ಸುದ್ದಿ ಕಣಜ.ಕಾಂ
ಸಾಗರ: ಮಾರಿಕಾಂಬ ರಸ್ತೆಯಲ್ಲಿ ಮಹಿಳೆಯೊಬ್ಬರ ಮಾಂಗಲ್ಯ ಸರದ ದೋಚಿ ಪರಾರಿಯಾದ ಘಟನೆ ಸೋಮವಾರ ಸಂಜೆ ನಡೆದಿದೆ.
ಸ್ನೇಹಿತೆಯೊಂದಿಗೆ ಬರುವಾಗ 50 ಗ್ರಾಂ ತೂಕದ ಚಿನ್ನದ ಮಾಂಗಲ್ಯವನ್ನು ಅಪಹರಿಸಲಾಗಿದೆ. ಸುಭಾಷ್ ನಗರದ ನಿವಾಸಿ ಮಾದೇವಿ ಎಂಬುವವರ ಚಿನ್ನದ ಸರವನ್ನು ದೋಚಲಾಗಿದೆ.
ಪೇಟೆಗೆ ಹೋಗಿ ವಾಪಸ್ ಮನೆಗೆ ಬರುವಾಗ ಘಟನೆ ನಡೆದಿದೆ. ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.