sri balaji photo studio | ಫೋಟೋಗ್ರಾಫರ್ ಜೀವನಕಥೆ ಆಧಾರಿತ ಚಿತ್ರ ರಾಜ್ಯದಾದ್ಯಂತ ತೆರೆಗೆ, ಎಲ್ಲೆಲ್ಲಿ ಚಿತ್ರೀಕರಣ, ಯಾವಾಗ ರಿಲೀಸ್?

balaji photo studio

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಫೋಟೋಗ್ರಾಫರ್ ಜೀವನಕಥೆಯ ಚಿತ್ರ  ‘ಶ್ರೀ ಬಾಲಾಜಿ ಫೋಟೊ ಸ್ಟುಡಿಯೋ’ ಚಲನಚಿತ್ರವು ಜನವರಿ 6ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಾಯಕ ಹಾಗೂ ನಿರ್ದೇಶಕ ರಾಜೀವ್ ಧ್ರುವ ತಿಳಿಸಿದರು.

READ | ಹೊಸ ವರ್ಷದ ಪಾರ್ಟಿ ವೇಳೆ ಹಾರಿದ ಗುಂಡು, ಫೈರಿಂಗ್ ಮಾಡಿದ ವ್ಯಕ್ತಿಯೇ ಸಾವು

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೆ ಫೋಟೋಗ್ರಾಫರ್ ಕುರಿತು ಚಿತ್ರ ಬಂದಿರಲಿಲ್ಲ. ಕ್ಯಾಮೆರಾ ಹಾಗೂ ಸ್ಟುಡಿಯೋದಲ್ಲಿ ನಡೆಯುವ ಘಟನೆಗಳನ್ನು ಆಧರಿಸಿ ಚಿತ್ರ ನಿರ್ಮಿಸಲಾಗಿದೆ ಎಂದು ಹೇಳಿದರು.

‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ನಟನಾಗಿ ಅಭಿನಯಿಸಿದ್ದು, 2019 ರಲ್ಲಿ ಮುಕ್ತಾಯವಾದ ಈ ಧಾರಾವಾಹಿ ನಂತರ ಚಲನಚಿತ್ರದಲ್ಲಿ ಭಾಗವಹಿಸಬೇಕೆಂಬ ಅಭಿಲಾಷೆಯಿಂದ ಈ ಚಿತ್ರವನ್ನು ನಿರ್ದೇಶಿಸಿ ನಟಿಸಿದ್ದೇನೆ.
ರಾಜೀವ್ ಧ್ರುವ, ನಿರ್ದೇಶಕ

47 ಹೆಚ್ಚು ಕಲಾವಿದರು, ಮಲೆನಾಡು, ಉತ್ತರ ಕನ್ನಡದಲ್ಲಿ ಶೂಟಿಂಗ್
ವಿಭಿನ್ನ ಕಥೆಯುಳ್ಳ ಈ ಚಿತ್ರವನ್ನು ಮಲೆನಾಡು, ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಶೇ.95ರಷ್ಟು ಚಿತ್ರೀಕರಣ ಮಾಡಲಾಗಿದೆ. 47 ಕ್ಕೂ ಹೆಚ್ಚು ಕಲಾವಿದರಿದ್ದು, ನಾಯಕ ಹಾಗೂ ನಾಯಕಿ ಪಾತ್ರವಿಲ್ಲ. ಎಲ್ಲರೂ ಆಯಾ ಸಂದರ್ಭಕ್ಕೆ ನಟನೆ ಮಾಡಿದ್ದಾರೆ. ಉತ್ತರ ಕನ್ನಡದ ಸವಿಯಾದ ಸ್ಪಷ್ಟ ಕನ್ನಡ ಭಾಷೆ ಬಳಸಲಾಗಿದೆ. ಒಂದು ಮುದ್ದಾದ ಪ್ರೇಮ ಕಥೆ ಮುಜುಗರವಿಲ್ಲದೇ ನೋಡಬಹುದಾಗಿದೆ ಎಂದು ತಿಳಿಸಿದರು.
2.27 ಗಂಟೆ ಚಿತ್ರದಲ್ಲಿಲ್ಲ ಹೊಡೆದಾಟ
ಚಿತ್ರದಲ್ಲಿ ಎರಡು ಹಾಡುಗಳಿವೆ. ಯಾವುದೇ ಹೊಡೆದಾಟ, ಅತಿರೇಕವಿಲ್ಲ. 2 ಗಂಟೆ 27 ನಿಮಿಷದ ಈ ಚಿತ್ರ ಹೊಸ ವರ್ಷಕ್ಕೆ ಹೊಸತನ ತರುತ್ತದೆ ಎಂಬ ನಂಬಿಕೆ ಇದೆ. ಪ್ರೇಕ್ಷಕರು ಕುಟುಂಬ ಸಮೇತರಾಗಿ ಬಂದು ಚಿತ್ರ ನೋಡಿ ಶುಭ ಹಾರೈಸಬೇಕೆಂದು ಮನವಿ ಮಾಡಿದರು.
ಮಾಧ್ಯಮಗೋಷ್ಠಿಯಲ್ಲಿ ನಟ ಸಂಪತ್ ಜಯರಾಮ್, ರವಿ ಸಾಲಿಯಾನ್ ಇದ್ದರು.

https://suddikanaja.com/2022/12/31/happy-new-year-2023-wishes/

error: Content is protected !!