Basavaraj Bommai | ಶೂರತ್ವದ ಮಾತನಾಡುವ ಕಾಂಗ್ರೆಸ್’ಗೆ 60 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳೇ ಇಲ್ಲ

Basawaraj Bommai

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶೂರತ್ವದ ಮಾತನಾಡುವ ಕಾಂಗ್ರೆಸ್’ನವರಿಗೆ ರಾಜ್ಯದ 60 ಕ್ಷೇತ್ರಗಳಲ್ಲಿ ಸರಿಯಾದ ಅಭ್ಯರ್ಥಿಗಳೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವ್ಯಂಗ್ಯವಾಡಿದರು.
ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರಿಯಾದ ಅಭ್ಯರ್ಥಿಗಳು ಇಲ್ಲದ್ದಕ್ಕೆ ಅಲ್ಲಿಂದ ಇಲ್ಲಿಂದ ತೆಗೆದುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

READ | ಚಾಕುದಿಂದ ಚುಚ್ಚಿ ಹಲ್ಲೆ, 5 ಜನರಿಗೆ ಶಿಕ್ಷೆ ವಿಧಿಸಿದ ಶಿವಮೊಗ್ಗ ನ್ಯಾಯಾಲಯ

ಕಾಂಗ್ರೆಸ್ ಹೀನಾಯ ಸೋಲು: ಸಿಎಂ ಬೊಮ್ಮಾಯಿ
ಕಳೆದ ಬಾರಿಗಿಂತ ಹೀನಾಯವಾಗಿ ಕಾಂಗ್ರೆಸ್ ಸೋಲುತ್ತದೆ. ಉಡಾಫೆ ಮಾತುಗಳನ್ನಾಡುತ್ತಾ ಗೆಲ್ಲುವ ಭ್ರಮೆಯಲ್ಲಿದ್ದಾರೆ. ಇದು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದರು.
ಬಿಜೆಪಿಯಲ್ಲಿ ಟೆಕೆಟ್ ಗಾಗಿ ಹೆಚ್ಚು ಪೈಪೋಟಿ
ಬಿಜೆಪಿಯಲ್ಲಿ ಟಿಕೆಟ್ ಗಾಗಿ ಹೆಚ್ಚು ಪೈಪೋಟಿ ಇದೆ. ಏ.8 -9 ರಂದು ಸಭೆ ಸೇರುತ್ತಿದ್ದೇವೆ. ನಂತರ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದರು.
ಅಭ್ಯರ್ಥಿಗಳ ಆಯ್ಕೆಯು ಕೆಳಹಂತದ ಕಾರ್ಯಕರ್ತರು, ಪದಾಧಿಕಾರಿಗಳು, ಜನರ ಭಾವನೆಯ ಆಧಾರದ ಮೇಲೆ ನಡೆಯುತ್ತಿದೆ. ಈ ಕುರಿತು ಸುದೀರ್ಘ ಚರ್ಚಿಸದ ನಂತರವೇ ಕ್ಷೇತ್ರದಿಂದ 3-4 ಹೆಸರು ಕಳುಹಿಸಲಾಗಿದೆ. ಈ ಕುರಿತು ದೆಹಲಿಯಲ್ಲಿ ಸಭೆ ನಡೆಯಲಿದ್ದು, ಫೈನಲ್‌ ಲಿಸ್ಟ್ ಅಲ್ಲಿ ಸಿದ್ಧಗೊಂಡು ಬಿಡಿಗಡೆಯಾಗಲಿದೆ ಎಂದರು.

ಮುಖ್ಯಮಂತ್ರಿಗೆ ಸಿಗಂದೂರು ಶಾಪ ತಟ್ಟಿದೆ, ಸಂಕ್ರಮಣದವರೆಗೆ ಕಾದು ನೋಡಿ

error: Content is protected !!