Arrest | ತೋಟದ ಬಳಿ‌ ನಿಲ್ಲಿಸಿದ ಬೈಕ್ ಮಿಸ್ಸಿಂಗ್, 24 ಗಂಟೆಯಲ್ಲೇ ಆರೋಪಿ ಅಂದರ್

arrest

 

 

ಸುದ್ದಿ ಕಣಜ.ಕಾಂ ಭದ್ರಾವತಿ
BHADRAVATHI: ಬೈಕ್‌ ಕಳ್ಳತನ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ರಾಗಿಗುಡ್ಡದ ನಿವಾಸಿ ಪ್ರಭು ಅಲಿಯಾಸ್ ಕೊಳಿ(27) ಬಂಧಿತ ಆರೋಪಿ. ಆರೋಪಿತನಿಂದ ಹೊಳೆಹೊನ್ನೂರು ಠಾಣೆಯ 1 ಮತ್ತು ಕೋಟೆ ಠಾಣೆಯ 1 ಪ್ರಕರಣ ಸೇರಿ 2 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂದಿಸಿದ ಅಂದಾಜು ₹60,000 ಮೌಲ್ಯದ 2 ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

READ | ಬೈಕ್‌ ಥೆಫ್ಟ್ ಗ್ಯಾಂಗ್ ಅರೆಸ್ಟ್, ಬರೋಬ್ಬರಿ‌ ₹5.20 ಲಕ್ಷ ಮೌಲ್ಯದ ಬೈಕ್ ಗಳು ಸೀಜ್

ಡಿ.16ರಂದು ಮತ್ತಿಘಟ್ಟದ ನಂದೀಶ್ ಎಂಬುವವರು ದ್ವಿಚಕ್ರ ವಾಹನವನ್ನು ತಮ್ಮ ತೋಟಕ್ಕೆ ತೆಗೆದುಕೊಂಡು ಹೋಗಿದ್ದು, ತೋಟದ ಮುಂದಿನ ರಸ್ತೆಯಲ್ಲಿ ನಿಲ್ಲಿಸಿ ನೀರು ಹಾಯಿಸಿದ ನಂತರ ವಾಪಾಸ್ ಬಂದು ನೋಡಿದಾಗ ಯಾರೋ ಕಳ್ಳರು ಸ್ಕೂಟಿಯನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ಮೇರೆಗೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

error: Content is protected !!