Sahyadri college | 2 ತಿಂಗಳಾದರೂ ಶುರುವಾಗದ ಡಿಗ್ರಿ ಕ್ಲಾಸ್, ಕತ್ತಲಲ್ಲಿ ವಿದ್ಯಾರ್ಥಿಗಳ‌ ಭವಿಷ್ಯ

Sahyadri college

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕುವೆಂಪು ವಿವಿ ವ್ಯಾಪ್ತಿಯ ಸಹ್ಯಾದ್ರಿ ಕಲಾ ಕಾಲೇಜಿನ (Sahyadri arts college) ಪ್ರಥಮ ವರ್ಷದ ವಿದ್ಯಾರ್ಥಿಗಳು ಕಾಲೇಜು ಮುಂದೆ ಪ್ರತಿಭಟನೆ ನಡೆಸಿದರು.
2023-24ನೇ ಶೈಕ್ಷಣಿಕ ವರ್ಷ ಆರಂಭಗೊಂಡು ಎರಡು ತಿಂಗಳು ಕಳೆದರೂ ತರಗತಿಗಳು ಆರಂಭವಾಗಿಲ್ಲ. “ಅಧ್ಯಾಪಕರು ಮೌಲ್ಯಮಾಪನಕ್ಕೆ ತೆರಳಿದ್ದು, ತರಗತಿ ಆರಂಭಿಸಲಾಗುವುದು” ಎಂಬ ಭರವಸೆ ನೀಡಲಾಗಿತ್ತು. ಆದರೆ, ಇದುವರೆಗೆ ತರಗತಿ ಆರಂಭಿಸಿಲ್ಲ ಎಂದು ವಿದ್ಯಾರ್ಥಿಗಳ ಆರೋಪಿಸಿದರು.

READ | ಶಿವಮೊಗ್ಗದಲ್ಲಿ ಬೈಕ್ ವ್ಹೀಲಿಂಗ್, ಬಿತ್ತು ಭಾರೀ ದಂಡ, ಪೊಲೀಸರು ಹೇಳಿದ್ದೇನು?

ಹಬ್ಬಗಳ ನೆಪವೊಡ್ಡಿ ತರಗತಿ ವಿಳಂಬ
ಅ.5ರಿಂದ ದ್ವಿತೀಯ ಮತ್ತು ತೃತೀಯ ವರ್ಷದ ತರಗತಿಗಳು ಆರಂಭವಾಗಿವೆ. ಆದರೆ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ದೀಪಾವಳಿ, ದಸರಾ ಹಬ್ಬದ ನೆಪವೊಡ್ಡ ಲಾಗಿದೆ. ಈಗ ಅತಿಥಿ ಉಪನ್ಯಾಸಕರಿಲ್ಲ ಎಂಬ ಕಾರಣ ನೀಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ದೂರದಿಂದ ಬಂದು ಕ್ಲಾಸ್ ಇಲ್ಲದೇ ವಾಪಸ್
ಕಾಲೇಜಿಗೆ ಸುತ್ತಮತ್ತಲ ಹಳ್ಳಿಗಳಿಂದ, ಹಾಸ್ಟೆಲ್‌ಗಳಿಂದ ಪ್ರತಿದಿನ ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸುತ್ತಾರೆ. ಇಲ್ಲಿ ತರಗತಿಗಳಿಲ್ಲದೇ ವಾಪಸ್ ತೆರಳುವಂತಾಗಿದೆ. ಇದರಿಂದ ವಿದ್ಯಾರ್ಥಿಗಳ ಹಣ ಮತ್ತು ಸಮಯ ವ್ಯಯ ಆಗುತ್ತಿದೆ ಬಿಟ್ಟರೆ ಬೇರೆನೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಲಾಗಿದೆ‌
ಪ್ರಾಂಶುಪಾಲರ ವಿರುದ್ಧ ಧಿಕ್ಕಾರ
ತರಗತಿಗಳು ನಡೆಯದೇ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಪರೀಕ್ಷೆಗಳನ್ನು ಎದುರಿಸುವುದು ಹೇಗೆ ಎಂಬ ಭೀತಿ ಕಾಡುತ್ತಿದೆ. ಆದರೂ ಕ್ಲಾಸ್ ಆರಂಭಿಸಿಲ್ಲ ಎಂಬ ಕಾರಣಕ್ಕೆ ಸ್ಥಳಕ್ಕೆ ಆಗಮಿಸಿದ ಪ್ರಾಂಶುಪಾಲರ ವಿರುದ್ಧ ವಿದ್ಯಾರ್ಥಿಗಳು ಧಿಕ್ಕಾರ ಕೂಗಿದರು.
ಈ ಸಂದರ್ಭದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು.
ವಕೀಲ ಕೆ.ಪಿ. ಶ್ರೀಪಾಲ್, ಹಳೆಯ ವಿದ್ಯಾರ್ಥಿ ಅ.ನ. ವಿಜಯೇಂದ್ರ, ಡಿಎಸ್‌ಎಸ್ ಮುಖಂಡ ಎಂ. ಗುರುಮೂರ್ತಿ ಇತರರು ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ನೀಡಿದರು.

error: Content is protected !!