Lokayukta trap | ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ ಬಿದ್ದ ಸರ್ವೇಯರ್

Lokayukta shivamogga

 

 

ಸುದ್ದಿ ಕಣಜ.ಕಾಂ ಸಾಗರ
SAGAR: ಸೈಟಿಗೆ ಇ-ಸ್ವತ್ತು ಮಾಡಿಸುವ ಸಂಬಂಧ ಲಂಚಕ್ಕಾಗಿ ಬೇಡಿಕೆಯಿಟ್ಟು ಕಚೇರಿಯಲ್ಲಿ ಹಣ‌ ಪಡೆಯುವಾಗ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸರ್ವೇಯರ್’ವೊಬ್ಬರು‌ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಸರ್ವೇಯರ್ ರಂಗನಾಥ್ ಎಂಬುವವರೇ ಬಲೆಗೆ ಬಿದ್ದವರು. ತಮ್ಮ ಕಚೇರಿಯಲ್ಲಿ ₹1,500 ಪಡೆಯುವಾಗ ಬಲೆ ಬೀಸಿದ್ದು ರೆಡ್ ಹ್ಯಾಂಡ್ ಆಗಿ ಸಿಕ್ಕಿದ್ದಾರೆ.

READ | ಸಕ್ರೆಬೈಲಿನ‌ ನಾಲ್ಕು ಆನೆಗಳು ಸೇರಿ‌ ರಾಜ್ಯದ 14 ಆನೆಗಳು ಮಧ್ಯಪ್ರದೇಶಕ್ಕೆ ವರ್ಗಾವಣೆ, ಯಾವ್ಯಾವ ಆನೆಗಳು ತೆರಳಲಿವೆ?

ನಡೆದಿದ್ದೇನು?
ಸಾಗರ ತಾಲ್ಲೂಕು ತ್ಯಾಗರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೈಟ್‌ಗೆ ಇ-ಸ್ವತ್ತು ಮಾಡಿಸುವ ಸಂಬಂಧ ದೂರುದಾರರು ₹800 ಶುಲ್ಕ ಪಾವತಿಸಿದ್ದು, ಅವರ ಕಡತವು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸರ್ವೆಯರ್ (surveyor) ಬಳಿಯಿದ್ದು, ಸೈಟ್‌ ಅನ್ನು ಸರ್ವೆ ಮಾಡಿಸಲು ₹5,000 ಲಂಚ(Bribe)ಕ್ಕೆ ಬೇಡಿಕೆಯಿಟ್ಟಿದ್ದರು. ಆ ಸಮಯದಲ್ಲಿ ದೂರುದಾರರು‌ ತನ್ನ ಬಳಿಯಿದ್ದ ₹500ಗಳನ್ನು ರಂಗನಾಥ ಇವರಿಗೆ ನೀಡಿದ್ದಾರೆ‌ ಎಂದು ಲೋಕಾಯುಕ್ತ ಪೊಲೀಸ್ ಪ್ರಕಟಣೆ ತಿಳಿಸಿದೆ.
ಮೂರು‌ ಸಾವಿರಕ್ಕೆ‌‌ ಡೀಲ್
ರಂಗನಾಥ್ ಅವರಿಗೆ ಕರೆ ಮಾಡಿದ್ದಾಗ ಮನೆಗೆ ಬರುವಂತೆ ಸೂಚಿಸಿದ್ದು,‌ ಆ ವೇಳೆ‌ ₹3,000 ನೀಡಿದರೆ ಸಾಕು ಎಂದಿದ್ದಾರೆ. ಆಗ ಮುಂಗಡವಾಗಿ ಇನ್ನೂ ₹1,000 ನೀಡಲಾಗಿದೆ ಎಂದು ದೂರಿನಲ್ಲಿ‌ ತಿಳಿಸಲಾಗಿದೆ. ಇನ್ನುಳಿದ ಬಾಕಿ ಹಣ ₹1,500 ನೀಡುವಾಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಕರ್ನಾಟಕ ಲೋಕಾಯುಕ್ತದ ಚಿತ್ರದುರ್ಗ ಕಚೇರಿಯ ಪೊಲೀಸ್ ಅಧೀಕ್ಷಕ ಎನ್. ವಾಸುದೇವರಾಮ ಮಾರ್ಗದರ್ಶನದಲ್ಲಿ ಪ್ರಕರಣವನ್ನು ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ಟ್ರ್ಯಾಪ್ ಕಾಲಕ್ಕೆ ಶಿವಮೊಗ್ಗ ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕ ಎನ್. ಮೃತ್ಯುಂಜಯ ಮತ್ತು ಪೊಲೀಸ್ ನಿರೀಕ್ಷ ಎಚ್. ರಾಧಾಕೃಷ್ಣ, ಸಿಬ್ಬಂದಿ ಎಸ್‌.ಕೆ. ಪ್ರಸನ್ನ, ವಿ.ಎ. ಮಹಾಂತೇಶ್, ಬಿ.ಲೋಕೇಶಪ್ಪ, ಸಾವಿತ್ರಮ್ಮ, ಪುಟ್ಟಮ್ಮ, ಚನ್ನೇಶ್, ಪ್ರಶಾಂತ್‌ ಕುಮಾರ್, ಅರುಣ್‌ ಕುಮಾರ್, ಸಿಪಿಸಿ, ತರುಣ್‌‌, ಪ್ರದೀಪ್, ಬಿ.ಕೆ. ಗಂಗಾಧರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

https://suddikanaja.com/2022/12/08/road-closed-for-work-and-alternate-rout-for-vehicles/

error: Content is protected !!