Cinema | ಯೂರೋಪಿನಲ್ಲೂ ಡಿಮ್ಯಾಂಡ್ ಇರೋ ಪಕ್ಕಾ ಉತ್ತರ ಕನ್ನಡ ಭಾಷೆಯ ‘ನಮ್ ನಾಣಿ ಮದ್ವೆ ಪ್ರಸಂಗ’ ಚಿತ್ರ ಬಿಡುಗಡೆಗೆ ರೆಡಿ

nani madhuve

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಪಕ್ಕಾ ಉತ್ತರ ಕನ್ನಡ (uttara kannada) ಭಾಷೆ ಹಾಗೂ ಅಲ್ಲಿನ ಸಂಸ್ಕೃತಿಯನ್ನೊಳಗೊಂಡು ನಿರ್ಮಾಣವಾಗಿರುವ ‘ನಮ್ ನಾಣಿ ಮದ್ವೆ ಪ್ರಸಂಗ’ ಏಪ್ರಿಲ್ 7ರಂದು ರಾಜ್ಯದಾದ್ಯಂತ ಸುಮಾರು 100 ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಾಯಕ ನಟ ಹಾಗೂ ನಿರ್ದೇಶಕ ಹೇಮಂತ್ ಹೆಗಡೆ ತಿಳಿಸಿದರು.

READ | ಶಿವಮೊಗ್ಗದಿಂದ ಎರಡು ರೈಲುಗಳ ಪುನರಾರಂಭ, ಇಲ್ಲಿದೆ ವೇಳಾಪಟ್ಟಿ

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಕೃಷಿಯಲ್ಲಿ ತೊಡಗಿರುವ ಹುಡುಗರ ಮದುವೆಗೆ ಹುಡುಗಿಯರೇ ಸಿಗುತ್ತಿಲ್ಲ ಎಂಬ ಕೂಗು ಎದ್ದಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಸಮಸ್ಯೆ ಎಂದು ಸಿನಿಮಾ ಮಾಡಲು ನಿರ್ಧರಿಸಿ ಕ್ಷೇತ್ರಕಾರ್ಯಕ್ಕೆ ಹೊರಟಾಗ ಗೊತ್ತಾಗಿದ್ದು, ಇದು ಉತ್ತರ ಕನ್ನಡದ ಸಮಸ್ಯೆ ಮಾತ್ರವಲ್ಲ ಇಡೀ ರಾಜ್ಯದಲ್ಲಿದೆ. ಇದನ್ನೇ ವಸ್ತುವಾಗಿಸಿಕೊಂಡು ಚಿತ್ರ ಮಾಡಲಾಗಿದೆ ಎಂದರು.
ಎಲ್ಲೆಲ್ಲಿ ಚಿತ್ರೀಕರಣ?
ಉತ್ತರ ಕನ್ನಡದ ನವಿರಾದ ಭಾಷೆಯಲ್ಲಿಯೇ ಸಂಭಾಷಣೆ ಅಳವಡಿಸಿಕೊಂಡು ಚಿತ್ರ ನಿರ್ಮಾಣ ಮಾಡಲಾಗಿದೆ. ಇದು ಪೂರ್ತಿಯಾಗಿ ಶಿರಸಿ, ಸಿದ್ಧಾಪುರ, ಹೊನ್ನಾವರ ಭಾಗದಲ್ಲಿಯೇ ಚಿತ್ರೀಕರಿಸಲಾಗಿದೆ. ಗಂಭೀರವಾದ ಹಾಸ್ಯ ಇದರಲ್ಲಿದೆ ಎಂದು ತಿಳಿಸಿದರು.
ಚಲನಚಿತ್ರದಲ್ಲಿನ ತಾರಾಗಣ
ಪದ್ಮಜಾರಾವ್, ಗೀತಾಂಜಲಿ ಮಂಗಲ್ ಸೇರಿದಂತೆ ಅನೇಕ ಕಲಾವಿದರು ಇದ್ದಾರೆ. ಚಿತ್ರೀಕರಣ ಪೂರ್ಣಗೊಂಡು ಹಾಡುಗಳನ್ನು ಯುಟೂಬ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು, ತಂಗಿ ನಿನಗೆ ಹಾಡಿಕೆ 2 ಲಕ್ಷ ವ್ಯೂವ್ಸ್ ಬಂದಿವೆ. ಯೂರೋಪಿನಲ್ಲಿ ಚಿತ್ರ ಪ್ರದರ್ಶನಕ್ಕೆ ಕೂಡ ಬೇಡಿಕೆ ಬಂದಿದೆ ಎಂದರು.
ಮಲೆನಾಡು ಸೊಗಡಿನ ಚಿತ್ರ
ಮಂಜುನಾಥ್ ಹೆಗಡೆ ಮಾತನಾಡಿ, ಒಂದು ಚೂರು ಅಶ್ಲೀಲ ಇಲ್ಲದೆ ಹಾಸ್ಯಭರಿತವಾದ ಮಲೆನಾಡಿನ ಸೊಗಡಿನ ಚಿತ್ರ ಇದಾಗಿದೆ. ಸಾಮರ್ಥ್ಯಕ್ಕೂ ಮೀರಿ ಸಿನಿಮಾ ಮಾಡಬಹುದು. ಅದರ ಯಶಸ್ಸು ಪ್ರೇಕ್ಷಕರಿಗೆ ಬಿಟ್ಟಿದ್ದು. ಹಳ್ಳಿಯ ಪ್ರತೀ ಮನೆಯಲ್ಲಿನ ಈ ಸಮಸ್ಯೆಯನ್ನು ಇಲ್ಲಿ ತೋರಿಸಲಾಗಿದೆ ಎಂದ ತಿಳಿಸಿದರು. ನಾಯಕ ನಟಿ ಶ್ರೇಯಾ ವಸಂತ್ ಇದ್ದರು.

Guest Column | ಉತ್ತರ ಕನ್ನಡದ ನೆಲದಲ್ಲಿ ಕನ್ನಡ ಭಾಷೆಯ ಪ್ರಾಚೀನತೆ

error: Content is protected !!