ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಾಚೇನಹಳ್ಳಿ ಇಂಡಸ್ಟ್ರೀಯಲ್ ಏರಿಯಾದಲ್ಲಿ ರಿಪೇರಿ ಕಾರ್ಯ ವೇಳೆ ವಿದ್ಯುತ್ ಕಂಬ ಹತ್ತಿದ್ದ ಲೈನ್ ಮ್ಯಾನ್ ಭಾನುವಾರ ಮೃತಪಟ್ಟಿದ್ದಾರೆ.
ನಲ್ಲೂರಿನ ಕಿರಣ್(29) ಮೃತರು. ವಿದ್ಯುತ್ ಕಂಬವನ್ನು ಹತ್ತಿದ್ದು, ಆಗ ವಿದ್ಯುತ್ ಶಾಕ್ ತಗುಲಿದೆ. ತಂತಿಯಲ್ಲಿ ವಿದ್ಯುತ್ ಪ್ರಸರಣ ಹೇಗಾಯಿತು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಮತ್ತೊಬ್ಬ ಲೈನ್ ಮ್ಯಾನ್ ವೊಬ್ಬರಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಜೋರು ಶಬ್ದ ಕೇಳಿ ಜಮಾಯಿಸಿದ ಜನ
ರಿಪೇರಿ ಮಾಡುವುದಕ್ಕೆಂದು ಕಿರಣ್ ಎಂಬುವವರು ಕಂಬದ ಮೇಲೆ ಹತ್ತಿದ್ದು, ಜೋರು ಶಬ್ದ ಕೇಳಿಬಂದಿದೆ. ಆಗ ಜನರು ಅಲ್ಲಿಗೆ ಓಡಿಬಂದಿದ್ದಾರೆ. ತಕ್ಷಣ ಆತನನ್ನು ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಮೃತಪಟ್ಟಿದ್ದಾರೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.