Deportation | ಬಾಂಬ್ ಸುನೀಲ್, ವಾರಂಬಳ್ಳಿ‌ ರಾಘುಗೆ ಗಡಿಪಾರು ಮಾಡಿ ಆದೇಶ, ಒಬ್ಬೊಬ್ಬರ ಮೇಲಿವೆ ಹತ್ತಾರು ಕೇಸ್

Gadiparu deportation

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಹೊಸನಗರ ತಾಲೂಕು ನಂದ್ಯಾಳಕೊಪ್ಪ ಕಳೂರು ಗ್ರಾಮದ ಸುನೀಲ್ ಕುಮಾರ್ ಅಲಿಯಾಸ್ ಬಾಂಬ್ ಸುನೀಲ್(47) ವರ್ಷ, ವಾರಂಬಳ್ಳಿಯ ರಾಘವೇಂದ್ರ ಅಲಿಯಾಸ್ ವಾರಂಬಳ್ಳಿ ರಾಘು(37) ಇವರನ್ನು ಗಡಿಪಾರು ಮಾಡಿ ಆದೇಶಿಸಲಾಗಿದೆ.
ಇವರುಗಳು ಸಮಾಜಕ್ಕೆ ಧಕ್ಕೆಯಾಗುವಂತಹ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂತಹ ಕೃತ್ಯಗಳಾದ ಕೊಲೆ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಮಾದಕ ವಸ್ತುಗಳ ಅಕ್ರಮ ಸಾಗಾಣಿಕೆಯಂತಹ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿರುತ್ತಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

READ | ಏನಿದು ನೀತಿಸಂಹಿತೆ, ಏನೆಲ್ಲ ಮಾಡುವಂತಿಲ್ಲ, ಯಾವುದಕ್ಕೆ ವಿನಾಯಿತಿ ಇರಲಿದೆ?

ಇಬ್ಬರ ಮೇಲೂ ಇವೆ ಹಲವು ಕೇಸ್
ಸುನೀಲ್ ಕುಮಾರ್ ವಿರುದ್ಧ ಒಟ್ಟು 11 ಪ್ರಕರಣಗಳು ದಾಖಲಾಗಿದ್ದು, ರಾಘವೇಂದ್ರನ ವಿರುದ್ಧ ಒಟ್ಟು 10 ಪ್ರಕರಣಗಳು ದಾಖಲಾಗಿರುತ್ತವೆ. ಆದರೂ ಸಹ ಇವರುಗಳು ತಮ್ಮ ನಡವಳಿಕೆಯಲ್ಲಿ ಸುಧಾರಣೆ ಮಾಡಿಕೊಳ್ಳದೇ ತಮ್ಮ ಚಟುವಟಿಕೆಯನ್ನು ಮುಂದುವರಿಸಿಕೊಂಡು ಬಂದಿರುವುದರಿಂದ, ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯುವ ಸಲುವಾಗಿ ಇವರನ್ನು ಗಡಿಪಾರು ಮಾಡಲಾಗಿದೆ.
ಸಾಗರ ಉಪ ವಿಭಾಗೀಯ ದಂಡಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿ ಅವರು ಸುನೀಲ್ ಕುಮಾರ್ ನನ್ನು ಮಾ.3 ರಿಂದ 2024ರ ಮಾ.3ರ ವರೆಗೆ ಒಂದು ವರ್ಷದ ಅವಧಿಗೆ ರಾಯಚೂರು ಜಿಲ್ಲೆಗೆ ಮತ್ತು ರಾಘವೇಂದ್ರ ಮಾ.3 ರಿಂದ 2024ರ ಮಾ. 3 ರ ವರೆಗೆ ಒಂದು ವರ್ಷದ ಅವಧಿಗೆ ಬಳ್ಳಾರಿ ಜಿಲ್ಲೆಗೆ ಗಡಿಪಾರು ಮಾಡಿ ಆದೇಶಿಸಿರುತ್ತಾರೆ.

Deportation | ಭದ್ರಾವತಿಯ ಮೂವರು ರೌಡಿಶೀಟರ್’ಗಳ ಗಡಿಪಾರು ಆದೇಶ, ಕಾರಣವೇನು?

error: Content is protected !!