Good News | ಅಬಕಾರಿ‌ ಇಲಾಖೆಯಲ್ಲಿ ಶೀಘ್ರವೇ ನೇಮಕಾತಿ, ಕೆಪಿಎಸ್.ಸಿಗೆ ಪ್ರಸ್ತಾವನೆ, ಎಷ್ಟು ಹುದ್ದೆಗಳ ಭರ್ತಿ?

Vidhan saudha

 

 

ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಅಬಕಾರಿ‌ ಇಲಾಖೆ (excise department)ಯಲ್ಲಿ‌ ಖಾಲಿ ಇರುವ ವಿವಿಧ ಹುದ್ದೆ(vacancy)ಗಳ ಭರ್ತಿಗೆ ಕೆಪಿಎಸ್’ಸಿ(Karnataka Public Service Commission)ಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಸಚಿವ ಕೆ.ಗೋಪಾಳಯ್ಯ ಹೇಳಿದರು.

READ | ಭದ್ರಾವತಿಯ ದೇವಸ್ಥಾನ ಬಳಿ ವೃದ್ಧೆ ಸಾವು

ಇಲಾಖೆಯಲ್ಲಿ ಖಾಲಿ ಇರುವ 1000 ಪೇದೆ, 100 ಸಬ್ ಇನ್’ಸ್ಪೆಕ್ಟರ್ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಾಗುವುದು. ಸರ್ಕಾರಕ್ಕೆ ಹೆಚ್ಚು ಬೊಕ್ಕಸ ತಂದುಕೊಡುವ ಇಲಾಖೆಯ ಬಲವರ್ಧನೆಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು‌.
ಹೊಸ ಮದ್ಯ ತಯಾರಿಕೆಗೆ ಅನುಮೋದನೆ
ಹೊಸ‌ ಮದ್ಯ ತಯಾರಿಕೆಗೆ ಉದ್ಯಮಿಗಳು ಮುಂದೆ ಬಂದರೆ ಮುಖ್ಯಮಂತ್ರಿ ಜೊತೆ ಚರ್ಚಿಸಿ ಅನುಮೋದನೆ ನೀಡಲಾಗುವುದು. ಇದರಿಂದ ಉದ್ಯೋಗ ಸೃಷ್ಟಿಯಾಗಲಿದೆ ಎಂದರು.
ಮದ್ಯದ ದರ ಪರಿಷ್ಕರಣೆ ಸದ್ಯಕ್ಕಿಲ್ಲ
ಮದ್ಯದ ದರ ಪರಿಷ್ಕರಣೆ ವಿಚಾರ ಸರ್ಕಾರದ ಮುಂದಿಲ್ಲ. ಪ್ರಸ್ತುತ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಆದಾಯ ಬರುತ್ತಿದೆ. ಈ ವರ್ಷ ₹29,000 ಕೋಟಿ ಗುರಿ ನೀಡಲಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ₹17,225 ಕೋಟಿ ತೆರಿಗೆ ಸಂಗ್ರಹ ಸಂಗ್ರಹವಾಗಿತ್ತು ಎಂದು ಮಾಹಿತಿ ನೀಡಿದರು‌.

https://suddikanaja.com/2022/12/06/bag-handed-over-to-passenger-at-shivamogga-railway-station/

error: Content is protected !!