Amulya Shodha Museum | ಅಮೂಲ್ಯ ಶೋಧದಲ್ಲಿ ಛತ್ರಪತಿ ಶಿವಾಜಿ ಪ್ರತಿಮೆ‌ ಅನಾವರಣ

amulya shodha

 

 

ಸುದ್ದಿ‌ ಕಣಜ.ಕಾಂ‌‌ ಶಿವಮೊಗ್ಗ
SHIVAMOGGA: ಅಮೂಲ್ಯ ಶೋಧ ಟ್ರಸ್ಟ್ (Amulya Shodha trust) ವತಿಯಿಂದ ಮಾ.24ರಂದು ಬೆಳಗ್ಗೆ 11.45 ಗಂಟೆಗೆ ಲಕ್ಕಿನಕೊಪ್ಪದಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ, ಶಿವಾಜಿ ಮಹಾರಾಜರ ಜಯಂತಿ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ ಎಂದು ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಎಚ್. ಖಂಡೋಬರಾವ್ ತಿಳಿಸಿದರು.

READ | ಆಸ್ಪತ್ರೆಯ ಸ್ಕ್ಯಾನಿಂಗ್ ಯಂತ್ರ ವಶಕ್ಕೆ ಪಡೆದು ಸೀಜ್ ಮಾಡಿದ ಆರೋಗ್ಯ ಇಲಾಖೆ ಅಧಿಕಾರಿಗಳು, ಕಾರಣವೇನು?

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಾಜಿ ಹಿಂದೂ ಧರ್ಮದ ಸಂರಕ್ಷಕರಾಗಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಪ್ರತಿಮೆಯನ್ನು ಬಾಗಲಕೋಟೆಯ ಮಾರುತಿರಾವ್ ಶಿಂಧೆ ಅವರು ಅಮೂಲ್ಯ ಶೋಧಕ್ಕೆ ನೀಡಿರುತ್ತಾರೆ. ಅದರ ಅನಾವರಣವನ್ನು ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ನೆರವೇರಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಶಿವಾಜಿ ಮಹಾರಾಜರ 396ನೇ ಜಯಂತಿ ಉತ್ಸವವನ್ನು ಹಾಗೂ ಮಗರ್‌ ವಾಹಿನಿ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು. ಈ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಕೆಕೆಎಂಪಿ ರಾಜ್ಯಾಧ್ಯಕ್ಷ ಎಸ್. ಸುರೇಶ್ ರಾವ್ ಸಾಠೆ, ಶಾಸಕರಾದ ಕೆ.ಬಿ. ಅಶೋಕ ನಾಯ್ಕ್, ಎಸ್. ರುದ್ರೇಗೌಡ, ಡಿ.ಎಸ್. ಅರುಣ್, ವೀರಶೈವ ಮಹಾಸಭಾದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಕ್ಷತ್ರಿಯ ಮರಾಠ ಸಂಘದ ಅಧ್ಯಕ್ಷ ವಿ.ಆರ್. ದಿನೇಶ್‌ರಾವ್ ಚೌವ್ಹಾಣ್, ಪ್ರಮುಖರಾದ ಚಂದ್ರಾರಾವ್ ಗಾರ್ಗೆ, ಚೂಡಾಮಣಿ ಪವಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು‌ ತಿಳಿಸಿದರು.
ಪ್ರಮುಖರಾದ ರಣಜಿತ್ ಕೆ. ಮಾಗರ್, ಟಿ.ಆರ್. ಅಶ್ವತ್ಥನಾರಾಯಣ, ರಮೇಶ್ ಬಾಬು, ಎಸ್.ಬಿ. ಅಶೋಕ್‌ ಕುಮಾರ್ ಇದ್ದರು.

Dacoit gang | ಶಿವಮೊಗ್ಗದಲ್ಲಿ‌ ದರೋಡೆ ಗ್ಯಾಂಗ್ ಅಂದರ್, 9 ಜನ ಸೇರಿ ಒಬ್ಬ ವ್ಯಕ್ತಿಗೆ ಲೂಟಿ ಮಾಡಿದ್ದು ಹೇಗೆ?

error: Content is protected !!