Tour plan | ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು, ಯಾವ ಕಾರ್ಯಕ್ರಮಗಳಲ್ಲಿ ಭಾಗಿ?

Public Notice

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ.ಜಯಪ್ರಕಾಶ ಹೆಗ್ಡೆ ಹಾಗೂ ಸದಸ್ಯರುಗಳು ಆ.17 ಮತ್ತು 18 ರಂದು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸ ಹಮ್ಮಿಕೊಂಡಿರುತ್ತಾರೆ.
ಯಾವ ಕಾರ್ಯಕ್ರಮಗಳಲ್ಲಿ ಭಾಗಿ?
ಆ.17 ರಂದು ಮಧ್ಯಾಹ್ನ 2 ರಿಂದ ಸಂಜೆ 5.30ರವರೆಗೆ ಹೊಳೆಹೊನ್ನೂರು ಗ್ರಾಮದಲ್ಲಿ ಆಯೋಜಿಸಲಾಗಿರುವ ಜಿಲ್ಲೆಯಲ್ಲಿ ವಾಸವಿರುವ ವನ್ನಿಯಾರ್, ವಹ್ನಿಕುಲ, ಗೌಂಡರ್ ಸಮುದಾಯಗಳ ಸಾಮಾಜಿಕ ಸ್ಥಿತಿಗತಿಗಳ ಕುರಿತು ಸ್ಥಳ ಪರಿಶೀಲನೆ, ಮನವಿ ಸ್ವೀಕಾರ ಹಾಗೂ ಸಭೆಯಲ್ಲಿ ಪಾಲ್ಗೊಳ್ಳಲಿರುವರು. ಅಂದು ಶಂಕರಘಟ್ಟದ ನಿರೀಕ್ಷಣಾ ಮಂದಿರದಲ್ಲಿ ವಾಸ್ತವ್ಯ ಮಾಡಲಿರುವರು.

READ | ಚಂದ್ರಗುತ್ತಿ ದೇವಸ್ಥಾನದಲ್ಲಿ‌ ಕಳ್ಳತನ ಯತ್ನ ಪ್ರಕರಣ, ಆರೋಪಿಗಳು ಅರೆಸ್ಟ್, ಕಾರಣ ಬಿಚ್ಚಿಟ್ಟ ಆರೋಪಿಗಳು

ಆ.18 ರಂದು ಬೆ.10 ರಿಂದ 12 ರವರೆಗೆ ಕುವೆಂಪು ವಿ.ವಿ.ಯ ಆವರಣದಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡುವರು. ಮ. 12.30 ಕ್ಕೆ ತರೀಕೆರೆಗೆ ಪ್ರಯಾಣ ಮಾಡಲಿರುವರು ಎಂದು ಅಧ್ಯಕ್ಷರ ಆಪ್ತ ಸಹಾಯಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Parade | ಸ್ವಾತಂತ್ರ್ಯ ದಿನಾಚರಣೆ ಪರೇಡ್ ನಲ್ಲಿ ಇದೇ‌ ಮೊದಲು ಕನ್ನಡದಲ್ಲಿ ಆದೇಶ, ಪಥ ಸಂಚಲನದಲ್ಲಿ ಯಾರಿಗೆ ಯಾವ ಸ್ಥಾನ?, ರಂಗೋಲಿ ತುಳಿದ ಚಿತ್ರ ವೈರಲ್

error: Content is protected !!