Theft case | ಮನೆ ಕಳ್ಳತನ ಗ್ಯಾಂಗ್ ಸೆರೆ, ಲಕ್ಷ ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಸೀಜ್

Tunga nagar theft case

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತುಂಗಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಐದು ಕಳವು ಪ್ರಕರಣಗಳನ್ನು ತನಿಖಾ ತಂಡ ಬೇಧಿಸಿದ್ದು, ಆರೋಪಿಗಳನ್ನು ವಶಕ್ಕೆ ಪಡೆದಿದೆ.

Crime logoಯಾರೆನ್ನೆಲ್ಲ ಬಂಧಿಸಲಾಗಿದೆ?
ಬೆಂಗಳೂರಿನ ಮಾಗಡಿ ರಸ್ತೆ ನಿವಾಸಿ ಸಂತೋಷ್ ಅಲಿಯಾಸ್ ಎಮ್ಮೆ ಸಂತೋಷ್ (36), ಅಶೋಕನಗರ ನಿವಾಸಿ ಮಹಮದ್ ನದ್ದಿಮ್ ಅಲಿಯಾಸ್ ನದ್ದಿಮ್ ಅಲಿಯಾಸ್ ನದ್ದು (30), ಇಮ್ರಾನ್(32), ಬೊಮ್ಮನಕಟ್ಟೆ ಆಶ್ರಯ ಬಡಾವಣೆ ನಿವಾಸಿ ಕೆ.ಸುರೇಶ್(43) ಎಂಬುವವರನ್ನು ಬಂಧಿಸಲಾಗಿದೆ.
12.65 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ಆಭರಣ ಪತ್ತೆ
ತುಂಗಾನಗರ ಪೊಲೀಸ್ ಠಾಣೆಯಲ್ಲಿ ಇದೇ ವರ್ಷದಲ್ಲಿ ವರದಿಯಾದ 5 ಸ್ವತ್ತು ಕಳವು ಪ್ರಕರಣಗಳಲ್ಲಿ ಅಂದಾಜು 12.65 ಲಕ್ಷ ರೂ. ಮೌಲ್ಯದ 230 ಗ್ರಾಂ ತೂಕದ ಬಂಗಾರದ ಆಭರಣಗಳು, ಅಂದಾಜು 72 ಸಾವಿರ ರೂ. ಮೌಲ್ಯದ 1 ಕೆಜಿ 200 ಗ್ರಾಂ ಬೆಳ್ಳಿ ಆಭರಣಗಳು, 25,140 ನಗದು, ಅಂದಾಜು 10 ಸಾವಿರ ರೂ. ಹಾಗೂ ಕೃತ್ಯಕ್ಕೆ ಬಳಸಿದ ದ್ವಿ ಚಕ್ರ ವಾಹನ ಸೇರಿ ಒಟ್ಟು 13.87 ಲಕ್ಷ ರೂ. ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

READ | ತೋಟದ ಬಳಿ‌ ನಿಲ್ಲಿಸಿದ ಬೈಕ್ ಮಿಸ್ಸಿಂಗ್, 24 ಗಂಟೆಯಲ್ಲೇ ಆರೋಪಿ ಅಂದರ್

ತನಿಖಾ ತಂಡದ ಕಾರ್ಯಕ್ಕೆ ಮೆಚ್ಚುಗೆ
ಶಿವಮೊಗ್ಗ-ಎ ಉಪ ವಿಭಾಗದ ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಕಳವು ಪ್ರಕರಣಗಳಲ್ಲಿ ಕಳವಾದ ಸಾಮಗ್ರಿ ಹಾಗೂ ಆರೋಪಿತರ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರಡ್ಡಿ ಮಾರ್ಗದರ್ಶನದಲ್ಲಿ ಶಿವಮೊಗ್ಗ ಎ ಮತ್ತು ಬಿ ಉಪ ವಿಭಾಗದ ಡಿವೈಎಸ್‍ಪಿಗಳ ಮೇಲ್ವಿಚಾರಣೆಯಲ್ಲಿ ತುಂಗಾನಗರ ಠಾಣೆಯ ಪಿಐ ಬಿ.ಮಂಜುನಾಥ್ ನೇತೃತ್ವದಲ್ಲಿ ಪಿಎಸ್.ಐಗಳಾದ ಶಿವಪ್ರಸಾದ್, ಮಂಜುನಾಥ್, ರಘುವೀರ್, ಕುಮಾರ ಕೂರಗುಂದ, ದೂದ್ಯಾನಾಯ್ಕ, ಎ.ಎಸ್.ಐ. ಮನೋಹರ್, ಸಿಬ್ಬಂದಿ ಕಿರಣ್ ಮೋರೆ, ಅರುಣ್ ಕುಮಾರ, ಮೋಹನ್ ಕುಮಾರ್, ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ, ಲಂಕೇಶ್ ಕುಮಾರ್, ಕಾಂತರಾಜ್, ಅರಿಹಂತ ಶಿರಹಟ್ಟಿ, ಹರೀಶ್, ಚೇತನ ಅವರನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಈ ತಂಡವು ಪ್ರಕರಣ ಬೇಧಿಸಿದೆ. ತನಿಖಾ ತಂಡದ ಉತ್ತಮ ಕಾರ್ಯವನ್ನು ಎಸ್.ಪಿ. ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Adoption Process | ಮಕ್ಕಳಿಲ್ಲವೇ, ಚಿಂತೆ ಬೇಡ, ಇಲ್ಲಿದೆ ಪೋಷಕರ ಮಡಿಲು ತುಂಬುವ ಸರ್ಕಾರಿ ವಿಶೇಷ ದತ್ತು ಸಂಸ್ಥೆ

error: Content is protected !!