Online Fraud | ಆನ್’ಲೈನ್ ಉದ್ಯೋಗ ನಂಬಿ ಎರಡನೇ ದಿನದಲ್ಲಿ 3.31 ಲಕ್ಷ ರೂ. ಕಳೆದುಕೊಂಡ ಯುವಕ!

cyber crime 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಆನ್’ಲೈನ್ ನಲ್ಲಿ ಉದ್ಯೋಗ ನಂಬಿ ಯುವಕನೊಬ್ಬ 3.31 ಲಕ್ಷ ರೂ. ಕಳೆದುಕೊಂಡಿರುವ ಘಟನೆ ನಡೆದಿದ್ದು, ಶನಿವಾರ ಶಿವಮೊಗ್ಗದ ಸಿಇಎನ್ ಠಾಣೆ(Shimoga Cyber crime police station)ಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ಶಿವಮೊಗ್ಗ ನಗರದ ನಿವಾಸಿಯೊಬ್ಬರು (ಹೆಸರು ಗೌಪ್ಯ) ಮೊಬೈಲಿನಲ್ಲಿ ವೆಬ್ ಸೈಟಿನಿಂದ ಆನ್ ಲೈನ್ ಕೆಲಸದ ಬಗ್ಗೆ ಬಂದಿದ್ದ ನೋಟಿಫಿಕೇಶನ್ ಒತ್ತಿದ್ದು, ಟೆಲಿಗ್ರಾಂನಲ್ಲಿ ಖಾತೆಯೊಂದನ್ನು ರಚಿಸಿಕೊಂಡಿದ್ದಾರೆ.

READ | ಶಿವಮೊಗ್ಗದಲ್ಲಿ ಮಹಿಳೆ ಸೇರಿ ಇಬ್ಬರು ಹೊರ ಜಿಲ್ಲೆಯವರ ಬಂಧನ, ಕಾರಣವೇನು? ಅವರ ಬಳಿ ಹುಕ್ಕಾ ಕೊಳವೆಗಳು ಪತ್ತೆ

ಮೋಸ ಹೋಗಿದ್ದು ಹೇಗೆ?
ಟೆಲಿಗ್ರಾಂನಲ್ಲಿ ರಚಿಸಿಕೊಂಡಿದ್ದ ಖಾತೆಗೆ ಪಾರ್ಟ್ ಟೈಂ ಉದ್ಯೋಗ ಮಾಡುವ ಬಗ್ಗೆ ಮಾಹಿತಿ ಬಂದಿದೆ. ಅದರಲ್ಲಿ ಕೆಲವು ಪ್ರಾಡಕ್ಟ್ ಗಳ ಬಗ್ಗೆ ಪ್ರಮೋಷನ್ ಮಾಡಿದರೆ ಕಮಿಷನ್ ರೂಪದಲ್ಲಿ ಲಾಭ ಬರುತ್ತದೆ ಎಂದು ಟೆಲಿಗ್ರಾಂನಲ್ಲಿ ಸಂದೇಶವೊಂದು ಬಂದಿದೆ. ಅದನ್ನು ನಂಬಿದ ಯುವಕನು ಪ್ರಾಡಕ್ಟ್ ಗಳ ಪ್ರಮೋಷನ್’ಗೆ 900 ರೂ.ಗಳು ಬಂದಿವೆ. ನಂತರ, ಹಂತ ಹಂತವಾಗಿ 10,900 ರೂ., 9,432 ಹಾಗೂ 27,200 ರೂ. ಹೀಗೆ ಜೂನ್ 20ರಿಂದ 22ರ ವರೆಗೆ ಒಟ್ಟು 3,31,777 ರೂ. ಡೆಪಾಸಿಟ್ ಮಾಡಲಾಗಿದೆ. ಆದರೆ, ಅದಕ್ಕೆ ಯಾವುದೇ ರೀತಿಯ ಹಣ ವಾಪಸ್ ಬಂದಿಲ್ಲ. ಹಣವನ್ನು ವಂಚಿಸಿರುವುದು ತಿಳಿದುಬಂದಿರುತ್ತದೆ. ಶಿವಮೊಗ್ಗ ಸಿಇಎನ್ ಠಾಣೆಯಲ್ಲಿ ಶನಿವಾರ ದೂರು ನೀಡಲಾಗಿದೆ.
(ಗಮನಕ್ಕೆ- ಆನ್ ಲೈನ್ ನಲ್ಲಿ ವ್ಯವಹಾರ, ಯಾವುದೇ ಉದ್ಯೋಗವನ್ನು ನಂಬಿ ಹಣ ನೀಡುವುದನ್ನು ಮಾಡಬೇಡಿ. ಜತೆಗೆ, ಬ್ಯಾಂಕಿನ ಖಾಸಗಿ ಮಾಹಿತಿ ಕೋರಿ ಬರುವ ಕರೆಗಳ ಬಗ್ಗೆ ಜನರು ಜಾಗರೂಕತೆಯಿಂದ ಇರಬೇಕು. ಅದರಲ್ಲೂ ಮೊಬೈಲಿಗೆ ಬರುವ ಓಟಿಪಿಗಳನ್ನು ಮತ್ತೊಬ್ಬರೊಂದಿಗೆ ಶೇರ್ ಮಾಡಿಕೊಳ್ಳಬೇಡಿ. ಇದರಿಂದ ಖಾತೆಯಲ್ಲಿರುವ ಹಣ ಕಳೆದುಕೊಳ್ಳುವ ಸಾಧ್ಯತೆಯೂ ಇದೆ.)

Child abuse | ಮಕ್ಕಳ ದೌರ್ಜನ್ಯ ಪ್ರಕರಣದಲ್ಲಿ ಶಿವಮೊಗ್ಗಕ್ಕೆ ಎರಡನೇ ಸ್ಥಾ‌ನ, ತಲೆ ತಗ್ಗಿಸಬೇಕಾದ ಸಂಗತಿ

error: Content is protected !!