ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಂಗಳೂರು (Mangalore) ಪ್ರತಿಭೆ, ಗ್ಲಾಮರ್ ಪಾತ್ರಗಳ ಮೂಲಕವೇ ಖ್ಯಾತಿ ಪಡೆದಿರುವ ನಟಿ, ನಿರ್ದೇಶಕಿ ಎಸ್ತರ್ ನರೋನ್ಹಾ (Ester noronha) ನಟನೆಯ ‘ದಿ ವೆಕೆಂಟ್ ಹೌಸ್ (The Vacant House) ಚಲನಚಿತ್ರ ನ.17ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ ಎಂದು ಎಸ್ತರ್ ನರೋನ್ಹಾ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
READ |ಮೈಸೂರು ರಂಗಾಯಣದಿಂದ ನಾಟಕಗಳ ಪ್ರದರ್ಶನ, ತಪ್ಪದೇ ವೀಕ್ಷಿಸಿ, ಯಾವಾಗಿಂದ ಆರಂಭ?
“ಈಗಾಗಲೇ ನಿರ್ದೇಶನದ ಜೊತೆಗೆ ನಿರ್ಮಾಣ, ಸಂಗೀತ ನಿರ್ದೇಶನ, ನಟನೆ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದೇನೆ. ನನ್ನ ಹೊಸ ಕನಸು ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ. ದಿ ವೆಕೆಂಟ್ ಹೌಸ್ ಇದು ಹಾರರ್ ಸಿನಿಮಾವಲ್ಲ. ಖಾಲಿ ಮನೆ ಸುತ್ತ ಸಾಗುವ ಕಥೆ. ಈಗಿನ ಯುವಜನತೆಗೆ ಸಂಬಂಧಿಸಿದ ಸಿನಿಮಾವಿದು. ಪ್ರೀತಿ ಮತ್ತು ಭಾವನೆ ಎರಡನ್ನೂ ಸೇರಿಸಿ ಹೆಣೆದಿರುವ ಕಥೆ. ನೈಜ ಘಟನೆಯಾಧಾರಿತ ಚಿತ್ರವಲ್ಲ. ಸಿನಿಮಾ 1 ಗಂಟೆ 40 ನಿಮಿಷವಿದೆ” ಎಂದು ಹೇಳಿದರು.
ಹಲವು ವರ್ಷ ಸಿನಿಮಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ್ದೇನೆ. ಈ ಎಲ್ಲ ನಟನೆ ಅನುಭವಗಳನ್ನು ಕ್ರೋಡೀಕರಿಸಿ ‘ದಿ ವೇಕೆಂಟ್ ಹೌಸ್’ ಸಿನಿಮಾ ನಿರ್ದೇಶಿಸಿ ನಟಿಸಿದ್ದೇನೆ. ಜಾನೆಟ್ ನೊರೊನ್ಹಾ ಪ್ರೊಡಕ್ಷನ್ಸ್ ಅಡಿ ಸಿನಿಮಾ ನಿರ್ಮಾಣ ಮಾಡಲಾಗಿದೆ. ಇದೇ ತಿಂಗಳ 17ರಂದು ರಾಜ್ಯಾದ್ಯಂತ ಸಿನಿಮಾ ತೆರೆ ಕಾಣಲಿದೆ. ಎಲ್ಲರೂ ಚಿತ್ರವನ್ನೂ ವೀಕ್ಷಿಸಬೇಕೆಂದು ಮನವಿ.
– ಎಸ್ತರ್ ನರೋನ್ಹಾ, ದಿ ವೆಕೆಂಟ್ ಹೌಸ್ ನಟಿ
ಮಂಗಳೂರು ಸುತ್ತ ಚಿತ್ರೀಕರಣ
ಸಿನಿಮಾದ ಸ್ಯಾಂಪಲ್ಸ್ ಈಗಾಗಲೇ ಭಾರಿ ಸದ್ದು ಮಾಡುತ್ತಿವೆ. ಹಾಡುಗಳು, ಟೀಸರ್ ಗಮನ ಸೆಳೆಯುತ್ತಿವೆ. ಕನ್ನಡ ಹಾಗೂ ಕೊಂಕಣಿ ಭಾಷೆಯಲ್ಲಿ ಮೂಡಿಬಂದಿರುವ ಈ ಚಿತ್ರ ಮಂಗಳೂರಿನಲ್ಲಿ ಚಿತ್ರೀಕರಣಗೊಂಡಿದೆ. ಚಿತ್ರಕ್ಕೆ ನರೇಂದ್ರ ಗೌಡ ಛಾಯಾಗ್ರಹಣ, ವಿಜಯ್‌ರಾಜ್ ಸಂಕಲನವಿದೆ. ತನ್ನ ತಾಯಿ ಜಾನೆಟ್ ಜೆಸಿಂತಾ ನೊರೊನ್ಹಾ ನಿರ್ಮಾಪಕರಾಗಿದ್ದಾರೆ ಎಂದರು.
ಎಸ್ತರ್ ನರೋನ್ಹಾ ಬಗ್ಗೆ ನಿಮಗೆಷ್ಟು ಗೊತ್ತು?

- ಎಸ್ತರ್ ಮಂಗಳೂರಿನವರು. ಆದರೆ, ಮುಂಬೈನಲ್ಲಿ ಬೆಳೆದಿದ್ದಾರೆ. ’ಉಸಿರಿಗಿಂತ ನೀನೇ ಹತ್ತಿರ’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದರು.
- ಬಾಲಿವುಡ್ ನಟ ಅನುಪಮ್ ಖೇರ್ ನಟನಾ ಶಾಲೆಯಲ್ಲಿ ತರಬೇತಿ ಪಡೆದು ಹಿಂದಿ ಚಿತ್ರರಂಗ ಪ್ರವೇಶಿಸಿದರು.
- ಹಿಂದಿಯಷ್ಟೇ ಅಲ್ಲದೇ ತೆಲುಗು, ತುಳು ಸಿನಿಮಾಗಳಲ್ಲೂ ನಟಿಸಿ ಬಹುಭಾಷಾ ನಟಿಯಾಗಿ ಹೊರಹೊಮ್ಮಿದ್ದಾರೆ.
- ಕನ್ನಡದಲ್ಲಿ ’ನಾವಿಕ’, ’ಅತಿರಥ’, ’ನುಗ್ಗೇಕಾಯಿ’, ’ಲೋಕಲ್ ಟ್ರೈನ್, ಲಂಕೆ’ ಸೇರಿ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.