Rama navami | ಶಿವಮೊಗ್ಗದಾದ್ಯಂತ ಸಂಭ್ರಮದಿಂದ ನಡೆದ ರಾಮ ನವಮಿ, ಎಲ್ಲಿ ಏನೇನಾಯ್ತು?

Rama navami

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಶ್ರೀ ರಾಮ ನವಮಿಯನ್ನು ಅತ್ಯಂತ‌‌ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ದೇವಸ್ಥಾನಗಳಲ್ಲಿ‌ ವಿಶೇಷ ಪೂಜೆ ಸಲ್ಲಿಸಲಾಯಿತು.
ಬೆಳಗ್ಗಿನಿಂದಲೇ ದೇವಸ್ಥಾನಗಳಲ್ಲಿ ಪಂಚಾಮೃತ ಅಭಿಷೇಕ, ಗಣಹೋಮ, ಹನುಮ ಮೂಲಮಂತ್ರ ಜಪ, ರಾಮನಾಮ ಜಪ, ಭಜನೆ ಕಾರ್ಯಕ್ರಮಗಳು ನಡೆದವು.

READ | ಮಾಲೀಕರ ಕೈಸೇರಿದ 9 ಮೊಬೈಲ್, ಪೊಲೀಸ್ ಕಾರ್ಯಕ್ಕೆ‌ ಮೆಚ್ಚುಗೆ

ಎಲ್ಲಿ ಏನೇನು ಕಾರ್ಯಕ್ರಮ?
ನಗರದ ಪುರಾಣ ಪ್ರಸಿದ್ದ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಮೂಲರಾಮ ಹಾಗೂ ಉತ್ಸವ ರಾಮರಿಗೆ ಅಭಿಷೇಕ ನಡೆಯಿತು. ದುರ್ಗಿಗುಡಿಯ ಸೀತಾರಾಮ ಮಂದಿರ, ಜಯನಗರದ ಶ್ರೀರಾಮ ದೇವಸ್ಥಾನ, ಕೆ.ಆರ್. ಪುರಂ ರಸ್ತೆಯ ರಾಮಮಂದಿರ ಸೇರಿದಂತೆ ಹಲವು ಆಂಜನೇಯ ಮತ್ತು ಶ್ರೀರಾಮ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲಾಯಿತು.
ನಗರವೂ ಸೇರಿದಂತೆ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ರಥೋತ್ಸವ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ರಾಮತಾರಕ ಹೋಮ, ಭಕ್ತಿಗೀತೆಗಳ ಗಾಯನ, ಹನುಮೋತ್ಸವ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗಗಳು ಜರುಗಿದವು.
ಉಷಾ ನರ್ಸಿಂಗ್ ಹೋಂ ಬಳಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದಿಂದ ರಾಮನವಮಿಯನ್ನು ಆಚರಿಸಲಾಯಿತು.
ಬಸ್ ನಿಲ್ದಾಣದಲ್ಲಿ ಕಲ್ಪವೃಕ್ಷ ಆಟೋ ನಿಲ್ದಾಣ ಮಿತ್ರರಿಂದ ಸಾರ್ವಜನಿಕರಿಗೆ ಕೋಸಂಬರಿ, ಪಾನಕ ಮತ್ತು ಮಜ್ಜಿಗೆ ವಿತರಿಸಲಾಯಿತು.

Assembly election | ಎಷ್ಟು ಹಣ ಕೊಂಡೊಯ್ಯಬಹುದು, ಮದುವೆ ಅನುಮತಿ ಬೇಕಾ? ಪಕ್ಷವಷ್ಟೇ ಅಲ್ಲ ಜನರಿಗೂ ಕಂಡಿಷನ್ಸ್

error: Content is protected !!