Arecanut | ಭವಿಷ್ಯದಲ್ಲಿ ಅಡಕೆ‌ ಬೆಳೆಗಾರರಿಗೆ ಸಂಕಷ್ಟ, ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಹೀಗೇಕೆ ಹೇಳಿದರು?

arecanut

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಅನಿರ್ಬಂಧಿತವಾಗಿ ಅಡಿಕೆ ಬೆಳೆಯುವ ಪ್ರದೇಶ ವಿಸ್ತಾರ ವಾಗುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಸಾಂಪ್ರದಾಯಿಕವಾಗಿ ಅಡಿಕೆ ಕೃಷಿ ಮಾಡುತ್ತಿರುವ ರೈತರು ಸಂಕಷ್ಟದ ದಿನಗಳನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆತಂಕ ವ್ಯಕ್ತಪಡಿಸಿದರು.
ವಿಧಾನ ಸಭೆಯಲ್ಲಿ ಇತ್ತೀಚೆಗೆ ರೈತರು, ಅತಿವೃಷ್ಟಿ ಹಾಗೂ ಅನಾವೃಷ್ಟಿ ಕಾರಣದಿಂದಾಗಿ, ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಡೆದ ಚರ್ಚೆಯ ಮಧ್ಯದಲ್ಲಿ ಭಾಗವಹಿಸಿ ಮಾತನಾಡಿದರು.

READ | ಸತತ ಮೂರನೇ ದಿನವೂ‌ ಏರಿಕೆ ಕಂಡ ಅಡಿಕೆ ದರ, ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ರೇಟ್?

ನೀರಾವರಿ ಪ್ರದೇಶದಲ್ಲೂ ಅಡಿಕೆ
ಪ್ರತಿ ವರ್ಷ ಲಕ್ಷಾಂತರ ಎಕರೆ ಭೂಮಿ, ಅಡಿಕೆ ಬೆಳೆ, ವಿಸ್ತಾರವಾಗುತ್ತಿದ್ದು, ಸರಾಸರಿ ಒಂದು ಕೋಟಿ ಅಡಿಕೆ ಸಸಿಗಳ ಉತ್ಪಾದನೆಯಾಗಿ, ನೀರಾವರಿ ಪ್ರದೇಶದಲ್ಲಿ ಅಡಿಕೆ ತೋಟ ವಿಸ್ತರಣೆ ಯಾಗುತ್ತಿದೆ ಎಂದರು.
ಸಾವಿರಾರು ಕೋಟಿ ರೂಪಾಯಿಗಳನ್ನು ವಿದೇಶದಿಂದ ಹಾಗೂ ವಿಶ್ವ ಬ್ಯಾಂಕ್ ಗಳಿಂದ ಸಾಲ ಪಡೆದು, ಜಲಾಶಯಗಳನ್ನು ಕಟ್ಟಿ, ಷರತ್ತುಗಳನ್ನು ಉಲ್ಲಂಘಿಸಿ, ಹಗುರ ಬೆಳೆಗಳ ಬದಲು ಅಡಿಕೆ ತೋಟಗಳು ಬರುತ್ತಿವೆ. ಇದರಿಂದ ಮುಂದಿನ ದಿನಗಳಲ್ಲಿ, ಸಾಂಪ್ರದಾಯಿಕವಾಗಿ ಅಡಿಕೆ ಬೆಳೆದು, ಬದುಕನ್ನು ಕಟ್ಟಿಕೊಂಡಿರುವ ಮಲೆನಾಡು ಹಾಗೂ ಕರಾವಳಿ ಪ್ರದೇಶದ ರೈತರು, ಸಂಕಷ್ಟಕ್ಕೆ ತುತ್ತಾಗುವ ಭಯ ಆವರಿಸಿದೆ ಎಂದು ಹೇಳಿದರು.
ಇದೊಂದು, ಅನಾರೋಗ್ಯಕರ ಬೆಳವಣಿಗೆ ಎಂದ ಸಚಿವರು, ಇಂತಹ ಪ್ರವೃತ್ತಿಗೆ, ಪ್ರೋತ್ಸಾಹ ನೀಡಬಾರದು ಹಾಗೂ ಕಡಿವಾಣ ಹಾಕಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

https://suddikanaja.com/2022/12/25/pm-narendra-modi-talk-on-shivamoggas-entrepreneur-in-mann-ki-baat/

error: Content is protected !!