ಸುದ್ದಿ ಕಣಜ.ಕಾಂ
ತೀರ್ಥಹಳ್ಳಿ: ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ದ್ವಿಚಕ್ರ ವಾಹನಗಳನ್ನು ಪೊಲೀಸ್ ಠಾಣೆಗೆ ಸಾಗಿಸುತ್ತಿದ್ದಾಗ ಕೆಲವು ಬೈಕ್ ಗಳು ಜಾರಿ ಕೆಳಗೆ ಬಿದ್ದು ಸ್ಪಾರ್ಕ್ ಉಂಟಾಗಿ ಬೆಂಕಿ ತಗಲಿದೆ. ಪರಿಣಾಮ ಕೆಲವು ಬೈಕ್ ಗಳು ಸುಟ್ಟು ಭಸ್ಮವಾಗಿವೆ.
ಕೋಣಂದೂರು ಸಮೀಪ ಘಟನೆ ಸಂಭವಿಸಿದೆ. ನಿಷೇಧವಿರುವ ಕೋಳಿ ಅಂಕ ಆಟವನ್ನು ಆಡುವಾಗ ಖಚಿತ ಮಾಹಿತಿ ಮೇರೆಗೆ ತೀರ್ಥಹಳ್ಳಿ ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ, ಆಟದಲ್ಲಿ ತೊಡಗಿಸಿಕೊಂಡಿದ್ದವರು ಪರಾರಿಯಾಗಿದ್ದಾರೆ. ಆಗ ಪೊಲೀಸರು ಅವರ 20ಕ್ಕೂ ಹೆಚ್ಚು ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಘಟನೆಗೆ ಕಾರಣ | ವಾಹನದಲ್ಲಿ ವಶಕ್ಕೆ ಪಡೆದ ಬೈಕ್ ಸಾಗಿಸುವಾಗ ಜಾರಿ ರಸ್ತೆಯ ಮೇಲೆ ಬಿದ್ದಿವೆ. ಇದರಿಂದಾಗಿ ಉಂಟಾದ ಸ್ಪಾರ್ಕ್ ಬೆಂಕಿ ತಗಲಲು ಕಾರಣ ಎನ್ನಲಾಗಿದೆ.