Training | ಶಿವಮೊಗ್ಗದಲ್ಲಿ ಮಸಾಜಿಸ್ಟ್ ತರಬೇತಿ ಕೋರ್ಸ್, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

Job Training

 

 

ಸುದ್ದಿ‌‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗದ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆಯಲ್ಲಿ (shivamogga ayurveda college and teaching hospital) 2023-24 ನೇ ಸಾಲಿನಲ್ಲಿ ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಯುವಕ, ಯುವತಿಯರಿಗೆ ಎರಡು ತಿಂಗಳುಗಳ ಮಸಾಜಿಸ್ಟ್ ತರಬೇತಿ ಕೋರ್ಸ್ ಗೆ ಅರ್ಜಿ ಆಹ್ವಾನಿಸಲಾಗಿದೆ.

READ |  ಪಿಎಚ್.ಸಿನಲ್ಲಿ ಉದ್ಯೋಗ ಅವಕಾಶ, ಅರ್ಜಿ ಸಲ್ಲಿಸಿ

ಎಸ್‍ಎಸ್‍ಎಲ್‍ಸಿ ತೇರ್ಗಡೆಯಾಗಿರುವ 18 ರಿಂದ 35 ವರ್ಷದೊಳಗಿನ ಪ.ಜಾತಿ 20 ಮತ್ತು ಪ.ಪಂ ದ 20 ಫಲಾನುಭವಿಗಳಿಗೆ ಭಾಗವಹಿಸಲು ಅವಕಾಶವಿರುತ್ತದೆ. ಅರ್ಜಿ ಸಲ್ಲಿಸಲು ಡಿ.18 ಕಡೆಯ ದಿನವಾಗಿರುತ್ತದೆ.
ತರಬೇತಿ ಅವಧಿಯಲ್ಲಿ ಅರ್ಹ ಫಲಾನುಭವಿಗಳಿಗೆ ಎರಡು ತಿಂಗಳ ಕಾಲ ₹5000‌ ಶಿಷ್ಯ ವೇತನವನ್ನು ನೀಡಲಾಗುವುದು. ಹೆಚ್ಚಿನ ವಿವರಗಳಿಗೆ ಪ್ರಾಚಾರ್ಯರು ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆ ಶಿವಮೊಗ್ಗ ಇವರ ಕಚೇರಿ ದೂ.ಸಂ: 08182-223230 ಅಥವಾ ಡಾ.ಪ್ರಶಾಂತ್ ಕೇಕುಡ, ಎಸ್‍ಸಿ, ಎಸ್‍ಪಿ ಮತ್ತು ಟಿಎಸ್‍ಪಿ ನೋಡಲ್ ಅಧಿಕಾರಿ ಇವರನ್ನು ಸಂಪರ್ಕಿಸಬಹುದೆಂದು ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.

error: Content is protected !!