MLA City Rounds | ಅನಾಹುತಗಳು ನಡೆದಿದ್ದೇ ಸಿಟಿ ರೌಂಡ್ಸ್ ಹಾಕುತ್ತಿರುವ ಶಾಸಕ ಚನ್ನಬಸಪ್ಪ

Channabasappa Chenni

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದಲ್ಲಿ ಬಿರುಗಾಳಿಗೆ ಹಲವೆಡೆ ಚಾವಣಿ ಹಾರಿಹೋಗಿದ್ದು, ಮರಗಳು ಬಿದ್ದು ಮನೆಗಳ ಕಾಂಪೌಂಡ್ ಹಾಳಾಗಿವೆ. ಮರಗಳು ವಿದ್ಯುತ್ ತಂತಿ ಮೇಲೆ ಬಿದ್ದು ವಿದ್ಯುತ್ ಸಂಪರ್ಕವೇ ಇಲ್ಲದಂತಾಗಿದೆ. ಘಟನೆಗಳು ನಡೆಯುತ್ತಿದ್ದಂತೆ ಶಾಸಕ ಎಸ್.ಎನ್.ಚನ್ನಬಸಪ್ಪ (SN.Channabasappa) ಅವರು ಸಿಟಿ ರೌಂಡ್ಸ್ ಹಾಕಿದರು.

READ | ಬೊಮ್ಮನಕಟ್ಟೆಯಲ್ಲಿ ಸಿಡಿಲು ಬಡಿದು ಮಹಿಳೆ ಸಾವು

ಶಾಸಕರು ನಗರದ ವಿವಿಧೆಡೆ ಸಂಜೆ ವೇಳೆಗೆ ಬೀಸಿದ ಜೋರು ಗಾಳಿ- ಮಳೆಯಿಂದಾಗಿ ಮರಗಳು ಧರೆಗುರುಳಿದ್ದು, ಇದರ ತೆರವು ಕಾರ್ಯಾಚರಣೆಯ ಸಂಬಂಧಿಸಿದಂತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೂಡಲೇ ಕುರಿತು ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟಂತ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತೆಂಗಿನ ಮರ ಮನೆ ಮೇಲೆ ಬಿದ್ದು ಹಾನಿಗೀಡಾದ ಪ್ರದೇಶಕ್ಕೂ ಭೇಟಿ ನೀಡಿ ಸಂತ್ರಸ್ತರಿಗೆ ಸಮಾಧಾನ ಹೇಳಿದರು.

error: Content is protected !!