Property | ಆರಗ ಆಸ್ತಿ 3 ಪಟ್ಟು ಏರಿಕೆ, ಕಿಮ್ಮನೆ ಆಸ್ತಿಯಷ್ಟೇ ಸಾಲ! ಪೂರ‌್ಯಾನಾಯ್ಕ್ ಆಸ್ತಿ ಕಡಿಮೆ, ಯಾರದ್ದೆಷ್ಟಿದೆ ಆಸ್ತಿ? ಕಂಪ್ಲೀಟ್ ರಿಪೋರ್ಟ್‌

Nomination

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯ ವಿವಿಧ ವಿಧಾನಸಭೆ ಕ್ಷೇತ್ರ (Karnataka assembly election 2023)ಗಳಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಪ್ರಮುಖ ಅಭ್ಯರ್ಥಿಗಳ ಆಸ್ತಿ ವಿವರ ಕೆಳಗಿನಂತಿದೆ.

READ | ಸರಳವಾಗಿ ಬಂದು ನಾಮಪತ್ರ ಸಲ್ಲಿಸಿದ ಕಿಮ್ಮನೆ, ಆರಗ, ಅಶೋಕ್ ನಾಯ್ಕ್, ಶಾರದಾ ಅಬ್ಬರ, ಯಾರೇನೆಂದರು?, ಎಷ್ಟು ನಾಮಪತ್ರ ಸಲ್ಲಿಕೆ?

ಆರಗ ಜ್ಞಾನೇಂದ್ರ, ತೀರ್ಥಹಳ್ಳಿ ಕ್ಷೇತ್ರ ಬಿಜೆಪಿ ಅಭ್ಯರ್ಥಿ
ಆರಗ ಅವರ ಆಸ್ತಿ ಕಳೆದ ವರ್ಷಕ್ಕೆ ಹೋಲಿಸಿದರೆ ಮೂರು ಪಟ್ಟು ಏರಿಕೆಯಾಗಿದೆ. ₹6.28 ಕೋಟಿ ಆಸ್ತಿ ಘೋಷಿಸಿದ್ದಾರೆ. 20 ಎಕರೆ ಜಮೀನು ಇದೆ, ಮೂರು ಕಾರು, ಪತ್ನಿ ಬಳಿ 250 ಗ್ರಾಂ ಚಿನ್ನವಿದೆ.
ಕಿಮ್ಮನೆ ರತ್ನಾಕರ್, ತೀರ್ಥಹಳ್ಳಿ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ
ಕಿಮ್ಮನೆ ರತ್ನಾಕರ್ ಅವರು ಸರಳವಾಗೇ ಬಂದು ನಾಮಪತ್ರ ಸಲ್ಲಿಸಿದ್ದು, ಅವರು ಘೋಷಿಸಿಕೊಂಡಿರುವಂತೆ, ₹3.75 ಕೋಟಿ ಆಸ್ತಿ‌ ಇದ್ದು, ₹3.71 ಕೋಟಿ ಸಾಲವಿದೆ. ಬಹುತೇಕ ಆಸ್ತಿಯಷ್ಟೇ ಸಾಲ ಇವರಿಗಿದೆ. ಸ್ಥಿರಾಸ್ತಿ ₹3 ಕೋಟಿ, ಪತ್ನಿ ಹೆಸರಿನಲ್ಲಿ ₹2.20 ಕೋಟಿ ಸ್ಥಿರಾಸ್ತಿ ಇದೆ.
ಬಿ.ಕೆ.ಸಂಗಮೇಶ್ವರ್, ಭದ್ರಾವತಿ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ
ಒಟ್ಟು ಆಸ್ತಿ‌ ₹6.69 ಕೋಟಿ‌ ಇದೆ. ಇದು 2018ರ ಚುನಾವಣೆಯಲ್ಲಿ ₹3.07 ಕೋಟಿ ಇತ್ತು. ಇವರು 12 ಎಕರೆ ಅಡಿಕೆ ತೋಟ, 1 ಕೆಜಿ ಚಿನ್ನ, 2 ಕೆಜಿ ಬೆಳ್ಳಿ ಆಭರಣ ಹೊಂದಿದ್ದಾರೆ. ₹2.83 ಕೋಟಿ ಸಾಲವಿದೆ.
ಕೆ.ಬಿ.ಅಶೋಕ್ ನಾಯ್ಕ್, ಶಿವಮೊಗ್ಗ ಗ್ರಾ. ಬಿಜೆಪಿ ಅಭ್ಯರ್ಥಿ
₹12.12 ಕೋಟಿ ಆಸ್ತಿ ಘೋಷಿಸಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಘೋಷಿಸಿಕೊಂಡಿರುವಂತೆ ₹7.63 ಕೋಟಿ ಆಸ್ತಿ ಘೋಷಿಸಿಕೊಂಡಿದ್ದರು. ಎರಡು ಕಾರು, ಎರಡು ದ್ವಿಚಕ್ರ ವಾಹನಗಳಿವೆ. ₹2.26 ಕೋಟಿ ಸಾಲ ಇದೆ.
ಶಾರದಾ ಪೂರ‌್ಯಾನಾಯ್ಕ್, ಶಿವಮೊಗ್ಗ ಗ್ರಾ. ಜೆಡಿಎಸ್ ಅಭ್ಯರ್ಥಿ
ಐದು ವರ್ಷದ ಹಿಂದೆ ₹5.16 ಕೋಟಿ ಆಸ್ತಿ ಘೋಷಿಸಿದ್ದರು. ಆದರೆ, ಈ ಚುಮಾವಣೆಯಲ್ಲಿ ಘೋಷಿಸಿಕೊಂಡಿರುವಂತೆ ₹3 ಕೋಟಿ ಆಸ್ತಿ ಇದೆ. ಐದು ವರ್ಷಗಳಲ್ಲಿ‌ಇವರ ಆಸ್ತಿಯಲ್ಲಿ ₹2.16 ಕೋಟಿ ಕಡಿಮೆಯಾಗಿದೆ. ₹1.39 ಕೋಟಿ ಸಾಲವಿದೆ. ಅರ್ಧ ಕೆಜಿ ಚಿನ್ನ, ಒಂದು ಕೆಜಿ ಬೆಳ್ಳಿ ಇದೆ. ಟ್ರಾಕ್ಟರ್, ದ್ವಿಚಕ್ರ ವಾಹನವಿದೆ.
ಶಾರದಾ ಅಪ್ಪಾಜಿಗೌಡ, ಭದ್ರಾವತಿ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ
₹4.73 ಕೋಟಿ ಆಸ್ತಿ ಘೋಷಣೆ. 2018ರಲ್ಲಿ ₹3.52 ಆಸ್ತಿ‌ ಘೋಷಿಸಿಕೊಂಡಿದ್ದರು. ಇವರ ಬಳಿ 3 ಕಾರು, ಐದು ಲಾರಿ‌ ಇವೆ. ₹97.85 ಲಕ್ಷ ಸಾಲವಿದೆ.

Property details | ವಿಜಯೇಂದ್ರ, ಮಧು, ಕುಮಾರ, ಬೇಳೂರು ಆಸ್ತಿ ಎಷ್ಟು? ಬಹುಕೋಟಿ ಒಡೆಯರಿವರು

error: Content is protected !!