Accident | ಬೈಕ್‌ ಸವಾರನ‌ ಕಾಲು ಮೇಲೆಯೇ ಹರಿದ‌ ಬಸ್ ಚಕ್ರ, ಮುಂದೇನಾಯ್ತು?

East Traffice police station

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಬೈಕ್ ಸವಾರನ ಕಾಲಿನ ಮೇಲೆ ಕೆ.ಎಸ್.ಆರ್.ಟಿ.ಸಿ ಬಸ್ (KSRTC Bus) ಚಕ್ರ‌ ಹರಿದಿರುವ ಘಟನೆ ಶುಕ್ರವಾರ ಸಂಭವಿಸಿದ್ದು, ತಕ್ಷಣ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

READ |  ಶಿವಮೊಗ್ಗದಲ್ಲಿ ಮಳೆ ಸೃಷ್ಟಿಸಿದ ಅನಾಹುತ, ಶಾಲೆ, ಮನೆಯ ಚಾವಣಿ‌ ಕುಸಿತ, ಎಲ್ಲಿ‌ ಏನು ಅನಾಹುತ?

ಹೊನ್ನಾಳ್ಳಿ ಮೇಲ್ಸೇತುವೆಯ ಕೆಳಗಿನ‌ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ‌ ಬಸ್ ಕೆಳಗೆ ಬೈಕ್‌ ಬಂದು ಚಕ್ರವು ಸವಾರ ಕಾಲಿನ‌‌ ಮೇಲೆ‌ ಹರಿದಿದೆ. ಬೈಕ್ ಸವಾರನನ್ನು ಖಲೀದ್ ಎಂದು ಗುರುತಿಸಲಾಗಿದೆ.
ರಕ್ಷಣೆಗೆ ಧಾವಿಸಿದ ಜ‌ನ
ಬಸ್ ಕೆಳಗಡೆ ಸಿಲುಕಿದ ವ್ಯಕ್ತಿಯನ್ನು ರಕ್ಷಿಸುವುದಕ್ಕೆ ಜನರು‌ ಧಾವಿಸಿದರು. 108 ಆಂಬ್ಯುಲೆನ್ಸ್ ಮೂಲಕ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಘಟನೆಯ ಬಗ್ಗೆ ಮಾಹಿತಿ ಲಭ್ಯವಾಗಿದ್ದೇ ಶಿವಮೊಗ್ಗ ಪೂರ್ವ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

error: Content is protected !!