Railway level crossing | ನಾಳೆ ಸಂಜೆಯಿಂದ ಶಿವಮೊಗ್ಗ ಜಿಲ್ಲೆಯ ಈ ರಸ್ತೆಯಲ್ಲಿ ಸಂಚಾರ ಬಂದ್, ಪರ್ಯಾಯ ಮಾರ್ಗದ ವ್ಯವಸ್ಥೆ

dc selvamani

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕುಂಸಿ(Kumsi)- ಆನಂದಪುರ(anandapur) ಮಧ್ಯೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ (Railway level crossing) ಗೇಟ್ ನಂ.92ರಲ್ಲಿ ತಾಂತ್ರಿಕವಾಗಿ ಪರಿಶೀಲನೆ ಮಾಡುವುದರಿಂದ ಡಿಸೆಂಬರ್ 9ರ ಸಂಜೆ 7 ಗಂಟೆಯಿಂದ ಡಿ.10 ರ ಬೆಳಗ್ಗೆ 7ರವರೆಗೆ ಗೇಟ್‍ ಅನ್ನು ಮುಚ್ಚುವುದರಿಂದ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗ ವ್ಯವಸ್ಥೆ ಮಾಡಲಾಗಿದೆ.
ಪರ್ಯಾಯ ಮಾರ್ಗ
ಡಿ.9ರ ಸಂಜೆ 7 ಗಂಟೆಯಿಂದ ಡಿ.10ರ ಬೆಳಗ್ಗೆ 7 ಗಂಟೆವರೆಗೆ ರಿಪ್ಪನಪೇಟೆ, ಗರ್ತಿಕೆರೆ, ಮೂಗುಡ್ತಿ, 5ನೇ ಮೈಲಿಕಲ್ಲು ಹಾಗೂ ಹಾರನಹಳ್ಳಿ, ಗುಳು ಗುಳಿ ಶಂಕರ, ಬೆಳ್ಳೂರು, ಮೂಗುಡ್ತಿ, ರಿಪ್ಪನಪೇಟೆ ಈ ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸಬಹುದೆಂದು ಅಧಿಸೂಚನೆಯನ್ನು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹೊರಡಿಸಿದ್ದಾರೆ.

https://suddikanaja.com/2022/12/08/missing-cat-found-at-sagar/

error: Content is protected !!