MESCOM | ನಾಳೆ ಶಿವಮೊಗ್ಗದ ತಾಲೂಕುಗಳಲ್ಲಿ ವಿದ್ಯುತ್ ಅದಾಲತ್, ಎಲ್ಲೆಲ್ಲಿ ನಡೆಯಲಿದೆ?

MESCOM

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಮಾ.18ರಂದು ಐದನೇ ವಿದ್ಯುತ್ ಅದಾಲತ್ ನಡೆಯಲಿದ್ದು, ಈ ಕೆಳಕಾಣಿಸಿದ ಹಳ್ಳಿಗಳಲ್ಲಿ ವಿದ್ಯುತ್ ಅದಾಲತ್ ವ್ಯವಸ್ಥೆ ಮಾಡಲಾಗಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

READ | ಪದವಿ ಪಾಸ್ ಆದವರಿಗೆ ಭರ್ಜರಿ ಉದ್ಯೋಗ ಅವಕಾಶ, ಕೆಪಿಎಸ್.ಸಿ ಅಧಿಸೂಚ‌ನೆ

ವಿದ್ಯುತ್ ಅದಾಲತ್ ಎಲ್ಲಿ, ಯಾವಾಗ?
ಶಿವಮೊಗ್ಗ ತಾಲೂಕಿನ- ಬಿ.ಬೀರನಹಳ್ಳಿ, ಸೇವಾಲಾಲ್ ದೇವಸ್ಥಾನ ಚನ್ನಹಳ್ಳಿ ಗ್ರಾಮ. ತೀರ್ಥಹಳ್ಳಿ ತಾಲೂಕಿನ- ನಾಲೂರು, ಮಂಡಗದ್ದೆ. ಭದ್ರಾವತಿ ತಾಲೂಕಿನ- ಹೊಸಹಳ್ಳಿ, ಮಂಗೋಟೆ. ಸಾಗರ ತಾಲೂಕಿನ ಕಲ್ಮನೆ, ಎಸ್ ಎಸ್ ಬೋಗ್. ಸೊರಬ ತಾಲೂಕಿನ – ಬಿಳವಾಣಿ, ತಲಗಡ್ಡೆ. ಹೊಸನಗರ ತಾಲೂಕಿನ- ಯಡೂರು. ಶಿಕಾರಿಪುರ ತಾಲೂಕಿನ- ಅರಷಿಣಗೆರೆ , ಚಿಕ್ಕಜಂಬೂರು ಗ್ರಾಮಗಳಲ್ಲಿ ವಿದ್ಯುತ್ ಅದಾಲತ್ ನಡೆಯಲಿದೆ.
ಆಯನೂರು ಶಾಖಾ ವ್ಯಾಪ್ತಿಯ ಕೋಹಳ್ಳಿ ಗ್ರಾಮ ಪಂಚಾಯಿತಿ, ಚೆನ್ನಹಳ್ಳಿ ಗ್ರಾಮದ ಸೇವಲಾಲ್ ದೇವಸ್ಥಾನದಲ್ಲಿ ಬೆಳಗ್ಗೆ 10.30 ಕ್ಕೆ ಮೆಸ್ಕಾಂ ವಿದ್ಯುತ್ ಅದಾಲತ್‍ನ್ನು ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡೆದುಕೊಂಡು ತಮ್ಮ ಸಮಸ್ಯೆಗಳನ್ನು ಅದಾಲತ್ ಮೂಲಕ ಪರಿಹರಿಸಿಕೊಳ್ಳಬಹುದಾಗಿದೆ ಎಂದು ಮನವಿ‌ ಮಾಡಲಾಗಿದೆ.

error: Content is protected !!