Parking | ಶಿವಮೊಗ್ಗ ನಗರದ 3 ರಸ್ತೆಗಳಲ್ಲಿ ಪಾರ್ಕಿಂಗ್, ನೋ ಪಾರ್ಕಿಂಗ್ ಝೋನ್, ಇಲ್ಲಿದೆ ಪೂರ್ಣ ಮಾಹಿತಿ

No parking

 

 

ಸುದ್ದಿ‌‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ನಗರದ ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸವಳಂಗ ರಸ್ತೆಯಲ್ಲಿ ಕರ್ನಾಟಕ ಸಂಘ ಸಿಗ್ನಲ್‍ನಿಂದ ಉಷಾ ನರ್ಸಿಂಗ್ ಹೋಂವರೆಗೆ ಸುಗಮ ಸಂಚಾರ ದೃಷ್ಠಿಯಿಂದ ದ್ವಿಚಕ್ರ ಮತ್ತು ಕಾರ್‍ ಗಳ ಪಾರ್ಕಿಂಗ್‍ಗೆ ಕೆಳಕಂಡಂತೆ ಕ್ರಮ ಕೈಗೊಂಡು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅಧಿಸೂಚನೆ ಹೊರಡಿಸಿ ಕೆಳಕಂಡಂತೆ ಆದೇಶ ನೀಡಿರುತ್ತಾರೆ.

READ | ಶಿವಮೊಗ್ಗದಲ್ಲಿ ಮಸಾಜಿಸ್ಟ್ ತರಬೇತಿ ಕೋರ್ಸ್, ಯಾರೆಲ್ಲ ಅರ್ಜಿ ಸಲ್ಲಿಸಲು ಅವಕಾಶ?

ವಾಹನಗಳ ನಿಲುಗಡೆ ನಿಷೇಧಿತ ಸ್ಥಳ (ನೋ ಪಾರ್ಕಿಂಗ್)
ಬಸವೇಶ್ವರ (ಡಿವಿಎಸ್) ಸರ್ಕಲ್‍ನ ಸುತ್ತ 50 ಮೀ, ಮಹಾವೀರ ಸರ್ಕಲ್‍ನ ಸುತ್ತ 50 ಮೀ., ಶಿವಮೂರ್ತಿ ಸರ್ಕಲ್ ಸುತ್ತ 50 ಮೀ, ಅಕ್ಕಮಹಾದೇವಿ (ಉಷಾ ನರ್ಸಿಂಗ್ ಹೋಂ) ಸರ್ಕಲ್ ಸುತ್ತ 50 ಮೀ ಹಾಗೂ ಕಮಲಾ ನರ್ಸಿಂಗ್ ಹೋಂನಿಂದ ಗಾಂಧಿನಗರ ಕ್ರಾಸ್‍ವರೆಗೆ ಎಲ್ಲ ವಾಹನಗಳ ನಿಲುಗಡೆ ನಿಷೇದಿಸಲಾಗಿದೆ.
ದ್ವಿ-ಚಕ್ರ ವಾಹನಗಳ ನಿಲುಗಡೆ ಸ್ಥಳ (ಪಾರ್ಕಿಂಗ್)
ಮೋರ್ ಸೂಪರ್ ಮಾರ್ಕೇಟ್‍ನಿಂದ ಶಿವಮೊಗ್ಗ ಡ್ರಗ್ ಹೌಸ್‍ವರೆಗೆ ಎಡ ಬದಿ, ಪದ್ಮ ಜ್ಯೂವೆಲ್ಲರಿಯಿಂದ ಸುಶೋಧ ಆಸ್ಪತ್ರೆವರೆಗೆ ಎಡ ಬದಿ ಮತ್ತು ವಿಜಯ ಕಾಂಪ್ಲೇಕ್ಸ್ ನಿಂದ ಬೀಬಾ ಶಾಪ್‍ವರೆಗೆ ಬಲಬದಿ ದ್ವಿ-ಚಕ್ರ ವಾಹನಗಳ ನಿಲುಗಡೆ ಮಾಡಬಹುದಾಗಿದೆ.
ನಾಲ್ಕು ಚಕ್ರ ವಾಹನಗಳ ನಿಲುಗಡೆ ಸ್ಥಳ (ಪಾರ್ಕಿಂಗ್)
ಚನ್ನಪ್ಪ ಲೇಔಟ್ 2ನೇ ಕ್ರಾಸ್ ಯಿಂದ ಕಮಲಾ ನರ್ಸಿಂಗ್ ಹೋಂವರೆಗೆ ಎಡ ಬದಿ, ವೆಸ್ಟ್‌ ಸೈಡ್ ಕಾಂಪ್ಲೇಕ್ಸ್ (ಜಯನಗರ 2ನೇ ಪ್ಯಾರಲಲ್ ರಸ್ತೆ) ನಿಂದ ಫೈರ್ ಫಾಕ್ಸ್ ಸೈಕಲೋತ್ಸವವರೆಗೆ ಬಲಬದಿ ಕಾರ್‍ ಗಳನ್ನು ನಿಲುಗಡೆ ಮಾಡಬಹುದಾಗಿದೆ ಎಂದು ಆದೇಶದಲ್ಲಿ ಸೂಚಿಸಿರುತ್ತಾರೆ.

error: Content is protected !!