Shivamogga police | ಪೊಲೀಸರಿಂದ ವಿದ್ಯಾರ್ಥಿಗಳಿಗೆ ವಿನೂತನ ‘ತೆರೆದ ಮನೆ’ ಕಾರ್ಯಕ್ರಮ, ಏನಿದರ ಪ್ರಯೋಜನ?

Tereda mane police

 

 

ಸುದ್ದಿ ಕಣಜ.ಕಾಂ ಭದ್ರಾವತಿ
BHADRAVATHI: ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಭದ್ರಾವತಿಯ ಉಂಬ್ಳೆಬೈಲ್ ರಸ್ತೆಯ ಸರ್ಕಾರಿ ಮಹಿಳಾ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ತೆರೆದ ಮನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳಿಗೆ ಪೊಲೀಸ್ ಠಾಣೆಯ ಕಾರ್ಯವೈಖರಿಯ ಬಗ್ಗೆ ಮಕ್ಕಳ ಹಕ್ಕುಗಳು, ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು, ಮಕ್ಕಳು ತಮ್ಮ ಸುರಕ್ಷತೆಗಾಗಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು, ಸಾಮಾಜಿಕ ಜಾಲತಾಣದ ಸುರಕ್ಷಿತ ಬಳಕೆ, ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮ ಪಾಲನೆ, ತುರ್ತು ಮತ್ತು ಅಗತ್ಯ ಸಂದರ್ಭದಲ್ಲಿ ERSS -112 ಸಹಾಯವಾಣಿ ಬಳಕೆಯ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ಶಾಲೆಯ ವಿಧ್ಯಾರ್ಥಿಗಳು ಮತ್ತು ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯ ಪಿಎಸ್ಐ ರಮೇಶ್, ಸಿಬ್ಬಂದಿ ಉಪಸ್ಥಿತರಿದ್ದರು.

ಸ್ವಯಂ ಸೇವಕರಾಗಿ ಕೆಲಸ ಮಾಡಿದವರಿಗೆ ಸನ್ಮಾನ

HIndu mahasabha

SHIMOGA: ಪೊಲೀಸ್ ಇಲಾಖಾ ವತಿಯಿಂದ ಭದ್ರಾವತಿಯ ರೋಟರಿ ಕ್ಲಬ್ ಸಭಾಂಗಣದಲ್ಲಿ 2023ನೇ ಸಾಲಿನ ಭದ್ರಾವತಿ ಹಿಂದೂ ಮಹಾಸಭಾ ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆಯ ಬಂದೋಬಸ್ತ್ ಸಂದರ್ಭದಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದ ನಾಗರೀಕ ಬಂದೋಕು ತರಬೇತಿ ಸಂಘದ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು.
ಎಸ್.ಪಿ ಜಿ.ಕೆ.ಮಿಥುನ್ ಕುಮಾರ್ ಅವರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಿ ಶ್ಲಾಘಿಸಿದರು. ನಾಗರಿಕ ಬಂದೂಕು ತರಬೇತಿ ಸಂಘದ ಸದಸ್ಯರುಗಳಿಗೆ ಪೊಲೀಸ್ ಇಲಾಖಾ ವತಿಯಿಂದ ಪ್ರಶಂಸನಾ ಪತ್ರವನ್ನು ನೀಡಿ, ಅವರ ಸೇವೆಯನ್ನು ಶ್ಲಾಘಿಸಿ ಅಭಿನಂದನೆಗಳನ್ನು ಸಲ್ಲಿಸಿದರು.
ಈ ವೇಳೆ ಮಾತನಾಡಿದ ಎಸ್.ಪಿ, ಭದ್ರಾವತಿ ಹಿಂದೂ ಮಹಾಸಭಾ ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆಯ ಬಂದೋಬಸ್ತ್ ಸಂದರ್ಭದಲ್ಲಿ ನೀವು ಸಲ್ಲಿಸಿದ ಸೇವೆಯು ವಿಶೇಷ ಮತ್ತು ಅಮೂಲ್ಯವಾಗಿದ್ದಾಗಿರುತ್ತದೆ. ಭದ್ರಾವತಿ ಹಿಂದೂ ಮಹಾಸಭಾ ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆಯ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆಗೊಂಡ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳು ಮತ್ತು ಹೋಂ ಗಾರ್ಡ್ ಸಿಬ್ಬಂದಿಗೆ ಫುಡ್ ಪ್ಯಾಕೇಟ್ (ಆಹಾರ ಪೊಟ್ಟಣ) ಗಳನ್ನು ಸರಿಯಾದ ಸಮಯದಲ್ಲಿ ತಲುಪಿಸುವಲ್ಲಿ ನೀವುಗಳು ಮುತುವರ್ಜಿಯಿಂದ ಕೆಲಸ ಮಾಡಿದ್ದು, ನಿಮ್ಮ ಪಾತ್ರವು ಪ್ರಮುಖವಾಗಿರುತ್ತದೆ ಎಂದರು.
ಮೆರವಣಿಗೆಯ ಸಂದರ್ಭದಲ್ಲಿ ಜನಸಂದಣಿ ತಡೆಯುವಲ್ಲಿ ಮತ್ತು ನೂಕುನುಗ್ಗಲನ್ನು ನಿಯಂತ್ರಿಸುವಲ್ಲಿ ನೀವುಗಳು ವ್ಯವಸ್ಥಿತವಾಗಿ ಮತ್ತು ಮುಂಚೂಣಿಯಲ್ಲಿ ಕೆಲಸ ಮಾಡಿದ್ದು, ಅತ್ಯಂತ ಶ್ಲಾಘನೀಯವಾಗಿರುತ್ತದೆ. ಪೊಲೀಸ್ ಇಲಾಖಾ ವತಿಯಿಂದ ನಾಗರಿಕ ಬಂದೂಕು ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಹಾಗೂ ಈ ತಿಂಗಳ 25ರೊಳಗೆ ಅರ್ಜಿ ನಮೂನೆಗಳನ್ನು ಸ್ವೀಕರಿಸಲಿದ್ದು, ಆಸಕ್ತಿಯುಳ್ಳವರು ಅರ್ಜಿ ಸಲ್ಲಿಸಿ ತರಬೇತಿಯಲ್ಲಿ ಪಾಲ್ಗೊಳ್ಳುವುದು ಎಂದು ಹೇಳಿದರು.
ನಾಗರಿಕ ಬಂದೂಕು ತರಬೇತಿಯನ್ನು ಪ್ರಾಥಮಿಕವಾಗಿ ಶಿವಮೊಗ್ಗದಲ್ಲಿ ನಡೆಸಿಲಿದ್ದು, ಮುಂದೆ ಭದ್ರಾವತಿ ಸೇರಿದಂತೆ ಎಲ್ಲ ತಾಲ್ಲೂಕುಗಳಲ್ಲಿಯೂ ನಡೆಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಭದ್ರವತಿ ಉಪ ವಿಭಾಗದ ಡಿವೈಎಸ್.ಪಿ ನಾಗರಾಜ್, ಭದ್ರಾವತಿ ಗ್ರಾಮಾಂತರ ಠಾಣೆ ಪಿಐ ಜಗದೀಶ್, ಪೇಪರ್ ಟೌನ್ ಪೊಲೀಸ್ ಠಾಣೆ ಪಿಐ ನಾಗಮ್ಮ, ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆ ಪಿ.ಎಸ್.ಐ ರಮೇಶ್, ಭದ್ರಾವತಿ ಸಂಚಾರ ಪೊಲೀಸ್ ಠಾಣೆ ಪಿ.ಎಸ್.ಐ ಶಾಂತಲಾ, CRTCಯ ರವಿ, ಶ್ರೀಕಾಂತ್ ಉಪಸ್ಥಿತರಿದ್ದರು.

error: Content is protected !!