Punith Rajkumar Fans | ಶಿವಮೊಗ್ಗದ ಯುವಕರಿಂದ ಬೆಂಗಳೂರಿನ ಅಪ್ಪು ಸಮಾಧಿವರೆಗೆ ಸೈಕಲ್ ಜಾಥಾ, ಕಾರಣವೇನು?

Cycle Jatha

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನೆನಪಿನಲ್ಲಿ ಸಾಮಾಜಿಕ ಆಸಕ್ತಿಯನ್ನಿಟ್ಟುಕೊಂಡು ಸೈಕಲ್ ಜಾಥಾವನ್ನು ಇಬ್ಬರು ಉತ್ಸಾಹಿ ಹಾಗೂ ಅಪ್ಪು ಅಭಿಮಾನಿಗಳು ಶಿವಮೊಗ್ಗದಿಂದ ಬೆಂಗಳೂರಿನವರೆಗೆ ಹಮ್ಮಿಕೊಂಡಿದ್ದಾರೆ ಎಂದು ಅಪ್ಪು ಅಭಿಮಾನಿಗಳಾದ ಚಿರಂಜೀವಿ ಬಾಬು ಮತ್ತು ನಜರುಲ್ಲಾ ಹೇಳಿದರು.

READ | ವಾರದಲ್ಲಿ ಐದು ದಿನ ಕಚೇರಿ, ಕರ್ತವ್ಯ ಕಾಲಾವಧಿ ಒಂದು ಗಂಟೆ ಹೆಚ್ಚಳ, 42 ಪ್ರಮುಖ ಬೇಡಿಕೆ ಸಲ್ಲಿಕೆ

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಟಿ ಕೋಟಿ ಕನ್ನಡಿಗರು ಅಪ್ಪುವನ್ನು ಇಂದಿಗೂ ಹೃದಯದಲ್ಲಿ ಇಟ್ಟುಕೊಂಡಿದ್ದಾರೆ. ಅವರ ನೆನಪಿನಲ್ಲಿ ಇಡೀ ರಾಜ್ಯದಾದ್ಯಂತ ವಿವಿಧ ರೀತಿಯ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಶಿವಮೊಗ್ಗದ ಅಭಿಮಾನಿಗಳಾದ ಗೌಸ್ ಪೀರ್ ಹಾಗೂ ಸೈಯ್ಯದ್ ಎಂಬ ಇಬ್ಬರು ಯುವಕರು ಫೆ.13ರಂದು ಬೆಳಗ್ಗೆ 9.30ಕ್ಕೆ ನೆಹರೂ ಕ್ರೀಡಾಂಗಣದಿಂದ ಸೈಕಲ್ ಜಾಥಾದ ಮೂಲಕ ಬೆಂಗಳೂರಿನ ಅಪ್ಪು ಸಮಾಧಿಗೆ ತಲುಪಿ ನಮನ ಸಲ್ಲಿಸಲಿದ್ದಾರೆ ಎಂದರು.
ಸರ್ಕಾರಿ ಶಾಲೆ, ಆಸ್ಪತ್ರೆಗಳ ಉಳಿವಿಗೆ ಜಾಥಾ
ಅಪ್ಪು ನೆನಪಿನ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದರೆ ಸರ್ಕಾರಿ ಶಾಲೆಗಳನ್ನು ಉಳಿಸುವುದು ಮತ್ತು ಸರ್ಕಾರಿ ಆಸ್ಪತ್ರೆ ಸೌಲಭ್ಯ ಹೆಚ್ಚಿಸುವುದು, ಪ್ರತಿಯೊಬ್ಬರಿಗೂ ಆರೋಗ್ಯ ಮತ್ತು ಶಿಕ್ಷಣ ಕೊಡುವುದೇ ಆಗಿದೆ. ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗುವ ದಾರಿಯ ಅನೇಕ ನಗರಗಳಲ್ಲಿ ಅಪ್ಪು ಗಾಯನದ ಮೂಲಕ ಜಾಗೃತಿ ಮೂಡಿಸಲಾಗುವುದು. ಇದಕ್ಕಾಗಿ ಸೈಕಲ್‍ನಲ್ಲಿಯೆ ಸೌಂಡ್ ಸಿಸ್ಟಂ ಜೋಡಿಸಿದ್ದಾರೆ ಎಂದರು.

error: Content is protected !!