Jog | ಈಜಲು ಹೋದ ಕೃಷಿ ಅಧಿಕಾರಿ, ಬ್ಯಾಂಕ್ ಉದ್ಯೋಗಿ ನೀರು ಪಾಲು, ಹೇಗಾಯ್ತು ಘಟನೆ?

Crime news

 

 

ಸುದ್ದಿ ಕಣಜ.ಕಾಂ ಸಾಗರ
SAGAR: ಈಜಲು ಹೋದ ಇಬ್ಬರು ನೀರುಪಾಲಾದ ಘಟನೆ ತಾಲೂಕಿನ ಜೋಗ ಸಮೀಪದ ವಡನ್‌ಬೈಲ್‌ ಬಳಿ ಭಾನುವಾರ ಸಂಭವಿಸಿದೆ.
ಕೃಷಿ ಅಧಿಕಾರಿ ಕೃಷ್ಣ ಕುಮಾರ್‌ (36), ಐಡಿಎಫ್‌ಸಿ ಬ್ಯಾಂಕ್‌ ಕಲೆಕ್ಟರ್ ಅರುಣ್‌ (28) ಎಂಬುವವರು ಮೃತಪಟ್ಟಿದ್ದಾರೆ.

READ |  ಬೆಂಗಳೂರಿನಿಂದ ಹಲವು ರೈಲುಗಳು ರದ್ದು, ಕೆಲವೊಂದರ ಸಮಯ ಬದಲಾವಣೆ, ಇಲ್ಲಿದೆ ಪೂರ್ಣ ಮಾಹಿತಿ

ಹೇಗೆ ನಡೀತು ಘಟನೆ?
ಕುಟುಂಬ ಸಹಿತ ಪ್ರವಾಸಕ್ಕೆ ಹೋಗಿದ್ದಾರೆ. ಆಗ ಈಜಲೆಂದು ಕೃಷಿ ಅಧಿಕಾರಿ ಮತ್ತು ಖಾಸಗಿ ಬ್ಯಾಂಕ್​ ಕಲೆಕ್ಟರ್ ನೀರು ಪಾಲಾಗಿದ್ದಾರೆ.
ಕೃಷ್ಣ ಕುಮಾರ್ ಮತ್ತು ಅರುಣ್ ಅವರ ಕುಟುಂಬಗಳು ಒಂದೇ ಕಾರಿನಲ್ಲಿ ಪ್ರವಾಸಕ್ಕೆಂದು ತೆರಳಿದ್ದರು. ಜೋಗ ವೀಕ್ಷಣೆ ನಂತರ ದಾರಿ‌ ಮಧ್ಯೆ ‌ಇರುವ ವಡನ್ ಬೈಲ್ ರಸ್ತೆಯಲ್ಲಿರುವ ದೇವಿಗುಂಡಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಕಾರ್ಗಲ್ ಸಬ್ ಇನ್ ಸ್ಪೆಕ್ಟರ್ ಹೊಳೆಬಸಪ್ಪ, ಸಿಬ್ಬಂದಿ ನೀರು ಪಾಲಾಗಿರುವ ಇಬ್ಬರನ್ನು ಕೂಡಲೇ ಮೇಲೆತ್ತಿದ್ದಾರೆ. ಆದರೆ, ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಕಾರ್ಗಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!