Rain in shivamogga | ಶಿವಮೊಗ್ಗದಲ್ಲಿ ಮ್ಯಾಂದೊಸ್ ಎಫೆಕ್ಟ್, ನಿರಂತರ ಮಳೆ, ಎಲ್ಲಿ ಎಷ್ಟು ಮಳೆಯಾಗಿದೆ?

Rain

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮ್ಯಾಂದೊಸ್ ಚಂಡಮಾರುತ ಅಬ್ಬರಕ್ಕೆ ಮಲೆನಾಡು ಥಂಡಿಯಾಗಿದೆ. ಜಿಲ್ಲೆಯ ವಿವಿಧೆಡೆ ಭಾನುವಾರ ಬೆಳಗ್ಗೆಯಿಂದ ನಿರಂತರ ಮಳೆ ಸುರಿಯುತ್ತಿದ್ದು, ಜನಜೀವನ ಕಂಗಾಲಾಗಿದೆ.
ಮಳೆ ಇದೇ ರೀತಿ ಮುಂದುವರಿದರೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಭೀತಿಯೂ ಇದೆ. ಜತೆಗೆ, ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಪ್ರಗತಿಯಲ್ಲಿದ್ದು ಹಲವೆಡೆ ಕಾಮಗಾರಿ ಅಪೂರ್ಣವಾಗಿರುವುದರಿಂದ ಅಲ್ಲಲ್ಲಿ ನೀರು ತುಂಬಿಕೊಂಡಿವೆ. ಇದುವರೆಗೆ ಎಲ್ಲಿಯೂ ದುರ್ಘಟನೆಗಳು ವರದಿಯಾಗಿಲ್ಲ.

READ | ಸವಳಂಗ ರಸ್ತೆಯಲ್ಲಿ ಭೀಕರ ಅಪಘಾತ, ಮೂವರು ವಿದ್ಯಾರ್ಥಿಗಳ ಸಾವು

ತಾಲೂಕುವಾರು ಮಳೆ ಪ್ರಮಾಣ (ಎಂಎಂಗಳಲ್ಲಿ)
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವರದಿ ಮಾಡಿರುವ ಪ್ರಕಾರ, ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಭಾನುವಾರ ಜಿಟಿ ಮಳೆಯಾಗುತ್ತಿದೆ. ಸೊರಬ ತಾಲೂಕಿನ ಕುಪ್ಪಗದ್ದೆಯಲ್ಲಿ 9.5, ಸಾಗರದಲ್ಲಿ 32.1, ಹೊಸನಗರ 12, ತೀರ್ಥಹಳ್ಳಿ 17.1, ಶಿವಮೊಗ್ಗ 17.7, ಶಿಕಾರಿಪುರ 18.4, ಭದ್ರಾವತಿ 15.9 ಮಳೆಯಾಗಿದೆ.

https://suddikanaja.com/2022/12/11/passenger-slipped-and-fell-down-while-he-try-to-board-talaguppa-mysuru-express-train-at-shivamogga-town-railway-station/

error: Content is protected !!