KS Eshwarappa | ಹೀಗೆಯೇ ಮುಂದುವರಿದರೆ ಜನ ಕಾಂಗ್ರೆಸ್ ಅನ್ನೇ ಬ್ಯಾನ್ ಮಾಡುತ್ತಾರೆ: ಈಶ್ಚರಪ್ಪ

KS Eshwarappa

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಅಲ್ಪಸಂಖ್ಯಾತರ ತುಷ್ಟೀಕರಣ ಇದೇ ರೀತಿಯಲ್ಲಿ ಮುಂದುವರಿದರೆ ಜನ ಕಾಂಗ್ರೆಸ್ ಅನ್ನೇ ಬ್ಯಾನ್ ಮಾಡುತ್ತಾರೆ ಎಂದು ಶಾಸಕ‌ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.

READ | ಗಮನಿಸಿ, ನಿಮ್ಮೂರಿಗೆ ಬರಲಿದ್ದಾರೆ ಲೋಕಾಯುಕ್ತರು, ಇಲ್ಲಿದೆ ಟೈಂ ಟೇಬಲ್

ಮಾಧ್ಯಮದವರೊಂದಿಗೆ ಮಾತನಾಡಿದ‌ ಅವರು, ಕಾಂಗ್ರೆಸದ ದೇಶದ್ರೋಹಿಗಳ ಪರ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು.‌ ಹಿಂದಿನಿಂದಲೂ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ತುಷ್ಟೀಕರಣ ಮಾಡುತ್ತಾ ಬಂದಿದೆ. ಗಲಭೆಗಳು ಆದಾಗ ಭಯೋತ್ಪಾದಕರ ಪರವಾಗಿ ಮತ್ತು ಉಗ್ರ ಚಟುವಟಿಕೆಗಳನ್ನು ನಡೆಸುತ್ತಿರುವವರ ಪರವಾಗಿ ಹೇಳಿಕೆಗಳನ್ನು ನೀಡುತ್ತಾ ಬಂದಿದೆ ಎಂದು ಆರೋಪಿಸಿದರು.
ನ್ಯಾಯಾಲಯ ಕೂಡ ಪಿಎಫ್‌ಐ ಮತ್ತದರ ಸಂಘಟನೆಗಳನ್ನು ನಿಷೇಧಿಸಿದಾಗಲೂ ಕಾಂಗ್ರೆಸ್ ಪಿಎಫ್.ಐ ಪರವಾಗಿ ಮಾತನಾಡಿತ್ತು. ಇದೇ ರೀತಿ ಮುಂದುವರಿದರೆ ಮುಂದೊಂದು ದಿನ ಸರ್ಕಾರ ಮತ್ತು ಜನ ಕಾಂಗ್ರೆಸ್‌ ಅನ್ನೇ ಬ್ಯಾನ್ ಮಾಡುತ್ತಾರೆ. ಇನ್ನಾದರೂ ಎಚ್ಚೆತ್ತುಕೊಳ್ಳಲಿ ಎಂದು ಸಲಹೆ ನೀಡಿದರು.

https://suddikanaja.com/2022/12/17/karnataka-examination-authority-kea-has-announced-a-notification-for-the-recruitment/

error: Content is protected !!