Beauty Competition  | ತಾರೆ ನೀ ಮಿನುಗು ರಾಜ್ಯಮಟ್ಟದ ಅವಾರ್ಡ್ ಕಾರ್ಯಕ್ರಮ, ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಸುವರ್ಣ ಅವಕಾಶ

MEGHA

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೆಬಿಜೆ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಓಬಿಎಂ ಈವೆಂಟ್ಸ್ ವತಿಯಿಂದ ದಾವಣಗೆರೆಯ ಪಂಜುರ್ಲಿ ಹೋಟೆಲ್ ನಲ್ಲಿ ಡಿಸೆಂಬರ್ 3ರಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ತಾರೆ ನೀ ಮಿನುಗು ಎಂಬ ಬೃಹತ್ ರಾಜ್ಯಮಟ್ಟದ ಅವಾರ್ಡ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆ ಕಾರ್ಯದರ್ಶಿ ಹಾಗೂ ಓಬಿಎಂ ಈವೆಂಟ್ಸ್ ಸಂಸ್ಥಾಪಕ ವ್ಯವಸ್ಥಾಪಕ ನಿರ್ದೇಶಕಿ ಮೇಘಾ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಒಬಿಎಂ ಲಿಟಲ್ ಪ್ರಿನ್ಸ್, ಮಿಸ್ ಟೀನ್, ಮಿಸ್ ಮತ್ತು ಮಿಸಸ್ (ಸೀಸನ್ 2) ಎಂಬ ವಿಭಾಗಗಳಿಗೆ ರಾಜ್ಯಮಟ್ಟದ ಸೌಂದರ್ಯ ಸ್ಪರ್ಧೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

READ | ಶಿವಮೊಗ್ಗದಲ್ಲಿ‌ ಮಹಾ ಮೋಸದ ಜಾಲ‌ ಪತ್ತೆ, ಬ್ಯಾಂಕ್ ಗಳನ್ನೇ ಯಾಮಾರಿಸಿ ಲಕ್ಷಾಂತರ ದೋಖಾ!

ಆಯ್ಕೆ ವಿಧಾನ

  1. ಆಯ್ಕೆ ಬಯಸಿ ಬಂದ ಪ್ರತಿಯೊಬ್ಬರಿಗೆ ಉಚಿತ ಆಡಿಶನ್ ಇರುತ್ತದೆ.
  2. ಫಿನಾಲೆಗೆ ಆಯ್ಕೆಯಾದವರಿಗೆ ಮೇಕಪ್, ಹೇರ್ ಸ್ಟೈಲ್, ಒನ್ ಡೈಸ್‍ಡ್ ಗ್ರೂಮಿಂಗ್ ಮುಂತಾದವುಗಳನ್ನು ಸಂಸ್ಥೆಯು ಒದಗಿಸುತ್ತದೆ.
  3. ಸೌಂದರ್ಯ ಸ್ಪರ್ಧೆಯಲ್ಲಿ ಒಂದೊಂದು ವಿಭಾಗಕ್ಕೆ 15 ರಿಂದ 20 ಸ್ಪರ್ಧಾಳುಗಳನ್ನು ಫಿನಾಲೆಗೆ ಆಯ್ಕೆ ಮಾಡಿಕೊಳ್ಳಲಾಗುವುದು.
  4. ಫಿನಾಲೆಯಲ್ಲಿ ಪ್ರಮುಖ 10ರ ಗುಂಪಿನಲ್ಲಿ ಆಯ್ಕೆಯಾದ ಸದಸ್ಯರಿಗೆ ನೇರವಾಗಿ ರಾಷ್ಟ್ರ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ (ಬೂಟಿ ಪೆಜೆಂಟ್) ಭಾಗವಹಿಸಲುಅವಕಾಶ ನೀಡಲಾಗುವುದು.
  5. ನಾಲೆಯಲ್ಲಿ ಆಯ್ಕೆಯಾದ ಸ್ಪರ್ಧಾಳುಗಳಿಗೆ ವಿವಿಧ ಟಿ.ವಿ. ಶೋಗಳು, ಧಾರವಾಹಿಗಳು, ಚಲನಚಿತ್ರಗಳಲ್ಲಿ ಭಾಗವಹಿಸಲು ಅಕಾಡೆಮಿಯಿಂದ ಅವಕಾಶಗಳನ್ನು ನೀಡಲಾಗುವುದು.

one click many news logo

ವಿವಿಧ ಕ್ಷೇತ್ರಗಳಾದ ಸಮಾಜ ಸೇವೆ, ಶಿಕ್ಷಣ, ವಿಶೇಷ ಶಿ, ಆರೋಗ್ಯ, ಸಂಗೀತ, ವಾದನ, ಕೃಷಿ, ಸಾಹಿತ್ಯ, ಸಂಶೋಧನೆ, ವಿಜ್ಞಾನ, ಕರಾಟೆ, ಸಿನಿಮಾ, ಫೋಟೋಗ್ರಾಫಿ ಮುಂತಾದ ಕ್ಷೇತ್ರಗಳಲ್ಲಿ ಸಾಧನೆಗೈದ ರಾಜ್ಯದ 50 ಸಾಧಕರುಗಳನ್ನು ಪುರಸ್ಕರಿಸಲಾಗುವುದು ಎಂದು ತಿಳಿಸಿದರು.
ಮೇಲ್ಕಾಣಿಸಿದ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ, ಅವರನ್ನು ದೂರವಾಣಿ ಮೂಲಕ ಸಂಪರ್ಕಿಸುವುದರೊಂದಿಗೆ ಅವರ ಸಾಧನೆಗಳ ಕುರಿತ ವಿವರಗಳನ್ನು ತಿಳಿದನಂತರ ನಮ್ಮ ಆಯ್ಕೆ ಸಮಿತಿ ಕಳಿಸಿಕೊಡಲಾಗುತ್ತದೆ. ನಂತರದಲ್ಲಿ ಅವರ ಆಯ್ಕೆ ಪೂರ್ಣವಾದ ಮೇಲೆ ಅವರಿಗೆ ಸಂಸ್ಥೆ ಕಡೆಯಿಂದ ಮತ್ತೊಮ್ಮೆ ಕರೆಮಾಡಿ ತಿಳಿಸಲಾಗುವುದು. ಪ್ರತಿಯೊಬ್ಬ ಸಾಧಕರಿಗೂ ಇದೇ ರೀತಿಯ ನಿಯಮಾವಳಿಗಳು ಅನ್ವಯವಾಗಲಿವೆ.
“ತಾರೆ ನೀ ಮಿನುಗು” ಅವಾರ್ಡ್ ಕಾರ್ಯಕ್ರಮಕ್ಕೆ ವಿವಿಧ ಸಿನಿರು ತಾರೆಯರು, ನಾಡಿನ ಹಿರಿಯರು, ಬಿಸಿನೆಸ್ ವ್ಯಕ್ತಿಗಳು, ರಾಜಕಾರಣಿಗಳು ಇನ್ನೂ ಮುಂತಾದ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಮಾಹಿತಿಗಾಗಿ 97397448550, 81058136921, 7483521547 ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ.

Shimoga Railway station | ರೈಲ್ವೆ ನಿಲ್ದಾಣ ಸಮೀಪ ಭಯ ಹುಟ್ಟಿಸಿದ ಬಾಕ್ಸ್, ಉಪ್ಪಿನ ಹಿಂದಿನ ರಹಸ್ಯ ಬಿಚ್ಚಿಟ್ಟ ಎಸ್.ಪಿ, ಉಪ್ಪು ತಂದವರಿಗೆ ನೀರು ಕುಡಿಸಿದ ಖಾಕಿ

error: Content is protected !!