Woman dead | ಭದ್ರಾವತಿಯ ದೇವಸ್ಥಾನ ಬಳಿ ವೃದ್ಧೆ ಸಾವು

Murder

 

 

ಸುದ್ದಿ ಕಣಜ.ಕಾಂ ಭದ್ರಾವತಿ
BHADRAVATHI: ತಾಲೂಕಿನ ಸುಣ್ಣದಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಭಿಕ್ಷೆ ಬೇಡಿಕೊಂಡಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಚಿನ್ನಾಭರಣಕ್ಕೋಸ್ಕರ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

READ | ಸಜಾಬಂಧಿಯ ಒಳ ಉಡುಪಿನಲ್ಲಿ ಗಾಂಜಾ! ಸಿಕ್ಕಿದ್ದು ಹೇಗೆ?

ಶಂಕ್ರಮ್ಮ(70) ಮೃತರು. ಕುಟುಂಬದವರ್ಯಾರೂ ಇಲ್ಲದ ಕಾರಣಕ್ಕೆ ಮಹಿಳೆಯು ದೇವಸ್ಥಾನದ ಬಳಿ ಭಿಕ್ಷೆ ಬೇಡಿಕೊಂಡಿದ್ದರಯ. ದೇವಸ್ಥಾನ ಮುಂಭಾಗದ ಅಂತರಘಟ್ಟಮ್ಮ ದೇವಸ್ಥಾನದಲ್ಲಿ ಮಲಗುತ್ತಿದ್ದರು ಎನ್ನಲಾಗಿದೆ.
ಸಂಬಂಧಿಕರಿಗೆ ಕರೆ
ಅರ್ಚಕರು ವೃದ್ಧೆಯ ಅಕ್ಕನ ಮಗನಿಗೆ ಕರೆ ಮಾಡಿದ್ದು, ಬಂದು ನೋಡಲಾಗಿ ವೃದ್ಧೆಯ ಮುಖ ಭಾಗದಲ್ಲಿ ರಕ್ತ ಸೋರುತ್ತಿತ್ತು ಎಂದು ತಿಳಿದುಬಂದಿದೆ.
ಅಜ್ಜಿಯ ಮೂಗುತಿ, ಕಿವಿಯೋಲೆ ಕಿತ್ತುಕೊಂಡು ಹೋಗಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

https://suddikanaja.com/2022/12/06/today-arecanut-rate-in-karnataka-153/

error: Content is protected !!