Protest | ಭದ್ರಾವತಿಯ ಈ‌ ಆಸ್ಪತ್ರೆಗೆ ಸಮಯಕ್ಕೆ ಸರಿಯಾಗಿ ವೈದ್ಯರೇ ಬರಲ್ಲ

JDU

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಡಿಎಚ್ಓ ಕಚೇರಿ ಆವರಣದಲ್ಲಿ ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ನೇತೃತ್ವದಲ್ಲಿ ಗುರುವಾರ ಧರಣಿ ಸತ್ಯಾಗ್ರಹ ಮಾಡಲಾಯಿತು.

READ | ಪೊಲೀಸರಿಂದ ವಿದ್ಯಾರ್ಥಿಗಳಿಗೆ ವಿನೂತನ ‘ತೆರೆದ ಮನೆ’ ಕಾರ್ಯಕ್ರಮ, ಏನಿದರ‌ ಪ್ರಯೋಜನ?

ಶಶಿಕಾಂತ್ ಗೌಡರ ಆರೋಪ ಮತ್ತು ಬೇಡಿಕೆಗಳೇನು?

  1. ಭದ್ರಾವತಿ ತಾಲೂಕಿನ ಉಜ್ಜನೀಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಮತ್ತು ಸಿಬ್ಬಂದಿ ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗುತ್ತಿಲ್ಲ.
  2. ಬೆಳಗ್ಗೆ 10 ಗಂಟೆ ಅಥವಾ 11 ಗಂಟೆಯಾದರೂ ವೈದ್ಯರು ಆಸ್ಪತ್ರೆಗೆ ಬರುವುದಿಲ್ಲ. ಈ ಹಿಂದೆಯೂ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ತನಿಖೆ ನಡೆಸಬೇಕು ಎಂದು ನಾವು ದೂರು ಸಲ್ಲಿಸಿದ್ದೆವು. ಆದರೂ ಕೂಡ ಇದುವರೆಗೂ ಯಾವುದೇ ಕ್ರಮ ತೆಗೆದು ಕೊಂಡಿಲ್ಲ. ಇದಕ್ಕೆ ಸಾಕ್ಷಿಯಾಗಿ ವೀಡಿಯೋ ಚಿತ್ರೀಕರಣ ಕೂಡ ನಾವು ನೀಡಿದ್ದೆವು.
  3. ಕರ್ತವ್ಯ ಲೋಪ ಎಸಗಿರುವ ಭದ್ರಾವತಿ ತಾಲೂಕು ಆರೋ ಗ್ಯಾಧಿಕಾರಿ ಹಾಗೂ ಹೊಸಮನೆ, ಅಶ್ವತ್ಥ ನಗರ, ಉಜ್ಜಿನೀಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಸೂಕ್ತ ತನಿಖೆ ನಡೆಸಬೇಕು.

ಡಿಎಸ್‌ಎಸ್ ಜಿಲ್ಲಾ ಸಂಚಾಲಕಿ ಸುನೀತಾ ರಾಜ್, ರಶ್ಮಿ, ವೆಂಕಟೇಶ್ ಉಪಸ್ಥಿತರಿದ್ದರು.

error: Content is protected !!