ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: 60 ವರ್ಷದ ಸಂಭ್ರಮದಲ್ಲಿರುವ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಂಸ್ಥಾಪನಾ ದಿನಚರಣೆಯನ್ನು ಜೂ.4ರಂದು ಬೆಳಗ್ಗೆ 10-15ಕ್ಕೆ ಸಂಘದ ಶಾಂತಲಾ ಸ್ಪೆರೋಕಾಸ್ಟ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ವಜ್ರ ಮಹೋತ್ಸವದ ಆಚರಣೆಯ ಸಂಭ್ರಮದಲ್ಲಿದೆ. ಜಿಲ್ಲೆಯ ಸವಾರ್ಂಗೀಣ ಅಭಿವೃದ್ಧಿಗೆ ಸಂಘದ ಪಾತ್ರ ಮುಖ್ಯವಾಗಿದೆ. ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ಸಂಪರ್ಕದೊಂದಿಗೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಸಂಘದ ಬೆಳವಣಿಗೆಗೆ ಕಾರಣರಾದವರಿಗೆ ಕೃತಜ್ಞತೆ ಸಲ್ಲಿಸುವುದು. ವಿಶೇಷ ಪುರಸ್ಕಾರ ನೀಡುವ ಉದ್ದೇಶದಿಂದ ಸಂಸ್ಥಾಪಕರ ದಿನಾಚರಣೆ ಆಚರಿಸುತ್ತಿದ್ದೇವೆ ಎಂದು ಗೋಪಿನಾಥ್ ತಿಳಿಸಿದರು.
ಯಾರಿಗೆಲ್ಲ ಸನ್ಮಾನ?
- 2023ನೇ ಸಾಲಿನ ವಾಣಿಜ್ಯ ಪ್ರಶಸ್ತಿಯನ್ನು ಸುಧಾ ಟ್ರೇಡರ್ಸ್‍ನ ರಾಘವೇಂದ್ರ ರಾವ್ ಮತ್ತು ಪಾಲುದಾರರಿಗೆ ಎಪಿಎಂಸಿ ಆವರಣದಲ್ಲಿರುವ ಶಿವಲಿಂಗೇಶ್ವರ ಅರೆಕಾನಟ್ ಟ್ರೇಡರ್ಸ್‍ನ ಬಿ.ಎಂ. ಶಂಕರಪ್ಪ ಮತ್ತು ಪಾಲುದಾರರಿಗೆ, ಆಟೋ ಕಾಂಪ್ಲೆಕ್ಸ್‍ನಲ್ಲಿರುವ ಶ್ರೀ ಮಲ್ಲಿಕಾರ್ಜುನ ಆಗ್ರೋ ಸ್ಪೇರ್ಸ್ ನ ಎಂ.ಎಂ. ಸುರೇಶ್ ಮತ್ತು ಪಾಲುದಾರರಿಗೆ ನೀಡಲಾಗಿದ್ದು, ಅವರನ್ನು ಸನ್ಮಾನಿಸಲಾಗುವುದು
- ಬಸ್ ಮಾಲೀಕ ಆರ್.ರಂಗಪ್ಪ, ಅಂತರರಾಷ್ಟ್ರೀಯ ಯೋಗಪಟು ಸವಿತಾ ಮಾಧವ್, ರಾಜ್ಯ ಜ್ಯುವೆಲರಿ ಫೆಡರೇಷನ್ ಉಪಾಧ್ಯಕ್ಷ ವಿನೋದ್ ಕುಮಾರ್ ಜೈನ್ ಅವರಿಗೆ ವಿಶೇಷ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು.
ಯಾರ ಕಲ್ಪನೆಯ ಕೂಸು?
ದಿ. ಬಿ.ಎಂ. ನಂಜಪ್ಪ ಹಾಗೂ ದಿ. ಎಚ್.ಎಸ್. ಚನ್ನಬಸಪ್ಪನವರ ಕಲ್ಪನೆಯ ಕೂಸು ಇದಾಗಿದೆ. ದಿ. ಆರ್.ಎಸ್. ಅಶ್ವತ್ಥನಾರಾಯಣ ಅವರು ಸ್ಥಾಪಕ ಅಧ್ಯಕ್ಷರಾಗಿದ್ದರು. ನಂತರ ಹಲವಾರು ಪ್ರತಿಭಾವಂತರು ಈ ಸಂಘದ ಅಧ್ಯಕ್ಷರಾಗಿ ಕೈಗಾರಿಕಾ ಮತ್ತು ವಾಣಿಜ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಬಿ.ವಿ. ಗೋಪಾಲರೆಡ್ಡಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಹತ್ತು ಸ್ಟಾಲ್‍ಗಳನ್ನು ನಿರ್ಮಿಸಿ ಉತ್ಪನ್ನಗಳನ್ನು ಮಾರಾಟ ಮಾಡಲು ಉದ್ಯಮಿಗಳಿಗೆ ಅವಕಾಶ ಕಲ್ಪಿಸಲಾಗುವುದು. ಹಾಗೆಯೇ ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದಂತೆ ವಿಶೇಷ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುವುದು.
– ವಸಂತ್ ಹೋಬಳಿದಾರ್, ಸಂಘದ ಕಾರ್ಯದರ್ಶಿ
ಸಂಘದ ಉಪಾಧ್ಯಕ್ಷ ಬಿ. ಗೋಪಿನಾಥ್ ಜಂಟಿ ಕಾರ್ಯದರ್ಶಿ ಜಿ. ವಿಜಯಕುಮಾರ್, ನಿರ್ದೇಶಕರುಗಳಾದ ಬಿ.ಆರ್. ಸಂತೋಷ್, ಇ. ಪರಮೇಶ್ವರ, ಮರಿಸ್ವಾಮಿ, ಗಣೇಶ್ ಎಂ. ಅಂಗಡಿ, ವಿಶೇಷ ಆಹ್ವಾನಿತ ಎಂ.ಎ. ರಮೇಶ್ ಹೆಗ್ಡೆ ಉಪಸ್ಥಿತರಿದ್ದರು.