಖ್ಯ ರಸ್ತೆ | ನೇತಾಜಿ ಸರ್ಕಲ್‌, ದೌಪದಮ್ಮ ಸರ್ಕಲ್
  11. ತುಂಗಾ ನಗರ 100 ಅಡಿ ರಸ್ತೆ | ಚಾಲುಕ್ಯ ನಗರ( LHS), ಚಾಲುಕ್ಯ ನಗರ( RHS), ಚಾಲುಕ್ಯ ನಗರ, ಓಪನ್‌ಗೌಂಡ್, ತುಂಗಾನಗರ ಪಿ.ಎಚ್.ಸಿ, ತುಂಗಾನಗರ ಪೊಲೀಸ್‌ ಠಾಣೆ
  12. ಸಾಗರ ರಸ್ತೆ | ಮೆಗ್ಗಾನ್‌ ಆಸ್ಪತ್ರೆ (ಹೊರಗೆ), ಎಸ್.ಪಿ. ಕಚೇರಿ ಎದುರು, ದೊಡ್ಡಪೇಟೆ ಪೊಲೀಸ್(LHS), ಎ.ಪಿ.ಎಂ.ಸಿ.ಹತ್ತಿರ( LHS), ಎ.ಪಿ.ಎಂ.ಸಿ.ಹತ್ತಿರ (RHS), ಬಿ.ಕೃಷ್ಣಪ್ಪ ಸರ್ಕಲ್ (ಅಲೊಳ ಸರ್ಕಲ್), ಡಿವಿಜಿ ಸರ್ಕಲ್ (LHS) ,
  13. ಹೋಟೆಲ್ ಅಶೋಕ ಗ್ರಾಂಡ್, ಹೋಟೆಲ್ ಅಶೋಕ(ಚರ್ಚ್ ಎದುರು), ನಂಜಪ್ಪ ಲೈಫ್ ಕೇರ್ ಹತ್ತಿರ, ಗಾಡಿಕೊಪ್ಪ, ಮಹೇಂದ್ರ ಶೋರೂಂ ಎದುರುಗಡೆ (ಗಾಡಿಕೊಪ್ಪ), ಕಾಸ್ಮೋ ಕ್ಲಬ್ ಎದುರು, ಪ್ರೊ.ಬಿ ಕೃಷ್ಣಪ್ಪ ಫ್ರೀ ಲೆಫ್ಟ್.
  14. ಸೋಮಿನಕೊಪ್ಪ ರಸ್ತೆ | ಕಾಶೀಪುರ ಮುಖ್ಯರಸ್ತೆ ಎಸ್.ಆರ್.ಎಸ್. ಶಾಮಿಯಾನ ಎದುರು, ಸೋಮಿನಕೊಪ್ಪ ಮುಖ್ಯ ರಸ್ತೆ, ಆದರ್ಶ ನಗರ, ಸೋಮಿನಕೊಪ್ಪ ಮುಖ್ಯ ರಸ್ತೆ.
  15. ವಿನೋಬನಗರ 100 ಅಡಿ ರಸ್ತೆ | ಕರಿಯಣ್ಣ ಬಿಲ್ಡಿಂಗ್, ಪೆÇಲೀಸ್ ಚೌಕಿ (ಪೆÇಲೀಸ್ ಠಾಣೆ ಹಿಂಭಾಗ), ಇಂದಿರಾಗಾಂಧಿ ಸರ್ಕಲ್ (ಆರ್.ಎಚ್.ಎಸ್.), ಇಂದಿರಾಗಾಂಧಿ ಸರ್ಕಲ್ (ಎಲ್.ಎಚ್.ಎಸ್.), ಶಿವಾಲಯ ವಿನೋಬನಗರ, ಹಳೇ ಜೈಲ್ ರಸ್ತೆ ಹತ್ತಿರ (ಫ್ರೀಡಂ ಪಾರ್ಕ್), ಲಕ್ಷ್ಮೀ ಚಿತ್ರಮಂದಿರದ ಬಳಿ, ಮಾಧವ ನೆಲೆ ಹತ್ತಿರ, ಕಾಶೀಪುರ ರಸ್ತೆ.
  16. ಜೈಲ್ ರಸ್ತೆ | ಹೊಸಮನೆ ಬಡಾವಣೆ.
    ಬೊಮ್ಮನಕಟ್ಟೆ ರಸ್ತೆ | ಬೊಮ್ಮನಕಟ್ಟೆ (ಆರ್.ಎಚ್.ಎಸ್.), ಬೊಮ್ಮನಕಟ್ಟೆ (ಎಲ್.ಎಚ್.ಎಸ್.).
  17. ಎನ್.ಟಿ.ರಸ್ತೆ | ಎನ್. ಟಿ.ರಸ್ತೆ ಎದುರುಗಡೆಯ ಎಚ್.ಪಿ.ಪೆಟ್ರೋಲ್ ಬಂಕ್, ಮಂಡ್ಲಿ (ಎಲ್.ಎಚ್.ಎಚ್.), ಮಂಡ್ಲಿ (ಆರ್.ಎಚ್.ಎಚ್.)
  18. ಬೈಪಾಸ್ ರಸ್ತೆ | ತುಂಗಾ ನದಿಯ ಹೊಸ ಸೇತುವೆ, ಸೂಳೇಬೈಲು (ಆರ್.ಎಚ್.ಎಚ್.), ಊರುಗಡೂರು (ಆರ್.ಎಚ್.ಎಚ್.), ಬೈಪಾಸ್ ರಸ್ತೆ ನಸಿರ್ಂಗ್ ಕಾಲೇಜ್ ಹತ್ತಿರ ನಂಜಪ್ಪ ಬಡಾವಣೆ, ಊರುಗಡೂರು ವೃತ್ತ (ಎಲ್.ಎಚ್.ಎಚ್.), ಸೂಳೆಬೈಲು (ಆರ್.ಎಚ್.ಎಚ್.), ನಿಸರ್ಗ ಲೇಔಟ್, ಪ್ರಿಯಾಂಕ ಲೇ ಔಟ್.

https://suddikanaja.com/2022/12/28/new-year-guidelines-released-by-shimoga-police/

error: Content is protected !!