Tunga | ತುಂಗಾ ಎಡದಂಡೆ ಕಾಲುವೆ ನೀರಿನ ಹರಿವು ಕಡಿಮೆ ಸಂಭವ, ಜಿಲ್ಲೆಯಲ್ಲಿ‌ ಎಷ್ಟು ಮಳೆಯಾಗಿದೆ?

Rain

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ (mansoon) ತುಂಗಾ ಎಡದಂಡೆ ಕಾಲುವೆಯಲ್ಲಿ ಮಳೆಯ ನೀರಿನ ಹರಿವಿನಿಂದ ಕಸಕಡ್ಡಿ ಮತ್ತು ಮಣ್ಣು ಹರಿದು ಬಂದು ತುಂಗಾ ಎಡದಂಡೆ ಕಾಲುವೆಯ ಸರಪಳಿ 20 ಕಿ.ಮೀ. ನಲ್ಲಿರುವ ಸುರಂಗ ಮಾರ್ಗದಲ್ಲಿ ಸಿಲುಕಿರುವುದರಿಂದ ಸುರಂಗ ಮಾರ್ಗದಲ್ಲಿ ನೀರು ಸರಾಗವಾಗಿ ಹರಿದುಬರಲು ಅಡಚಣೆಯಾಗಿದೆ.

READ | 20 ವರ್ಷ ಕಠಿಣ ಕಾರಾವಾಸ ಶಿಕ್ಷೆ, ₹1.50 ದಂಡ, ಮನೆ‌ ಹೊಕ್ಕಿ‌ ಹಲ್ಲೆ ಮಾಡಿದವನಿಗೆ 3 ವರ್ಷ ಜೈಲ

ಈ ಸುರಂಗ ಮಾರ್ಗವನ್ನು ಸ್ವಚ್ಚಗೊಳಿಸಲು 3 ರಿಂದ 5 ದಿನಗಳ ಕಾಲಾವಕಾಶ ಬೇಕಾಗಿರುವುದರಿಂದ ಕಾಲುವೆಯಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗುವ ಸಂಭವವಿದ್ದು, ತುಂಗಾ ಎಡದಂಡೆ ಕಾಲುವೆಯ ಅಚ್ಚುಕಟ್ಟು ಭಾಗದ ರೈತರು ಸಹಕರಿಸುವಂತೆ ಕರ್ನಾಟಕ ನೀರಾವರಿ ನಿಗಮದ ತುಂಗಾ ಮೇಲ್ದಂಡೆ ಯೋಜನೆ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಮನವಿ ಮಾಡಿರುತ್ತಾರೆ.

Tunga dam
 Tunga Dam

ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

SHIMOGA: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 19.70 ಮಿಮಿ ಮಳೆಯಾಗಿದ್ದು, ಸರಾಸರಿ 3.30 ಮಿಮಿ ಮಳೆ ದಾಖಲಾಗಿದೆ. ಆಗಸ್ಟ್ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 404.86 ಮಿಮಿ ಇದ್ದು, ಇದುವರೆಗೆ ಸರಾಸರಿ 41.27 ಮಿಮಿ ಮಳೆ ದಾಖಲಾಗಿದೆ.
ತಾಲೂಕುವಾರು ಮಳೆ ವಿವರ
ಶಿವಮೊಗ್ಗ 1 ಮಿಮಿ., ಭದ್ರಾವತಿ 2.70 ಮಿಮಿ., ತೀರ್ಥಹಳ್ಳಿ 3.90 ಮಿಮಿ., ಸಾಗರ 6.30 ಮಿಮಿ., ಶಿಕಾರಿಪುರ 0.60 ಮಿಮಿ., ಸೊರಬ 01.00 ಮಿಮಿ ಹಾಗೂ ಹೊಸನಗರ 4.20 ಮಿಮಿ. ಮಳೆಯಾಗಿದೆ.
ಲಾಶಯಗಳ ನೀರಿನ ಮಟ್ಟ (ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ಸ್)
ಲಿಂಗನಮಕ್ಕಿ: 1819 (ಗರಿಷ್ಠ), 1790.50 (ಇಂದಿನ ಮಟ್ಟ), 11407.00 (ಒಳಹರಿವು), 3075.92 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1802.55.
ಭದ್ರಾ: 186 (ಗರಿಷ್ಠ), 164.50 (ಇಂದಿನ ಮಟ್ಟ), 4011.00 (ಒಳಹರಿವು), 192.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 184.40.
ತುಂಗಾ: 588.24 (ಗರಿಷ್ಠ), 588.24 (ಇಂದಿನ ಮಟ್ಟ), 9169.00 (ಒಳಹರಿವು), 9169.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24.
ಮಾಣಿ: 595 ಮೀ., 581.56 (ಇಂದಿನ ಮಟ್ಟ), 1925 (ಒಳಹರಿವು), 640‌ (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 585.52 ಮೀ.
ಪಿಕ್‍ಅಪ್: 563.88 ಮೀ., 561.86 (ಇಂದಿನ ಮಟ್ಟ), 1409 (ಒಳಹರಿವು), 1005.00(ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 562.24 ಮೀ.
ಚಕ್ರ: 580.57 ಮೀ., 571.38 (ಇಂದಿನ ಮಟ್ಟ), 411 (ಒಳಹರಿವು), 1543.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 573.28 ಮೀ.
ಸಾವೆಹಕ್ಲು: 583.70 ಮೀ. (ಗರಿಷ್ಠ), 578.10 (ಇಂದಿನ ಮಟ್ಟ), 930 (ಒಳಹರಿವು), 1444.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 575.10 ಮೀ.

Milk adulterate | ಹಾಲಿನ ಕಲಬೆರಕೆ, ಸಚಿವರು ನೀಡಿದ ಪ್ರಮುಖ 5 ಸೂಚನೆಗಳೇನು?

error: Content is protected !!