Dead body | ಚೀಲದಲ್ಲಿ ಕಟ್ಟಿದ್ದ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

Dead body

 

 

ಸುದ್ದಿ ಕಣಜ.ಕಾಂ ಭದ್ರಾವತಿ
BHADRAVATHI: ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಸನ್ಯಾಸಿ ಕೊಡಮಗ್ಗಿಯಲ್ಲಿ ಮಹಿಳೆಯೊಬ್ಬರ ಶವ ಕೊಳೆ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಶಿವಮೊಗ್ಗದ ರಾಗಿಗುಡ್ಡ ನಿವಾಸಿ ಮುಮ್ತಾಜ್ ಬೇಗಂ ಮೃತರು. ಇವರ ಶವವು ಚೀಲವೊಂದರಲ್ಲಿ ಕಟ್ಟಿ ಎಸೆದಿರುವುದಾಗಿ ಕಂಡುಬಂದಿದ್ದು, ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮುಮ್ತಾಜ್ ಅವರು ಹೊಳಲೂರು ಸುತ್ತ ಹೂವು‌ ಮಾರಾಟ ಮಾರಾಟ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

READ | ಶಿವಮೊಗ್ಗದಲ್ಲಿ ವಾಹನ ಸವಾರರಿಗೆ ಶಾಕ್ ನೀಡಿದ ಪೊಲೀಸ್

ದುರ್ವಾಸನೆಯಿಂದ ಪತ್ತೆಯಾಯ್ತು ಶವ
ಸಿದ್ಲಿಪುರ ಗ್ರಾಮದ ಆಟೋ ಚಾಲಕ ಸುಹೇಬ್ ವಿಶ್ರಾಂತಿ ಪಡೆಯುವುದಕ್ಕೆಂದು ತುಂಗಭದ್ರಾ ಸೇತುವೆ ಹತ್ತಿರದ ಆಲದ ಮರದ ಸಮೀಪ‌ ಹೋದಾಗ ಕಸದ ರಾಶಿಯ ಬಳಿಯಿಂದ ಕೆಟ್ಟ ವಾಸನ ಬರುತ್ತಿತ್ತು. ಈ ಬಗ್ಗೆ ತಕ್ಷಣ ಆತ ಮಾಹಿತಿ ನೀಡಿದ್ದಾನೆ. ಮುಮ್ತಾಜ್ ನಾಪತ್ತೆಯಾಗಿರುವ ಬಗ್ಗೆ ಇತ್ತೀಚೆಗೆ ಆಕೆಯ ಪತಿ ರಫಿಕ್ ಶಿವಮೊಗ್ಗ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.

error: Content is protected !!