Surveyor Recruitment | ರಾಜ್ಯದಲ್ಲಿ ಸರ್ವೇಯರ್’ಗಳ ನೇಮಕಕ್ಕೆ ಕಂದಾಯ ಸಚಿವರ ಸೂಚನೆ, ಎಷ್ಟು ಹುದ್ದೆಗಳ ಭರ್ತಿ?

surveyor

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸರ್ವೇಯರ್ ಗಳ ಕೊರತೆ ಹೆಚ್ಚಿದೆ. ಆದ್ದರಿಂದ, ಸರ್ವೇ ಇಲಾಖೆ ವತಿಯಿಂದ 2000 ಲೈಸೆನ್ಸ್ಡ್ ಸರ್ವೇಯರ್ ಮತ್ತು 354 ಸರ್ಕಾರಿ ಸರ್ವೇಯರ್ ನೇಮಕಕ್ಕೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಸೂಚಿಸಿದರು.

READ | ರಾಜ್ಯದಲ್ಲೇ ಮೊದಲ ಪ್ರಯತ್ನ, ಶಿವಮೊಗ್ಗದಲ್ಲಿ ಕೆ.ಎ.ದಯಾನಂದ ಐಎಎಸ್ ವಾಚನಾಲಯ, ಆಯ್ಕೆ ಹೇಗೆ? ಇಲ್ಲಿದೆ ಕಂಪ್ಲೀಟ್ ವರದಿ

ಬುಧವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಲಾಗದ್ದ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಗೆ ಅಗತ್ಯವಾದ ಸರ್ವೇಯರ್ ಗಳನ್ನು ಅಕ್ಕಪಕ್ಕದ ಜಿಲ್ಲೆಯಿಂದ ಒದಗಿಸಲು ಹಾಗೂ ಹೊಸದಾಗಿ ನೇಮಕಗೊಂಡ ಸರ್ವೇಯರ್ ನಿಯೋಜಿಸುವಂತೆ ಇಲಾಖೆ ಆಯುಕ್ತರಿಗೆ ತಿಳಿಸಿದ್ದೇನೆ. 1500 ರಿಂದ 1700 ಗ್ರಾಮ ಲೆಕ್ಕಿಗರನ್ನು ನೇಮಕ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು.

Market news Logo

ಸಬ್ ರಿಜಿಸ್ಟ್ರಾರ್ ಕಚೇರಿ ಸ್ಥಳಾಂತರ, ಈ ಕಚೇರಿಗೆ ಸಿಎ ನಿವೇಶನ ಮಂಜೂರಾತಿ, ತಹಶೀಲ್ದಾರ್ ಕಚೇರಿ ಮೂಲಸೌಕರ್ಯ ಅಭಿವೃದ್ದಿ, ಹಕ್ಕುಪತ್ರ ವಿತರಣೆ, ರುದ್ರಭೂಮಿಗೆ ಜಾಗ, ಗೋಶಾಲೆ ನಿರ್ಮಾಣದ ಕುರಿತು ಮನವಿ ಸಲ್ಲಿಸಿದರು.
ಎಸ್.ಎನ್.ಚನ್ನಬಸಪ್ಪ, ಶಾಸಕ

ಇ-ಆಫೀಸ್ (e-Office) ಅನುಷ್ಠಾನ
ಆಡಳಿತದಲ್ಲಿ ವೇಗ ಮತ್ತು ಪಾರದರ್ಶಕತೆ ತರಲು ಹಾಗೂ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಇ-ಆಫೀಸ್ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ತಹಶೀಲ್ದಾರ್ ಕಚೇರಿಯಿಂದ ಮೇಲು ಹಂತದ ಕಚೇರಿವರೆಗೆ ಜಾರಿಗೆ ತರಬೇಕು. ಇಂದು ಶಿವಮೊಗ್ಗ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದ ವೇಳೆ ಇ-ಆಫೀಸ್ ಪರಿಣಾಕಾರಿಯಾಗಿ ಜಾರಿಯಾಗದ ಬಗ್ಗೆ ಗಮನಿಸಿದ್ದೇನೆ. ಜನಪರವಾದ ಮತ್ತು ವೇಗದ ಸೇವೆ ನೀಡಲು ಇ-ಆಫೀಸ್ ಅತ್ಯವಶ್ಯವಾಗಿದ್ದು ಜಿಲ್ಲಾಧಿಕಾರಿ ಇನ್ನು 15 ದಿನಗಳಲ್ಲಿ ಅನುಷ್ಠಾನಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ ಎಂದರು.
ತಾರತಮ್ಯ ಸರಿಪಡಿಸಲು ಕ್ರಮ
ನೋಂದಣಿ ಇಲಾಖೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಮಾತನಾಡಿದ ಸಚಿವರು, ಇಲಾಖೆಯಲ್ಲಿ ಸುಮಾರು ಐದು ವರ್ಷಗಳಿಂದ ಮಾರುಕಟ್ಟೆ ಬೆಲೆ ಪರಿಷ್ಕರಣೆಯಾಗಿರಲಿಲ್ಲ. ಗೈಡೆನ್ಸ್ ದರ ಮತ್ತು ಮಾರುಕಟ್ಟೆ ದರಕ್ಕೆ ಸುಮಾರು ನಾಲ್ಕು ಪಟ್ಟು ವ್ಯತ್ಯಾಸವಿದೆ. ಗೈಡೆನ್ಸ್ ದರಕ್ಕಿಂತ ಮಾರುಕಟ್ಟೆ ದರ 3 ರಿಂದ 4 ನಾಲ್ಕು ಹೆಚ್ಚಿದೆ. ಈ ತಾರತಮ್ಯ ಸರಿಪರಿಸುವ ಪ್ರಕ್ರಿಯೆ ನಡೆಯುತ್ತಿದೆ.

READ | ಶಿವಮೊಗ್ಗದಲ್ಲಿ ಅನಧಿಕೃತ ರೈಲ್ವೆ ಟಿಕೆಟ್ ಬುಕಿಂಗ್ ಗ್ಯಾಂಗ್ ಪತ್ತೆ, ಮೂವರು ಅರೆಸ್ಟ್, ಎಲ್ಲೆಲ್ಲಿ ದಾಳಿ?

ಮಾರುಕಟ್ಟೆ ದರವನ್ನು ಪರಿಷ್ಕರಿಸಲಾಗಿದ್ದು, ಆಕ್ಷೇಪಣೆಗಳಿಗೆ ಆಹ್ವಾನ ನೀಡಲಾಗಿದೆ. ಈ ಕುರಿತು ಆಕ್ಷೇಪಣೆಗಳನ್ನು ಜನರು ಸಲ್ಲಿಸಬಹುದು. ನೋಂದಣಿ ಕಚೇರಿಯಲ್ಲಿ ಸರ್ವರ್ ಅಲ್ಲ ಬದಲಾಗಿ ನೆಟ್ ವರ್ಕ್ ಸಮಸ್ಯೆ ಇದೆ.
ಸಚಿವರು ಗ್ರಾಮ ಲೆಕ್ಕಿಗರು, ಆರ್.ಐ ಸೇರಿದಂತೆ ಅಧಿಕಾರಿ, ಸಿಬ್ಬಂದಿ ವರ್ಗದಿಂದ ಮುಕ್ತವಾಗಿ ಸಲಹೆಗಳನ್ನು ಮತ್ತು ಮನವಿಗಳನ್ನು ಸ್ವೀಕರಿಸಿದರು.
ಸಭೆಯಲ್ಲಿ ಶಾಸಕಿ ಶಾರದಾ ಪೂರ್ಯಾನಾಯ್ಕ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಠಾರಿಯಾ, ಕಂದಾಯ ಇಲಾಖೆ ಆಯುಕ್ತರಾದ ಪೆÇಮ್ಮಲ ಸುನೀಲ್ ಕುಮಾರ್, ಭೂಮಾಪನ ಇಲಾಖೆ ಆಯುಕ್ತರಾದ ಜೆ.ಮಂಜುನಾಥ್, ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಿ ವಸಂತಕುಮಾರ್, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

Gruha Jyothi scheme | ಗೃಹ ಜ್ಯೋತಿ ಯೋಜನೆಗೆ ನೋಂದಣಿ ಹೇಗೆ, ಯಾರಿಗೆ ಯೋಜನೆ ಲಾಭ? ಏನೆಲ್ಲ ಷರತ್ತುಗಳಿವೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

error: Content is protected !!