Accident | ಅದಿರು ತುಂಬಿದ ಲಾರಿ ಡಿಕ್ಕಿ, ವಾಹನದ ಮುಂಭಾಗ ಪೀಸ್ ಪೀಸ್

Accident

 

 

ಸುದ್ದಿ ಕಣಜ.ಕಾಂ ರಿಪ್ಪನ್ ಪೇಟ್
RIPPONPET: ಸಿಡಿ ಹಳ್ಳ ಗ್ರಾಮದಲ್ಲಿ ಮರಕ್ಕೆ ಲಾರಿಯೊಂದು ಡಿಕ್ಕಿಯಾದ ಪರಿಣಾಮ ಲಾರಿಯ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಶನಿವಾರ ತಡರಾತ್ರಿ ಘಟನೆ ನಡೆದಿದೆ.
ಕಬ್ಬಿಣದ ಅದಿರು ತುಂಬಿಕೊಂಡು ಮಂಗಳೂರಿನಿಂದ ದಾವಣಗೆರೆ ಹೋಗುತ್ತಿದ್ದ ಲಾರಿಯು ಮರಕ್ಕೆ ಡಿಕ್ಕಿ ಹೊಡೆದಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಸಾವುನೋವು ಸಂಭವಿಸಿಲ್ಲ.
ಘಟನೆಯ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ರಿಪ್ಪನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

READ | ವಾಹನ ಮಾಲೀಕರೇ ಗಮನಿಸಿ ಇಂದಿನಿಂದ ಮನೆ ಬಾಗಿಲಿಗೆ ಬರಲಿದೆ ದಂಡದ ನೋಟಿಸ್, ಎಸ್.ಎಂ.ಎಸ್.

ಗೋವುಗಳ ರಕ್ಷಣೆ

RIPPONPET: ಬೆಳಕೋಡಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ.
ಬೈಕ್ ಹಾಗೂ ಲಗೇಜ್ ಗೂಡ್ಸ್ ಆಟೋ ಅನುಮಾನಾಸ್ಪದವಾಗಿ ಓಡಾಡುತ್ತಿತ್ತು. ಬೈಕ್ ಹಿಡಿದು ಸವಾರನನ್ನು ಪ್ರಶ್ನಿಸಿದಾಗ ಆಟೋ ಮತ್ತು ಬೈಕ್ ಸವಾರರು ಪರಾರಿಯಾಗಿದ್ದಾರೆ. ಗೂಡ್ಸ್ ಆಟೋ ಪರಿಶೀಲಿಸಿದಾಗ ಹೋರಿ ಮತ್ತು ಕರು ಇದ್ದವು. ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಆಟೋವನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಾಗಿದೆ.

Forest amendment bill | ಅರಣ್ಯಕ್ಕೆ ಅಪಾಯ ತರಲಿದೆ ‘ಅರಣ್ಯ ಕಾಯ್ದೆ ತಿದ್ದುಪಡಿ ಮಸೂದೆ’, ಆಕ್ಷೇಪಣೆ ಸಲ್ಲಿಕೆಗೇನು ಕಾರಣ?

error: Content is protected !!