Delhi Chalo | ಡಿ.19ರಂದು ನಡೆಯಲಿದೆ ಬೃಹತ್ ರೈತ ಗರ್ಜನಾ ರ್ಯಾಲಿ, 2 ಲಕ್ಷಕ್ಕೂ ಹೆಚ್ಚು ಜನ ಭಾಗಿ

farmer protest

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರೈತರಿಗೆ ವೆಚ್ಚದ ಆಧಾರದ ಮೇಲೆ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಡಿ.19ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ರೈತ ಗರ್ಜನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಕಿಸಾನ್ ಸಂಘ, ಕರ್ನಾಟಕ ಪ್ರದೇಶದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ವೀಣಾ ಸತೀಶ್ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 2 ಲಕ್ಷ ರೈತರು ಭಾಗವಹಿಸುವ ನಿರೀಕ್ಷೆ ಇದೆ. ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

READ | ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ ಬಿದ್ದ ಸರ್ವೇಯರ್

ರೈತರ ಬೇಡಿಕೆಗಳೇನು?

  • ವೆಚ್ಚದ ಆಧಾರದ ಮೇಲೆ ರೈತರಿಗೆ ಲಾಭದಾಯಕ ಬೆಲೆ ನಿಗದಿ ಮಾಡಬೇಕು.
  • ರೈತರ ಭೂಮಿಯ ಮೌಲ್ಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ರೈತರ ಶ್ರಮವನ್ನೂ ಗುರುತಿಸುತ್ತಿಲ್ಲ. ರೈತರನ್ನು ಕೌಶಲ್ಯರಹಿತ ಕಾರ್ಮಿಕ ಎಂದು ಪರಿಗಣಿಸಲಾಗಿದೆ. ಇವುಗಳನ್ನೆಲ್ಲ ಪರಿಗಣಿಸಿ ರೈತರು ಬೆಳೆದ ಬೆಳೆಗೆ ವೆಚ್ಚದ ಆಧಾರದ ಮೇಲೆ ಲಾಭದಾಯಕ ಬೆಲೆ ನಿಗದಿಮಾಡಬೇಕು.
  • ರಾಸಾಯನಿಕ ಗೊಬ್ಬರಗಳಿಗೆ ಕಂಪೆನಿಗಳಿಗೆ ನೀಡುತ್ತಿರುವ ಸಬ್ಸಿಡಿಯನ್ನು ರೈತರು ಬೆಳೆಯುವ ಬೆಳೆಗಳ ಆಧಾರದ ಮೇಲೆ ರೈತರ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮಾಡಬೇಕು.
  • ರಸಗೊಬ್ಬರವನ್ನು ಮುಕ್ತ ಮಾರುಕಟ್ಟೆಗೆ ಬಿಡಬೇಕು. ರೈತರು ಕೃಷಿಗೆ ಬಳಸುವ ಎಲ್ಲ ಉಪರಕರಣಗಳ ಮೇಲಿನ ಜಿಎಸ್.ಟಿಯನ್ನು ರದ್ದುಗೊಳಿಸಬೇಕು
  • ಕಿಸಾನ್ ಸಮ್ಮಾನ್ ಯೋಜನೆಯ ಮೊತ್ತವನ್ನು ಹೆಚ್ಚಿಸಬೇಕು

ಮಾಧ್ಯಮಗೋಷ್ಠಿಯಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪದಾಧಿಕಾರಿಗಳಾದ ಕೆ.ಸಿ. ಶಿವಪ್ಪ, ಬಿ. ಚನ್ನಪ್ಪ, ಎನ್. ಪರಮೇಶ್ವರಪ್ಪ, ಸುಧಾ ಪರಮೇಶ್ವರಪ್ಪ., ಜಿ.ಬಿ. ಪಾಲಾಕ್ಷಪ್ಪ, ಜಯಶೇಖರ ಗೌಡ್ರು, ನಂದೀಶ್ ಉಪಸ್ಥಿತರಿದ್ದರು.

https://suddikanaja.com/2022/12/08/missing-cat-found-at-sagar/

error: Content is protected !!