No Parking | ಬಿ.ಎಚ್.ರಸ್ತೆಯ ಈ ಭಾಗದಲ್ಲಿ ವಾಹನ ನಿಲುಗಡೆಗೆ ನಿರ್ಬಂಧ, ಎಲ್ಲೆಲ್ಲಿ ನೋ ಪಾರ್ಕಿಂಗ್? ಕಾರಣವೇನು?

No parking

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸುಗಮ ಸಂಚಾರಕ್ಕಾಗಿ ಬಿ.ಎಚ್.ರಸ್ತೆಯ ಈ ಭಾಗದಲ್ಲಿ ವಾಹನ ನಿಲುಗಡೆಗೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ (Dr.R.Selvamani) ಆದೇಶಿಸಿದ್ದಾರೆ.
ಕಾರಣಗಳೇನು?
ಶಿವಮೊಗ್ಗ ನಗರ ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಎಚ್.ರಸ್ತೆಯಿಂದ ಬಾಪೂಜಿನಗರ- ಟ್ಯಾಂಕ್ ಮೊಹಲ್ಲಾ ಕಡೆಗೆ ಹೋಗುವ ರಸ್ತೆಯಲ್ಲಿ ಸರ್ಕಾರಿ ಪ್ರೌಢಶಾಲೆ, ಪ.ಪೂ.ಕಾಲೇಜು ಮತ್ತು ಪ್ರ.ದ.ಕಾಲೇಜು ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಓಡಾಟ ಹಾಗೂ ಜಿಲ್ಲಾಡಳಿತದಿಂದ ನಡೆಯುವ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳ ಮೆರವಣಿಗೆ ನಡೆಯುವುದರಿಂದ ವಾಹನ ದಟ್ಟಣೆ ಹೆಚ್ಚಾಗಿ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ‌ ಕಾರಣದಿಂದ ರಸ್ತೆಯಲ್ಲಿನ ವಾಹನ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿ ಕೆಳಕಂಡಂತೆ ಆದೇಶ ನೀಡಿರುತ್ತಾರೆ.

READ | ಶಿವಮೊಗ್ಗದಲ್ಲಿ ಅನಧಿಕೃತ ರೈಲ್ವೆ ಟಿಕೆಟ್ ಬುಕಿಂಗ್ ಗ್ಯಾಂಗ್ ಪತ್ತೆ, ಮೂವರು ಅರೆಸ್ಟ್, ಎಲ್ಲೆಲ್ಲಿ ದಾಳಿ?

ವಾಹನಗಳ ನಿಲುಗಡೆ ನಿಷೇಧಿತ ಸ್ಥಳ (ನೋ ಪಾರ್ಕಿಂಗ್)
ಬಿ.ಎಚ್.ರಸ್ತೆಯಿಂದ ಬಾಪೂಜಿ ನಗರ- ಟ್ಯಾಂಕ್ ಮೊಹಲ್ಲಾ ಕಡೆಗೆ ಹೋಗುವ ರಸ್ತೆಯ (ಮೀನಾಕ್ಷಿ ಭವನದ ಎದುರುಗಡೆ) ಬಿ.ಎಚ್.ರಸ್ತೆಯ ಕಡೆಯಿಂದ ಬಲಭಾಗದಲ್ಲಿ ಟಿ.ಜಿ.ನಾರಾಯಣ ಲೇಔಟ್ 2ನೇ ಕ್ರಾಸ್ ವರೆಗೆ ಎಲ್ಲ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.
ವಾಹನಗಳ ನಿಲುಗಡೆ ಸ್ಥಳ (ಪಾರ್ಕಿಂಗ್)
ಬಿ.ಎಚ್. ರಸ್ತೆಯಿಂದ ಬಾಪೂಜಿ ನಗರ- ಟ್ಯಾಂಕ್ ಮೊಹಲ್ಲ ಕಡೆಗೆ ಹೋಗುವ ರಸ್ತೆಯ ಸರ್ಕಾರಿ ಪ್ರೌಢ ಶಾಲೆ ಕಾಂಪೌಂಡ್‍ಗೆ ಹೊಂದಿಕೊಂಡಂತೆ (ಮೀನಾಕ್ಷಿಭವನದ ಎದುರುಗಡೆ) ಬಿ.ಎಚ್.ರಸ್ತೆಯ ಕಡೆಯಿಂದ ಎಡಭಾಗದಲ್ಲಿ ಟಿ.ಜಿ.ನಾರಾಯಣ ಲೇಔಟ್ 2ನೇ ಕ್ರಾಸ್‍ವರೆಗೆ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗೇಟ್‍ವರೆಗೆ) ದ್ವಿಚಕ್ರ ಹಾಗೂ ಕಾರು ವಾಹನಗಳ ನಿಲುಗಡೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ಸೂಚಿಸಿರುತ್ತಾರೆ.

Shimoga airport | ಕೂಲಿಕಾರ್ಮಿಕನ ವಿಮಾನ ಪ್ರಯಾಣದ ಕನಸು ನನಸು ಮಾಡಿದ ಶಿವಮೊಗ್ಗ ಏರ್‍ಪೋರ್ಟ್, ಮೊದಲ ಪ್ರಯಾಣದ ಬಗ್ಗೆ ಹೇಳಿದ್ದೇನು?

error: Content is protected !!