Theft case | ಮನೆಗೆ ಕನ್ನ ಹಾಕಿದ್ದ ಮಹಿಳೆ ಅರೆಸ್ಟ್, ಅವಳ ಬಳಿ ಸಿಕ್ಕಿದ್ದೇನು?

Theft

 

 

ಸುದ್ದಿ ಕಣಜ.ಕಾಂ ಭದ್ರಾವತಿ
BHADRAVATHI: ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕುಮರಿ ನಾರಾಯಣಪುರ ಗ್ರಾಮದ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಮಹಿಳೆಯನ್ನು ಬಂಧಿಸಲಾಗಿದೆ.
ಕುಮರಿ ನಾರಾಯಣಪುರ ಗ್ರಾಮದ ನಿವಾಸಿ ರಂಜಿತಾ(24) ಬಂಧಿತೆ. ಆರೋಪಿ ಬಳಿಯಿಂದ ಅಂದಾಜು ಮೌಲ್ಯ 43,000 ರೂ.ಗಳ ಬೆಳ್ಳಿ ಮತ್ತು ಬಂಗಾರದ ಆಭರಣ, 1 ಫ್ರಿಡ್ಜ್, 1 ಅಲ್ಮೆರಾ ಮತ್ತು 1 ಕುಕ್ಕರ್ ಅನ್ನು ವಶಪಡಿಸಿಕೊಳ್ಳಲಾಗಿದೆ.

18/03/2023 Arecanut rate  | ಶಿವಮೊಗ್ಗ, ಸಿರಸಿ, ಚನ್ನಗಿರಿ, ಕುಂದಾಪುರ ಸೇರಿ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ

READ | ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಖರ್ಚಾದ ಹಣವೆಷ್ಟು? ಶಾಕ್ ಆಗುವುದರಲ್ಲಿ ಅನುಮಾನವೇ ಇಲ್ಲ!

ಕೂಲಿ ಕೆಲಸಕ್ಕೆ ಹೋದಾಗ ಮನೆಯಲ್ಲಿ ಕಳ್ಳತನ
ಮಾರ್ಚ್ 16ರಂದು ಹನುಮಂತಪ್ಪ ಅವರು ತಮ್ಮ ಮನೆಗೆ ಬೀಗ ಹಾಕಿಕೊಂಡು ಪತ್ನಿಯೊಂದಿಗೆ ಕೂಲಿ ಕೆಲಸಕ್ಕೆ ಹೋಗಿ, ಅದೇ ದಿನ ಸಂಜೆ ಮನೆಗೆ ವಾಪಾಸ್ ಬಂದು ನೋಡಿದಾಗ, ಯಾರೋ ಕಳ್ಳರು ಮನೆಯ ಮುಂಬಾಗಿಲಿನ ಬೀಗವನ್ನು ಒಡೆದು, ಮನೆಯ ಒಳಗೆ ಗಾಡ್ರೇಜ್ ಬೀರುವಿನಲ್ಲಿದ್ದ ಬಂಗಾರ ಆಭರಣ ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು ಎಂದು ದೂರು ನೀಡಲಾಗಿತ್ತು.
ತನಿಖಾ ತಂಡದ ಕಾರ್ಯಕ್ಕೆ ಶ್ಲಾಘನೆ
ಹೆಚ್ಚುವರಿ ಎಸ್‍ಪಿ ಅನಿಲ್ ಕುಮಾರ್ ಭೂಮರಡ್ಡಿ ಮಾರ್ಗದರ್ಶನದಲ್ಲಿ ಭದ್ರಾವತಿ ಉಪ ವಿಭಾಗ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ಮೇಲ್ವಿಚಾರಣೆಯಲ್ಲಿ ಭದ್ರಾವತಿ ಗ್ರಾಮಾಂತರ ಠಾಣೆಯ ಪಿಐ ಜಿ.ರಮೇಶ್, ಪಿಎಸ್.ಐ ಶ್ರೀಶೈಲ ಕೆಂಚಣ್ಣನವರ ನೇತೃತ್ವದಲ್ಲಿ ಸಿಬ್ಬಂದಿ ನಾಗರಾಜ್, ಶಿವಪ್ಪ, ಈರಯ್ಯ ತನಿಖಾ ತಂಡ ಕಾರ್ಯಾಚರಣೆ ನಡೆಸಿದೆ. ತಂಡದ ಕಾರ್ಯಕ್ಕೆ ಎಸ್.ಪಿ. ಜಿ.ಕೆ.ಮಿಥುನ್ ಕುಮಾರ್ ಪ್ರಶಂಸಿದ್ದಾರೆ.

BUDGET | ಶಿವಮೊಗ್ಗಕ್ಕೆ ಸಿಕ್ಕಿದ್ದೇನು?, ಅಡಕೆ ಸಮಸ್ಯೆಗೆ ಪರಿಹಾರ, ಇನ್ನು ಸಾಕಷ್ಟು ಗಿಫ್ಟ್

error: Content is protected !!