Job Training | ಉಚಿತ‌ ಊಟದೊಂದಿಗೆ ಉದ್ಯೋಗ ತರಬೇತಿ, ಆಸಕ್ತರು‌ ಕೂಡಲೇ ಅರ್ಜಿ ಸಲ್ಲಿಸಿ

Job Training

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍’ಸೆಟಿ- ಹಳಿಯಾಳ ಹಾಗೂ ಜೆಸಿಬಿ ಇಂಡಿಯಾ ಇವರ ಜಂಟಿ ಸಹಯೋಗದಲ್ಲಿ 30 ದಿನ ಎಲೆಕ್ಟ್ರಿಕ್ ಮೋಟಾರ್ ವೈಂಡಿಂಗ್ ಮತ್ತು ರಿಪೇರಿ ಮತ್ತು ರೆಪ್ರಿಜಿರೇಟರ್/ ಎರ್‍ಕಂಡಿಷನರ್ ರಿಪೇರಿ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ. 18-45 ವರ್ಷ ವಯೋಮಿತಿಯೊಳಗಿನವರು ಅರ್ಜಿ ಸಲ್ಲಿಸಲು ಅವಕಾಶವಿದೆ.

READ | ಆರೋಗ್ಯ ಇಲಾಖೆಯಲ್ಲಿ 400 ಫಾರ್ಮಸಿ, 150 ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಹುದ್ದೆಗಳ ನೇಮಕಕ್ಕೆ ಅನುಮೋದನೆ, ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು‌ ಖಾಲಿ?

ಅರ್ಜಿ‌ ಸಲ್ಲಿಸಲು‌ ಜ.8 ಕೊನೆಯ ದಿನ
ಆಸಕ್ತರು ತಮ್ಮ ಹೆಸರು, ಹುಟ್ಟಿದ ದಿನಾಂಕ, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ತರಬೇತಿಯ ಅವಶ್ಯಕತೆ, ಹಾಲಿ ಮಾಡುತ್ತಿರುವ ಕೆಲಸ ಇತ್ಯಾದಿ ವಿವರಗಳನ್ನೊಳಗೊಂಡ ಅರ್ಜಿಯನ್ನು ಜನವರಿ 08 ರೊಳಗಾಗಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍’ಸಿಟಿ, ವಿಸ್ತರಣಾ ಕೇಂದ್ರ ಹಸನಮಾಳ್, ದಾಂಡೇಲಿ-581325, ವಿಳಾಸಕ್ಕೆ ಕಳುಹಿಸುವುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್‌ ಸಂಖ್ಯೆ 08284-298547/ 8050741744/ 9632143217/ 9449782425 ಗಳಿಗೆ ವಾಟ್ಸ್ ಆ್ಯಪ್ ಮೂಲಕ ಕಳುಹಿಸುವುದು.
ತರಬೇತಿಯು ಊಟೋಪಚಾರ ಹಾಗೂ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು, ತರಬೇತಿಯ ನಂತರ ಉದ್ಯೋಗ ನಿಯೋಜನೆ ಮಾರ್ಗದರ್ಶನ ನೀಡಲಾಗುವುದು.

https://suddikanaja.com/2022/12/29/asha-bhat-shared-her-student-life-experiance-at-shimoga/

error: Content is protected !!