Manifesto | ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಪ್ರಣಾಳಿಕೆ ಬಿಡುಗಡೆ, ಏನೇನಿದೆ?

BJP

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಕೆ.ಬಿ.ಅಶೋಕ್ ನಾಯ್ಕ್ ಅವರು ಬುಧವಾರ ತಮ್ಮ ಚುನಾವಣಾ ಕಾರ್ಯಾಲಯದಲ್ಲಿ ಗ್ರಾಮಾಂತರ ಕ್ಷೇತ್ರದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅಶೋಕ್ ನಾಯ್ಕ್, ಶಿವಮೊಗ್ಗ ಗ್ರಾಮಾಂತರದಲ್ಲಿ ತಾಲೂಕು ಕಚೇರಿ ಆರಂಭಿಸುವ ಭರವಸೆ ನೀಡಿದರು.
ಶಾಲೆಗಳ ಅಭಿವೃದ್ಧಿ, ಸ್ಮಾರ್ಟ್ ವಿಲೇಜ್, ರಸ್ತೆಗಳ ಅಭಿವೃದ್ಧಿ, ಕೆರೆಗಳನ್ನು ಹೂಳೆತ್ತುವುದು, ರೈತ ಕೇಂದ್ರಗಳ ಆಧುನೀಕರಣ ಹೀಗೆ ನಾನಾ ಕಾರ್ಯಕ್ರಮಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ‌ ಎಂದು ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಡಾ.ಧನಂಜಯ್ ಸರ್ಜಿ, ಎಸ್.ದತ್ತಾತ್ರಿ, ಕುಮಾರ್ ನಾಯ್ಡು ಇತರರು ಉಪಸ್ಥಿತರಿದ್ದರು.

READ | ಶಿವಮೊಗ್ಗದಲ್ಲಿ ಹೇಗಿತ್ತು ಅಮಿತ್ ಶಾ ರೋಡ್ ಶೋ? ಕೊನೆ ಗಳಿಗೇಲಿ ವಾಹನ ಬದಲು ಏಕೆ?

ರಾಜ್ಯದ ಪ್ರಣಾಳಿಕೆ ಬಿಡುಗಡೆ
ರಾಜ್ಯದಲ್ಲಿ ಅಟಲ್ ಆಹಾರ ಕೇಂದ್ರ, ಬಿಪಿಎಲ್‌ ಕುಟುಂಬಕ್ಕೆ ವರ್ಷದಲ್ಲಿ (ದೀಪಾವಳಿ, ಗಣೇಶ ಚತುರ್ಥಿ, ಯುಗಾದಿ) ಮೂರು ಸಿಲಿಂಡರ್ ನೀಡಲಾಗುವುದು. ಏಕರೂಪ ನಾಗರಿಕತೆ ಸಂಹಿತೆ ಜಾರಿಗೆ ತರಲಾಗುವುದು. ಸಿರಿಧಾನ್ಯ ನೀಡುವುದು, ಹಾಲು ಪೂರೈಕೆ ಹೀಗೆ ಹಲವು ಕಾರ್ಯಕ್ರಮಗಳನ್ನು ಬಿಜೆಪಿ ಪ್ರಣಾಳಿಕೆಯಲ್ಲಿವೆ‌. ಅವುಗಳನ್ನು ಪೂರೈಸಲಾಗುವುದು ಎಂದು ಹೇಳಿದರು.
ಬಜರಂಗ ದಳ ನಿಷೇಧ ಮಾಡುವುದಾಗಿ‌ ಕಾಂಗ್ರೆಸ್ ಪ್ರಣಾಳಿಮೆಯಲ್ಲಿ ತಿಳಿಸಿದೆ. ಈ ಮೂಲಕ ಅವರು ತಮ್ಮ‌ವಿಚಾರಧಾರೆ ಮತ್ತು ನಿಲುವನ್ನು ತೋರಿಸಿದ್ದಾರೆ ಎಂದರು.
ಡಾ.ಧನಂಜಯ ಸರ್ಜಿ, ಆರ್.ಕೆ.ಸಿದ್ದರಾಮಣ್ಣ, ಸುನೀತಾ ಅಣ್ಣಪ್ಪ, ಕುಮಾರ್ ನಾಯ್ಡು ಉಪಸ್ಥಿತರಿದ್ದರು.

Bear attack | ರೈತನ ಮೇಲೆ ಕರಡಿ ದಿಢೀರ್ ದಾಳಿ, ತೀವ್ರ ಗಾಯ

error: Content is protected !!