
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯ ವಿವಿಧೆಡೆ ಪೊಲೀಸರು ದಿಢೋರ್ ದಾಳಿ ನಡೆಸಿದ್ದಾರೆ. ಒಟ್ಟು 557 ಕೋಟ್ಪಾ ಪ್ರಕರಣಗಳನ್ನು ದಾಖಲಿಸಿದ್ದು, ಏಳು ಎಫ್.ಐ.ಆರ್.ಗಳನ್ನು ಹಾಗೂ 182 ಲಘು ಪ್ರಕರಣಗಳನ್ನು ದಾಖಲಿಸಲಾಗಿದೆ.
READ | ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರ ಖಡಕ್ ವಾರ್ನಿಂಗ್, ಏಳು ದಿನಗಳ ಡೆಡ್ ಲೈನ್
ಎಲ್ಲೆಲ್ಲಿ ದಾಳಿ, ಕಾರಣವೇನು?
ಶಾಲಾ ಕಾಲೇಜುಗಳ ಆವರಣದಿಂದ 100 ಗಜಗಳ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಪೆಟ್ಟಿ ಅಂಗಡಿ, ಜೆರಾಕ್ಸ್ ಅಂಗಡಿ ಮತ್ತು ಬೇಕರಿಗಳ ಮೇಲೆ ಮತ್ತು ಸಾರ್ವಜನಿಕವಾಗಿ ಉಪಟಳ ನೀಡುತ್ತಿದ್ದವರ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ.
ಶಿವಮೊಗ್ಗ ಎ ಉಪ ವಿಭಾಗದ 14 ಶಾಲಾ ಕಾಲೇಜುಗಳ ಹತ್ತಿರ 110 ಕೋಟ್ಪಾ ಸ್ಥಳ ದಂಡ ಪ್ರಕರಣಗಳು, 2 ಕೋಟ್ಪಾ ಕಾಯ್ದೆಯಡಿ ಎಫ್.ಐಆರ್ ಮತ್ತು 2 ಲಘು ಪ್ರಕರಣಗಳನ್ನು ದಾಖಲಿಸಲಾಗಿದೆ.
ಶಿವಮೊಗ್ಗ ಬಿ ಉಪ ವಿಭಾಗದ 15 ಶಾಲಾ ಕಾಲೇಜುಗಳ ಹತ್ತಿರ 146 ಕೋಟ್ಪಾ ಸ್ಥಳ ದಂಡ ಪ್ರಕರಣಗಳು ಮತ್ತು 30 ಲಘು ಪ್ರಕರಣಗಳು, ಶಿಕಾರಿಪುರ ಉಪ ವಿಭಾಗದ 6 ಶಾಲಾ ಕಾಲೇಜುಗಳ ಹತ್ತಿರ 41 ಕೋಟ್ಪಾ ಸ್ಥಳ ದಂಡ ಪ್ರಕರಣಗಳು ಮತ್ತು 97 ಲಘು ಪ್ರಕರಣಗಳು, ಸಾಗರ ಉಪ ವಿಭಾಗದ 5 ಶಾಲಾ ಕಾಲೇಜುಗಳ ಹತ್ತಿರ 29 ಕೋಟ್ಪಾ ಸ್ಥಳ ದಂಡ ಪ್ರಕರಣಗಳು, ಭದ್ರಾವತಿ ಉಪ ವಿಭಾಗದ 17 ಶಾಲಾ ಕಾಲೇಜುಗಳ ಹತ್ತಿರ 136 ಕೋಟ್ಪಾ ಸ್ಥಳ ದಂಡ ಪ್ರಕರಣಗಳು, 5 ಕೋಟ್ಪಾ ಕಾಯ್ದೆಯಡಿ ಎಫ್.ಐಆರ್ ಮತ್ತು ತೀರ್ಥಹಳ್ಳಿ ಉಪ ವಿಭಾಗದ 7 ಶಾಲಾ ಕಾಲೇಜುಗಳ ಹತ್ತಿರ 95 ಕೋಟ್ಪಾ ಸ್ಥಳ ದಂಡ ಪ್ರಕರಣಗಳು ಮತ್ತು 53 ಲಘು ಪ್ರಕರಣಗಳು ಸೇರಿ, ಜಿಲ್ಲೆಯಾದ್ಯಂತ ಒಟ್ಟು 64 ಶಾಲಾ ಕಾಲೇಜುಗಳ ಹತ್ತಿರ ಒಟ್ಟು 557 ಕೋಟ್ಪಾ ಪ್ರಕರಣಗಳು, 7 ಕೋಟ್ಪಾ ಕಾಯ್ದೆಯಡಿ ಎಫ್.ಐಆರ್ ಗಳು ಮತ್ತು 182 ಲಘು ಪ್ರಕರಣಗಳನ್ನು ದಾಖಲಿಸಲಾಗಿದೆ.
Fruit flower exhibition | ಪುಷ್ಟದಲ್ಲಿ ಅರಳಿದ ಪುನೀತ್, ಶಿವಮೊಗ್ಗ ಏರ್ಪೋರ್ಟ್, ಇಲ್ಲಿಗೊಮ್ಮೆ ಭೇಟಿ ನೀಡಲೇಬೇಕು