Hit & Run | ಹೊಳೆಹೊನ್ನೂರಿನಲ್ಲಿ ಹಿಟ್ ಆಂಡ್ ರನ್, ಒಬ್ಬನ ಪ್ರಾಣ ನುಂಗಿದ ಅಪರಿಚಿತ ವಾಹನ

Hit and Run

 

 

ಸುದ್ದಿ ಕಣಜ.ಕಾಂ ಭದ್ರಾವತಿ
BHADRAVATHI: ಬಿ.ಬೀರನಹಳ್ಳಿ- ಹಾರೋಬೆನವಳ್ಳಿ ಮಧ್ಯೆ ವ್ಯಕ್ತಿಯೊಬ್ಬರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಆತ ಮೃತಪಟ್ಟಿರುವ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.

READ | ಗಾಜನೂರು ಡ್ಯಾಂ ತುಂಬಲು 1 ಅಡಿ ಬಾಕಿ, ಇಂದು ಗೇಟ್ ಓಪನ್ ಸಾಧ್ಯತೆ, ವಿವಿಧ ಜಲಾಶಯಗಳಲ್ಲಿ ನೀರಿನ ಮಟ್ಟವೆಷ್ಟಿದೆ?

ಮೃತನನ್ನು ಹಾರೋಬೆನವಳ್ಳಿ ನಿವಾಸಿ ಮಂಜುನಾಯ್ಕ್ (40) ಎಂದು ಗುರುತಿಸಲಾಗಿದೆ. ಮಂಜು ಅವರು ಕೂಲಿ ಕೆಲಸ ಮಾಡುತ್ತಿದ್ದರು. ಯಾವುದೋ ವಾಹನ ಡಿಕ್ಕಿ ಹೊಡೆದಿದ್ದು, ತೀವ್ರ ಗಾಯಗೊಂಡ ಇವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

error: Content is protected !!