Education corner | ಡೆಹರಾಡೂನ್‍ನ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು ಪ್ರವೇಶ,‌ ಡಿಪ್ಲೋಮಾ‌ ಪ್ರವೇಶ ವಿಸ್ತರಣೆ

application

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: 2024ನೇ ಸಾಲಿನ ಜುಲೈ ಅಧಿವೇಶನಕ್ಕಾಗಿ ಡೆಹರಾಡೂನ್‍ನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್(ಆರ್‍ಐಎಂಸಿ) ನಲ್ಲಿ 8ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ರಾಜ್ಯದ 11 1/2 ವರ್ಷದಿಂದ 13 ವರ್ಷದೊಳಗಿರುವ ಬಾಲಕ ಮತ್ತು ಬಾಲಕಿಯರಿಗೆ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲಿ ದಿನಾಂಕ: 02-12-2023 ರಂದು ನಡೆಸಲಿದ್ದು ಅರ್ಜಿ ಸಲ್ಲಿಸಲು ದಿ: 15-10-2023 ಕಡೆಯ ದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ನಿರ್ದೇಶನಾಲಯದ ದೂ.ಸಂ: 080-25589459 ಹಾಗೂ ವೆಬ್ ಸೈಟ್ www.rimc.gov.in ನ್ನು ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕ(ಪ್ರ) ಡಾ.ಸಿ.ಎ.ಹಿರೇಮಠ ತಿಳಿಸಿದ್ದಾರೆ.

READ | ಸ್ವಾತಂತ್ರ್ಯ ದಿನಕ್ಕೆ ಡಿಎಆರ್ ಮೈದಾನದಲ್ಲಿ ಜರ್ಮನ್ ಟೆಂಟ್, ಜಿಲ್ಲೆಯಲ್ಲಿ ಈ ಸಲದ ವಿಶೇಷಗಳೇನು?

ಪ್ರವೇಶ ಅವಧಿ ವಿಸ್ತರಣೆ
SHIVAMOGGA: 2023-24 ನೇ ಶೈಕ್ಷಣಿಕ ಸಾಲಿನಲ್ಲಿ ಶಿರಾಳಕೊಪ್ಪದ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಖಾಲಿ ಉಳಿದಿರುವ ಡಿಪ್ಲೊಮಾ ಕೋರ್ಸ್‌ ಗಳಿಗೆ ಪ್ರವೇಶ ಪಡೆಯುವ ಅವಧಿಯನ್ನು ಆಗಸ್ಟ್ 5 ರವರೆಗೆ ವಿಸ್ತರಿಸಲಾಗಿದೆ.
ಡಿಪ್ಲೊಮಾ ಕೋರ್ಸ್ ಗಳಿಗೆ ಪಿಯುಸಿ ಪೂರಕ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಅಭ್ಯರ್ಥಿಗಳಿಗೆ ಹಾಗೂ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೂ ಅನ್ವಯವಾಗುವಂತೆ ಅವಧಿ ವಿಸ್ತರಿಸಿದ್ದು ಮೊದಲು ಬಂದವರಿಗೆ ಮೊದಲ ಆದ್ಯತೆ ಮೇಲೆ ಪ್ರವೇಶ ನೀಡಲಾಗುವುದು.
ಆದ್ದರಿಂದ ಅಭ್ಯರ್ಥಿಗಳು ನೇರವಾಗಿ ಸಂಸ್ಥೆಗೆ ಭೇಟಿ ನೀಡಿ ಎಸ್‍ಎಸ್‍ಎಲ್‍ಸಿ/ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು, ಮೀಸಲಾತಿ ಬಯಸುವ ಅಭ್ಯರ್ಥಿಗಳು ಅದಕ್ಕೆ ಪೂರಕವಾದ ದಾಖಲೆಗಳನ್ನು ನೇರವಾಗಿ ಶಿವಶರಣೆ ಅಕ್ಕಮಹಾದೇವಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್, ಶಿರಾಳಕೊಪ್ಪ ಈ ಸಂಸ್ಥೆಗೆ ಸಲ್ಲಿಸಿ ಪ್ರವೇಶ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್, ಶಿರಾಳಕೊಪ್ಪ, ದೂ.ಸಂ: 9480057999, 8481066050 ಮತ್ತು 8867419851 ನ್ನು ಸಂಪರ್ಕಿಸಬಹುದೆಂದು ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.

KSOU | ದುಡಿಯುತ್ತಲೇ‌‌ ಡಿಗ್ರಿ ಸಂಪಾದಿಸಬೇಕೇ? ಹಾಗಾದರೆ ಕೂಡಲೇ ಅರ್ಜಿ‌ ಸಲ್ಲಿಸಿ, ಯಾರಿಗೆಲ್ಲ‌ ಶುಲ್ಕ‌ ವಿನಾಯಿತಿ?

error: Content is protected !!