Krishna byre gowda | ಫಾರಂ 57 ವಿಲೇಗೆ ಹೊಸ ಆಪ್, ಇಲ್ಲಿ ಸಿಗಲಿದೆ 15 ವರ್ಷ ಸೆಟಲೈಟ್ ಇಮೇಜ್!

mobile

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಫಾರಂ 57 ವಿಲೇ ಮಾಡಲು ತಹಶೀಲ್ದಾರರಿಗೆ ಹೊಸ ಆಪ್ ನೀಡಲಾಗುವುದು. ಇದರಲ್ಲಿ ಡಾಟಾ ಅಪ್ ಲೋಡ್ ಮಾಡಿದಾಗ ಅದು ಸರ್ಕಾರಿ ಅಥವಾ ಅರಣ್ಯ ಭೂಮಿ ಎಂದು ಗೊತ್ತಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (krishna byre gowda)ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಬುಧವಾರ ಮಾತನಾಡಿದ ಅವರು, ಈ ತಂತ್ರಾಂಶದಲ್ಲಿ 15 ವರ್ಷದ ಸ್ಯಾಟಲೈಟ್ ಇಮೇಜ್ ಸಿಗಲಿದೆ ಎಂದು ತಿಳಿಸಿದರು.

READ | ರಾಜ್ಯದಲ್ಲಿ ಸರ್ವೇಯರ್’ಗಳ ನೇಮಕಕ್ಕೆ ಕಂದಾಯ ಸಚಿವರ ಸೂಚನೆ, ಎಷ್ಟು ಹುದ್ದೆಗಳ ಭರ್ತಿ?

3 ತಿಂಗಳಿಗೊಮ್ಮೆ ವಿಎ ಕ್ಷೇತ್ರ ಭೇಟಿ

Krishna byregowda
ಗ್ರಾಮ ಲೆಕ್ಕಿಗರು ಪ್ರತಿ ಮೂರು ತಿಂಗಳಿಗೆ ಕ್ಷೇತ್ರ ಭೇಟಿ ನೀಡಿ ಒತ್ತುವರಿ ಬಗ್ಗೆ ಪರಿವೀಕ್ಷಿಸಿ ವರದಿ ನೀಡಬೇಕು. ನಿಜವಾದ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು ಮತ್ತು ಸರ್ಕಾರಿ ಜಾಗವನ್ನು ಭದ್ರಪಡಿಸುವ ಕೆಲಸವನ್ನು ಕಂದಾಯ ಇಲಾಖೆ ಅಧಿಕಾರಿ/ ಸಿಬ್ಬಂದಿ ಮಾಡಬೇಕು ಎಂದರು.
ವಿವಾದಿತ ಮ್ಯುಟೇಷನ್ ಪೆಂಡೆನ್ಸಿ ಕಡಿಮೆ
ಜೆಸ್ಲಿಪ್ ಮತ್ತು ಪೌತಿ ಖಾತೆ ಬಿಟ್ಟು ಉಳಿದ ಖಾತೆಗಳನ್ನು ಸ್ವಯಂಚಾಲಿತವಾಗಿ ಮಾಡುವ ಯೋಜನೆ ಇದೆ. ವಿವಾದಿತ ಮ್ಯುಟೇಷನ್ ಗಳ ಪೆಂಡಿನ್ಸಿ ಜಿಲ್ಲೆಯಲ್ಲಿ ಕಡಿಮೆ ಇದೆ. ಇಂತಹ ಪ್ರಕರಣ ಇತ್ಯರ್ಥಕ್ಕೆ ಸರಾಸರಿ 1 ವರ್ಷ ತೆಗೆದುಕೊಂಡಿದ್ದ ಸಮಯವನ್ನು 135 ದಿನಗಳಿಗೆ ಇಳಿಸಿದ್ದೀರಿ. ಉತ್ತಮ ಬೆಳಿವಣಿಗೆ ಆದರೆ ಇದು ಗರಿಷ್ಠ 90 ದಿನಗಳಲ್ಲಿ ವಿಲೇ ಆಗಬೇಕು. ತಾವು 60 ರಿಂದ 65 ದಿನಗಳಲ್ಲಿ ವಿಲೇ ಮಾಡಲು ಪ್ರಯತ್ನಿಸಬೇಕು ಎಂದು ಸೂಚನೆ ನೀಡಿದರು.
ಶಿವಮೊಗ್ಗದಲ್ಲಿ ಭೂಮಿ ಮಂಜೂರಾತಿ ವಿಷಯದಲ್ಲಿ ಹೆಚ್ಚಿನ ಸಮಸ್ಯೆಗಳಿವೆ. ಜಿಲ್ಲಾಧಿಕಾರಿ ಅವರು ಶರಾವತಿ ಸಂತ್ರಸ್ತರು ಹಾಗೂ ಇತರೆ ಭೂಮಿ ಮಂಜೂರಾತಿ ಕುರಿತು ನನ್ನ ಗಮನಕ್ಕೆ ತಂದಿದ್ದಾರೆ. ಅರಣ್ಯ ಮತ್ತು ಕಂದಾಯ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸಿ ಇದನ್ನು ಬಗೆಹರಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಉಪಸ್ಥಿತರಿದ್ದರು.

Bhadra dam | ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಭದ್ರಾ ಜಲಾಶಯದಿಂದ ನೀರು ಹರಿಸುವ ಬಗ್ಗೆ ಕೈಗೊಂಡ ನಿರ್ಧಾರವೇನು?

error: Content is protected !!